ಸಾಂಸ್ಥಿಕ ಕ್ವಾಂರಂಟೈನ್ 8,237 ಜನರ ಬಿಡುಗಡೆ| ಸೋಂಕಿತರ ಸಂಖ್ಯೆ 1944ಕ್ಕೆ ಏರಿಕೆ| ಇನ್ನು 886 ಮಾತ್ರ ಸಕ್ರಿಯ ಪ್ರಕರಣಗಳು| ಒಟ್ಟು 160 ಸ್ಯಾಂಪಲ್‌ಗಳು ರಿಜೆಕ್ಟ್|
ಬಾಗಲಕೋಟೆ(ಆ.03): ಕೋವಿಡ್-19 ದಿಂದ ಒಟ್ಟು 1009 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 886 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 167 ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರಂಟೈನ್‌ನಲ್ಲಿದ್ದ 8,237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 26,979 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 24,623 ನೆಗಟಿವ್ ಪ್ರಕರಣ, 1,944 ಪಾಸಿಟಿವ್ ಪ್ರಕರಣ ಹಾಗೂ 49 ಜನ ಮೃತ ಪ್ರಕರಣ ವರದಿಯಾಗಿರುತ್ತದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1,009 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆ 1944ಕ್ಕೆ ಏರಿಕೆಯಾಗಿದೆ.
ಸೋಂಕಿತರಿಗೆ ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಸರಿಯಾದ ಚಿಕಿತ್ಸೆ
131 ಪಾಸಿಟಿವ್: ಇಬ್ಬರು ಸಾವು:
ಜಿಲ್ಲೆಯಲ್ಲಿ ಹೊಸದಾಗಿ 131 ಕೊರೋನಾ ಪ್ರಕರಣಗಳು ಭಾನುವಾರ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿರುತ್ತಾರೆ. ಹೊಸದಾಗಿ ದೃಢಪಟ್ಟಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 35, ಬಾದಾಮಿ 17, ಹುನಗುಂದ 25, ಬೀಳಗಿ 6, ಮುಧೋಳ 17, ಜಮಖಂಡಿ 29, ಬೇರೆ ಜಿಲ್ಲೆಯ 2 ಪ್ರಕರಣಗಳಿವೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 167 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 722 ಜನ ನಿಗಾದಲ್ಲಿದ್ದಾರೆ.
ಕೋವಿಡ್-19 ಒಬ್ಬರು ಸಾವು:
ರಬಕವಿಯ ನಿವಾಸಿ 62 ವರ್ಷದ ಪುರುಷ ಜು.28 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮಧುಮೇಹ ಮತ್ತು ಹೃದಯ ರೋಗದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 2 ರಂದು ಮೃತಪಟ್ಟಿರುತ್ತಾರೆ. ತಿಮ್ಮಸಾಗರ ಗ್ರಾಮದ ನಿವಾಸಿ 67 ವರ್ಷದ ಪುರುಷ ಜು.27 ರಂದು ಆಸ್ಪತ್ರೆಗೆ ದಾಖಲಾಗಿದ್ದು, ರಕ್ತದೊತ್ತಡ ಮತ್ತು ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತ ಪಟ್ಟವರನ್ನು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದ್ದಾರೆ.