ಹಾಸನದ ಕಾರ್ಖಾನೆಯ 50 ಕಾರ್ಮಿಕರಿಗೆ ಒಂದೇ ಬಾರಿ ವಕ್ಕರಿಸಿದ ವೈರ​ಸ್‌

By Suvarna News  |  First Published Aug 3, 2020, 10:56 AM IST

ಹಾಸನದ ಕಾರ್ಖಾನೆ ಒಂದರಲ್ಲಿ ಒಂದೇ ಬಾರಿ 50 ಮಂದಿಯಲ್ಲಿ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈ ವಿಚಾರ ಹೆಚ್ಚು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 


ಹಾಸನ (ಆ.03): ಮೈಸೂರು, ಬಳ್ಳಾರಿ ಕಾರ್ಖಾನೆಗಳ ಬಳಿಕ ಇದೀಗ ಹಾಸನದ ಕಾರ್ಖಾನೆವೊಂದಕ್ಕೆ ಕೊರೋನಾ ವಕ್ಕರಿಸಿದ್ದು, 50ಕ್ಕೂ ಹೆಚ್ಚು ಕಾರ್ಮಿಕರಿಗೆ ಪಾಸಿಟಿವ್‌ ಬಂದಿದೆ. ಇದು ಗಾರ್ಮೆಂಟ್ಸ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುವ ನಗರದ ಹಿಮ್ಮತ್‌ಸಿಂಗ್‌ ಕಾ ಸೀಡೆ ಗಾರ್ಮೆಂಟ್ಸ್‌ನ ಸಿಬ್ಬಂದಿಗೆ ನಡೆಸಿದ ರಾರ‍ಯಂಡಮ್‌ ಪರೀಕ್ಷೆಯಲ್ಲಿ 50 ಜನರಿಗೆ ಕೊರೋನಾ ದೃಢವಾಗಿದ್ದು, ಕಾರ್ಖಾನೆ ಸೀಲ್‌ಡೌನ್‌ಗೆ ಜಿಲ್ಲಾಡಳಿತ ಚಿಂತಿಸಿದೆ.

Latest Videos

ಲಾಕ್‌ಡೌನ್‌ನಲ್ಲೂ ಕಾರ್ಖಾನೆ ನಡೆಸಿದ್ದಲ್ಲದೇ ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಕೆಲಸಕ್ಕೆ ಬಂದ ಕಾರ್ಮಿಕರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರು​ವುದೇ ಅನಾ​ಹು​ತಕ್ಕೆ ಕಾರ​ಣ ಎನ್ನಲಾಗಿದೆ. ಆದರಿಂದ ಸೋಂಕಿತರಿಗೆ ಚಿಕಿತ್ಸೆ ಕೊಡಿ​ಸುವ ಹೊಣೆಯನ್ನು ಕಾರ್ಖಾನೆ ಮೇಲೆಯೇ ಹೊರಿಸಲು ಜಿಲ್ಲಾಡಳಿತ ಚಿಂತಿಸಿದೆ.

click me!