ಬೆಂಗಳೂರಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ನಗರದ ವಿವಿಧ ಕಡೆ ಹತ್ತಕ್ಕೂ ಹೆಚ್ಚು ಮರಗಳು ಧರೆಗುಳಿದ್ದು, ತಗ್ಗು ಪ್ರದೇಶಗಳು ಜಲಾವೃತ್ತಗೊಂಡು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಬೆಂಗಳೂರು(ಮಾ.24): ನಗರದಲ್ಲಿ ಸೋಮವಾರ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ನಗರದ ವಿವಿಧ ಕಡೆ ಹತ್ತಕ್ಕೂ ಹೆಚ್ಚು ಮರಗಳು ಧರೆಗುಳಿದ್ದು, ತಗ್ಗು ಪ್ರದೇಶಗಳು ಜಲಾವೃತ್ತಗೊಂಡು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಉತ್ತರ ಕರ್ನಾಟಕ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ತೆಲಂಗಾಣದಿಂದ ಕೇರಳದವರೆಗೆ ಗಾಳಿಯ ಒತ್ತಡ ಕಡಿಮೆಯಾಗಿರುವ ವಾತಾವರಣದಿಂದ ಸೋಮವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಡೆ ಮಳೆಯಾಗಿದೆ.
Big Breaking:ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!
ಸೋಮವಾರ ಮಧ್ಯಾಹ್ನ ವರೆಗೆ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ನಿರ್ಮಾಣಗೊಂಡು 3.40ರ ಸುಮಾರಿಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಆರಂಭವಾಯಿತು. ಸುಮಾರು 1 ಗಂಟೆಗೂ ಅಧಿಕ ಸಮಯ ಸುರಿದ ಮಳೆಗೆ ಬಸವೇಶ್ವರ ನಗರ 5ನೇ ಬ್ಲಾಕ್, ನಾಗರಬಾವಿ 10ನೇ ಬ್ಲಾಕ್, ಕಬ್ಬನ್‌ಪೇಟೆ ಹಾಗೂ ವಿಜಯನಗರದ ಸರಸ್ವತಿ ನಗರದಲ್ಲಿ ತಲಾ ಒಂದು ಮರ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ವರದಿಯಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಮಂಗಳೂರಲ್ಲೂ ‘ಬ್ರೇಕ್ ದ ಚೈನ್’ ಆಂದೋಲನ
ಇನ್ನು ಏಕಾಏಕಿ ಧಾರಾಕಾರ ಸುರಿದ ಮಳೆಗೆ ಕೆ.ಆರ್.ಸರ್ಕಲ್, ವಸಂತನಗರ, ಚಾಮರಾಜಪೇಟೆ ಅಂಡರ್ ಪಾಸ್, ಕಾಟನ್‌ಪೇಟೆ ಹಾಗೂ ಎಂ.ಜಿ.ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಹಾಗೂ ಆನಂದ್ ವೃತ್ತದ ಅಂಡರ್ ಪಾಸ್, ಮೇಖ್ರಿ ವೃತ್ತದ ಅಂಡರ್ ಪಾಸ್, ಓಕಳಿಪುರದ ಅಂಡರ್ ಪಾಸ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡ ಪರಿಣಾಮ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಯಿತು.
ನಗರಲ್ಲಿ ಸರಾಸರಿ 4.50 ಮಿ.ಮೀ. ಮಳೆ
ಸೋಮವಾರ ನಗರದಲ್ಲಿನ ಸರಾಸರಿ 4.45 ಮಿ.ಮೀ ಮಳೆಯಾದ ವರದಿಯಾಗಿದೆ. ಹಾರೋಹಳ್ಳಿ 35, ಮಾರುತಿ ಮಂದಿರ 22.5, ಕಡುಬಗೆರೆ 22, ಉತ್ತರಹಳ್ಳಿ ಹಾಗೂ ದೊಡ್ಡಜಾಲ ತಲಾ 21, ಬೆಟ್ಟಜಾಲ 18.5, ನಾಗರಬಾವಿ 17.5, ಅಗ್ರಹಾರ ದಾಸರಹಳ್ಳಿ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ 16.5, ಚಾಮರಾಜ ಪೇಟೆ 15.5, ಕಿತ್ತನಹಳ್ಳಿ 15, ಕಾಟನ್‌ಪೇಟೆ 14, ಕೆಜೆ ಹಳ್ಳಿ 11, ಮಂಡೂರು 10.5, ದಯಾನಂದ ನಗರ ಹಾಗೂ ದೊಡ್ಡ ಬಿದಿರಕಲ್ಲು ತಲಾ 10, ಬಸವೇಶ್ವರ ನಗರ 9, ಹಂಪಿನಗರ 8, ಪುಲಕೇಶಿನಗರ 7.5, ಲಕ್ಕಸಂದ್ರ ಹಾಗೂ ಮಾರತ್ತಹಳ್ಳಿ 6.5 ಮಿ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.