ಅಯ್ಯಪ್ಪ ವ್ರತಧಾರಿಗಳಿಗೆ ಕಂಟಕ

By Kannadaprabha News  |  First Published Dec 7, 2020, 3:48 PM IST

ಅಯ್ಯಪ್ಪ ವ್ರತಧಾರಿಗಳಿಗೆ ಕಂಟಕ ಎದುರಾಗಿದೆ. ಶಬರಿಮಲೆ ಅಯ್ಯಪ್ಪ ಭಕ್ತವೃಂದ ಎದುರಸುತ್ತಿರುವ ಸಮಸ್ಯೆ ಏನು..? 


ಸುಂಟಿಕೊಪ್ಪ (ಡಿ.07):  ಕೊರೋನಾ ಮಹಾಮಾರಿಯಿಂದಾಗಿ ಕೊಡ​ಗಿ​ನಿಂದ ಶಬ​ರಿ​ಮೆ​ಲೆಗ ತೆರ​ಳು​ವ ಅಯ್ಯಪ್ಪ ವ್ರತಧಾರಿಗ​ಳ ​ಸಂಖ್ಯೆ ವಿರಳವಾಗಿದೆ.

ಸುಂಟಿಕೊಪ್ಪ ಶ್ರೀೕಪುರಂ ಅಯ್ಯಪ್ಪ ದೇವಾಲಯ, 7ನೇ ಹೊಸಕೋಟೆಯ ಮಹಾ ಗಣಪತಿ, ಗೋಪಾಲಕೃಷ್ಣ ದೇವಾಲಯ, ಕೆದಕಲ್‌ನ ಭದ್ರಕಾಳೇಶ್ವರಿ ದೇವಾಲಯ, ಬೋಯಿಕೇರಿ ಸಿದ್ದಿ ಬುದ್ಧಿ ವಿನಾಯಕ ದೇವಾಲಯ, ಕೊಡಗರಹಳ್ಳಿಯ ಬೈತೂರಪ್ಪ ಪೂವ್ವೆದಿ ಬಸವೇಶ್ವರ ದೇವಾಲಯ, ಕಮಬಿಬಾಣೆ ಶ್ರೀ ಚಾಮುಂಡೇಶ್ವರಿ ದೇವಾಲಯ, ಮಾದಾಪುರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಸಿದ್ದಿಬುದ್ಧಿ ಗಣಪತಿ ದೇವಾಲಯದಲ್ಲಿ ವರ್ಷಂಪ್ರತಿ ನವೆಂಬರ್‌, ಡಿಸೆಂಬರ್‌, ಜನವರಿ 14ರವರೆಗೆ ಮಾಹಿಯಲ್ಲಿ ಶ್ರೀ ಅಯ್ಯಪ್ಪ ವ್ರತಧಾರಿ ಭಕ್ತರು ನಿತ್ಯ ಪೂಜೆ, ಭಜನೆ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ನವೆಂಬರ್‌ ಕಳೆದು ಡಿಸೆಂಬರ್‌ ಬಂದರೂ ಕೊರೋನಾ ಭೀತಿಯಿಂದಾಗಿ ವ್ರತಧಾರಿಗಳ ಸಂಖ್ಯೆ ಕಡಿಮೆಯಾಗಿದೆ.

Latest Videos

undefined

ಶಬರಿಮಲೆ ದೇಗುಲಕ್ಕೆ ಭಕ್ತರ ಭೇಟಿ ಪ್ರಮಾಣ ಹೆಚ್ಚಳಕ್ಕೆ ನಿರ್ಧಾರ! ...

ಹಿಂದೂ ಶಾಸ್ತ್ರ ಪ್ರಕಾರ 41 ದಿನ ಶ್ರೀ ಅಯ್ಯಪ್ಪನ ಭಕ್ತರು ಪ್ರತಿದಿನ ಬೆಳಗ್ಗೆ 4 ಗಂಟೆಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಅಯ್ಯಪ್ಪ ಪೂಜೆ ಭಜನೆ ಧ್ಯಾನ ಹಾಗೂ ವಿವಿಧ ಕೈಂಕರ್ಯ ಮಾಡುವುದು, ಸಸ್ಯಹಾರ ಸೇವಿಸುವುದು, ದೇವಸ್ಥಾನದಲ್ಲಿ ಮಲಗಿ ಕುಟುಂಬದ ಸಾಂಗತ್ಯದಿಂದ ದೂರವಿದ್ದು, ಅಯ್ಯಪ್ಪ ಧ್ಯಾನದಲ್ಲಿ ಮಗ್ನರಾಗುವುದು, ಸ್ವಾಮಿಯೇ ಶರಣು ಅಯ್ಯಪ್ಪ ಎಂಬ ಶ್ಲೋಕದಿಂದ ಭಜನೆ, ನಿತ್ಯ ಪೂಜಾ ವಿಧಿವಿಧಾನದಿಂದ ಅಯ್ಯಪ್ಪ ಸ್ವಾಮಿ ಸೇವೆಯಲ್ಲಿ ಮಗ್ನರಾಗುತ್ತಾರೆ.

ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪ ದೇವಾಲಯದಲ್ಲಿ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆಯಂದು 5 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕೊರೋನಾ ಭೀತಿಯಿಂದ ವ್ರತಧಾರಿಗಳು ಕಂಡುಬರುತ್ತಿಲ್ಲ.

click me!