Covid Vaccination: ಬೆಂಗಳೂರು ನಗರ ಜಿಲ್ಲೆಯಲ್ಲಿ 100% ಲಸಿಕೆ

By Kannadaprabha News  |  First Published Dec 24, 2021, 5:20 AM IST

*   ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ
*   10 ಲಕ್ಷ ಜನರಿಗೆ 2ನೇ ಲಸಿಕೆ: ಜಿಲ್ಲಾಧಿಕಾರಿ ಮಂಜುನಾಥ್‌
*   ಕೋವಿಡ್‌ ವಿರುದ್ಧ ಹೋರಾಡಲು ಲಸಿಕೆ ಪಡೆಯುವುದು ಅಗತ್ಯ
 


ಬೆಂಗಳೂರು(ಡಿ.24):  ರಾಜ್ಯದಲ್ಲಿ(Karnataka) ಬೆಂಗಳೂರು ನಗರ ಜಿಲ್ಲೆ(Bengaluru Urban District) ಶೇ.100ರಷ್ಟು ಎರಡೂ ಡೋಸ್‌ ಲಸಿಕೆ ಪೂರೈಸಿದ ಮೊದಲ ಜಿಲ್ಲೆ ಎಂಬ ಖ್ಯಾತಿ ಪಡೆದುಕೊಂಡಿದ್ದು, ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಮತ್ತೊಂದು ಸಾಧನೆ ಮಾಡಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌(K Manjunath), ಬೆಂಗಳೂರು ನಗರ ಜಿಲ್ಲೆಯಲ್ಲಿ 5 ತಾಲೂಕುಗಳು, 7 ಪಟ್ಟಣ ಪಂಚಾಯಿತಿ, 2 ನಗರ ಸಭೆ ಮತ್ತು 86 ಗ್ರಾಮ ಪಂಚಾಯಿತಿ ಹಾಗೂ 864 ಗ್ರಾಮಗಳು ಸೇರಿ ಒಟ್ಟು 15 ಲಕ್ಷ ಜನಸಂಖ್ಯೆ ಇದೆ. ಈ ಪೈಕಿ 10.32 ಲಕ್ಷ ಜನರಿಗೆ ಲಸಿಕೆ(Vaccine) ನೀಡುವ ಮೂಲಕ ಶೇ.100ರಷ್ಟು ಗುರಿ ಸಾಧಿಸಲಾಗಿದೆ. ಎರಡೂ ಡೋಸ್‌ ಲಸಿಕೆ ನೀಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದೇವೆ ಎಂದು ಹೇಳಿದರು.

Tap to resize

Latest Videos

undefined

Omicron In India: ಎಚ್ಚರ ತಪ್ಪಬೇಡಿ, ರಾಜ್ಯಗಳಿಗೆ ಸಕಲ ನೆರವಿಗೆ ಸಿದ್ಧ: ಮೋದಿ

ಈ ಗುರಿ ತಲುಪಲು 40 ತಜ್ಞ ವೈದ್ಯರು, 39 ವೈದ್ಯರು, 300 ಆರೋಗ್ಯ ಸಿಬ್ಬಂದಿ ಹಾಗೂ 832 ಆಶಾ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 13,26,255 ಜನರಿಗೆ ಲಸಿಕೆ ಹಾಕಲಾಗಿದ್ದು, ಶೇ.129 ಸಾಧನೆಯಾಗಿದೆ. ಇಡೀ ರಾಜ್ಯದಲ್ಲಿ ಗುರಿ ಮೀರಿ ಸಾಧನೆಗೈದ ಏಕೈಕ ಜಿಲ್ಲೆ ಇದಾಗಿದೆ. ಹಲವು ಜಿಲ್ಲೆಗಳಲ್ಲಿ ಒಂದನೇ ಡೋಸ್‌ನ ನಿಗದಿತ ಗುರಿ ತಲುಪಿಲ್ಲ. ಈ ನಡುವೆಯೇ ನಾವು ಎರಡನೇ ಡೋಸನ್ನು ಶೇ.100ರಷ್ಟು ನೀಡಿದ್ದೇವೆ ಎಂದರು.

ಕೊರೋನಾ ಸೋಂಕು ಭಾರತ(India) ಸೇರಿದಂತೆ ಹಲವಾರು ದೇಶಗಳಲ್ಲಿನ ಜನರ ಪರಿಸ್ಥಿತಿಯನ್ನು ತಲೆ ಕೆಳಗಾಗುವಂತೆ ಮಾಡಿದೆ. ಕೋವಿಡ್‌(Covid-19) ವಿರುದ್ಧ ಹೋರಾಡಲು ಲಸಿಕೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರು ಲಸಿಕೆ ಪಡೆಯಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಪ್ರಾಥಮಿಕ ಅರೋಗ್ಯ ಕೇಂದ್ರದ ಅನೇಕ ವೈದ್ಯರು, ಅರೆ ವೈದ್ಯರು ಸೇರಿದಂತೆ ಪಂಚಾಯಿತಿ ಮಟ್ಟದ ಅಧಿಕಾರಿಗಳೂ ಸಹ ಸಹಕರಿಸಿದ್ದಾರೆ ಮತ್ತು ಶ್ರಮಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮೈಸೂರು ನಗರದಲ್ಲಿ ಶೇ.100 ಮೊದಲ ಡೋಸ್‌ ಲಸಿಕೆ

ಮೈಸೂರು (Mysuru) ನಗರ ವ್ಯಾಪ್ತಿಯಲ್ಲಿ ಶೇ.100 ರಷ್ಟುಕೋವಿಡ್‌ (Covid) ಮೊದಲ ಡೋಸ್‌ ಲಸಿಕೆ ನೀಡುವ ಮೂಲಕ ರಾಜ್ಯದಲ್ಲಿ ಕೋವಿಡ್‌ ಲಸಿಕೆಯನ್ನು (Vaccination) ಸಂಪೂರ್ಣವಾಗಿ ನೀಡಿದ ಎರಡನೇ ನಗರವಾಗಿದೆ. ಬಿಬಿಎಂಪಿ ನಂತರದ ಸ್ಥಾನವನ್ನು ಮೈಸೂರು ಪಡೆದುಕೊಂಡಿದ್ದು, ಮೈಸೂರು ನಗರ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ನಿವಾಸಿಗಳಿಗೂ ಮೊದಲ ಡೋಸ್‌ ಲಸಿಕೆ ನೀಡಿದ ಹೆಗ್ಗಳಿಕೆಯನ್ನು ಮೈಸೂರು ನಗರ ಹೊಂದಿದೆ ಎಂದು ನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ನಾಗರಾಜು ತಿಳಿಸಿದ್ದಾರೆ.

Covid Vaccination: ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು!

ಎರಡನೇ ಡೋಸ್‌ ಮೈಸೂರು (Mysuru)  ನಗರದಲ್ಲಿ 81.83 ಆಗಿದೆ. ಅಂದರೆ ಬಹುಪಾಲು ಮಂದಿಗೆ ಕೋವಿಡ್‌ನ ಎರಡನೇ ಡೋಸ್‌ ಲಸಿಕೆಯನ್ನೂ ನೀಡಲಾಗಿದೆ. ಮೈಸೂರು ಗ್ರಾಮಾಂತರ ಪ್ರದೇಶದಲ್ಲಿಯೂ ಶೇ. 98.11 ರಷ್ಟುಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದ್ದು, 79.63 ರಷ್ಟುಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ.

ಬೂಸ್ಟರ್ ಡೋಸ್ ಬೇಕಿಲ್ಲ:   

ಕೋವಿಡ್‌ನಿಂದ (Covid)  ರಕ್ಷಣೆ ಪಡೆಯಲು ದೇಹಕ್ಕೆ ಲಸಿಕೆಯ 2 ಡೋಸ್‌ಗಳು ಸಾಕು. ಬೂಸ್ಟರ್‌ ಡೋಸ್‌ನ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಸರ್ಕಾರದ ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆ ಸಮಿತಿ ಸದಸ್ಯ ಡಾ. ಜಯಪ್ರಕಾಶ್‌ ಮುಳಿಯಿಲ್‌ ಪ್ರತಿಪಾದಿಸಿದ್ದಾರೆ.
 

click me!