ಬಳ್ಳಾರಿ: ಕೊರೋನಾ ಸೋಂಕಿತರ ಜತೆ ಜನ್ಮದಿನ ಆಚರಿಸಿಕೊಂಡ ವೈದ್ಯ!

By Kannadaprabha News  |  First Published Aug 3, 2020, 12:05 PM IST

ಕೋವಿಡ್‌ ಸೋಂಕಿತರ ಜತೆ ಕೇಕ್‌ ಕತ್ತರಿಸಿ ಸಂಭ್ರಮಪಟ್ಟ ವೈದ್ಯರು| ಆದಷ್ಟು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವಂತಾಗಲಿ ಎಂದು ಹಾರೈಸಿದ ವೈದ್ಯ| ವೈದ್ಯರ ಸೇವೆ ಕೊಂಡಾಡಿದ ಸೋಂಕಿ​ತರು|


ಬಳ್ಳಾರಿ(ಆ.03): ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‌ ಸಂಜೀವಿನಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರೊಬ್ಬರು ತಮ್ಮ ಜನ್ಮದಿನವನ್ನು ಭಾನುವಾರ ಸೋಂಕಿತರ ಜತೆ ಆಚರಿಸಿಕೊಂಡಿದ್ದಾರೆ. 

ಸೋಂಕಿತರ ಜತೆಗೂಡಿ ಕೇಕ್‌ ಕತ್ತರಿಸಿದ ವೈದ್ಯರು ಎಲ್ಲರಿಗೂ ಕೇಸ್‌ ವಿತರಣೆ ಮಾಡಿ ಸಂಭ್ರಮಪಟ್ಟಿದ್ದಾರೆ. 

Tap to resize

Latest Videos

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಈ ವೇಳೆ ಮಾತನಾಡಿದ ವೈದ್ಯ, ಆದಷ್ಟು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವಂತಾಗಲಿ ಎಂದು ಹಾರೈಸಿದರು. ಇದೇ ವೇಳೆ ವೈದ್ಯರ ಸೇವೆಯನ್ನು ಸೋಂಕಿ​ತರು ಕೊಂಡಾಡಿದ್ದಾರೆ. 

click me!