
ಚಿಕ್ಕಮಗಳೂರು (ಫೆ.27): ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಂದಿರುವ ಕಾನೂನು ದೇಶದ ಎಲ್ಲಾ ಕಡೆ ಆಗಬೇಕು ಎಂದು ಪ್ರಾರ್ಥಿಸಿ 103 ವರ್ಷದ ಅಜ್ಜಿ ತಿಪಟೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿಸಿದ್ದಾರೆ. ದೇಶದ ಸೈನಿಕರಿಗೆ ಒಳಿತಾಗಬೇಕು. ತಂದೆ-ತಾಯಿ, ಬಂಧು-ಬಳಗ ಬಿಟ್ಟು ದೇಶ ಕಾಯ್ತಿರೋ ಯೋಧರಿಗೆ ಒಳಿತಾಗಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾಡಿರುವ ಕಾನೂನು ಎಲ್ಲಾ ಕಡೇ ಆಗಬೇಕು. ಮೋದಿ ಗೆದ್ದ ಮೇಲೆ ದೇಶಕ್ಕೆ ಎಷ್ಟೊಂದು ಉಪಕಾರ ಆಗುತ್ತಿದೆ. ಇಡೀ ದೇಶಕ್ಕೆ ಒಳ್ಳೆಯದಾಗಬೇಕು, ಅದಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು 103 ವರ್ಷದ ಅಜ್ಜಿ ಹೇಳಿದ್ದಾರೆ. ಅಜ್ಜಿಗೆ ನಡೆಯೋ ಶಕ್ತಿಯೂ ಇಲ್ಲ, ಊರುಗೋಲಿನ ಜೊತೆ ಮಗನನ್ನೂ ಪಾದಯಾತ್ರೆಗೆ ಅಜ್ಜಿ ಕರೆತಂದಿದ್ದಾರೆ. 103 ವರ್ಷ ವಯಸ್ಸಾದರೂ ದಣಿಯದೆ ಅಜ್ಜಿ ನಡೆಯುತ್ತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ಮೂಲದ ಅಜ್ಜಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸ್ಥಳಿಯರಿಗೆ ಭೇಟಿಯಾಗಿದ್ದರು. ಈ ವೇಳೆ ಅವರ ಪಾದಯಾತ್ರೆಯ ಕಾರಣ ಗೊತ್ತಾಗಿದೆ.
ಇದೇನು ರೈತ ವಿರೋಧಿ ಸರ್ಕಾರವೇ? ಚಿಕ್ಕಮಗಳೂರು ರೈತನಿಗೆ 3 ಲಕ್ಷ ರೂ. ವಿದ್ಯುತ್ ಬಿಲ್ ಕೊಟ್ಟ ಮೆಸ್ಕಾಂ!
ಶೃಂಗೇರಿ ರಸ್ತೆ ಬದಿಯಲ್ಲಿ ಪುರಾತನ ವಸ್ತುಗಳ ಮಾರಾಟ!