ಬೆಳಗಾವಿ: ಮಗುವಿಗೆ ಕೊರೋನಾ ಸೋಂಕು ಇಲ್ಲ, ಕುಟುಂಬಸ್ಥರ ಮೇಲೂ ನಿಗಾ

By Kannadaprabha NewsFirst Published Mar 23, 2020, 11:35 AM IST
Highlights

ನಾಲ್ಕೂವರೆ ವರ್ಷದ ಮಗುವಿಗೆ ಕೋರೊನಾ ವೈರಸ್ ಇಲ್ಲ| ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ| ಶಂಕಿತ ಮಗುವಿನ ಕಫ ಹಾಗೂ ರಕ್ತ ಸ್ಯಾಂಪಲ್ ಮಾದರಿಯನ್ನು ಪುಣೆಯ ಲ್ಯಾಬ್ ಗೆ ರವಾನೆ|

ಬೆಳಗಾವಿ[ಮಾ.23]: ಜಿಲ್ಲೆಯ ನಾಲ್ಕೂವರೆ ವರ್ಷದ ಮಗುವಿಗೆ ಕೋರೊನಾ ವೈರಸ್ ಇಲ್ಲ. ಮಗು ಉತ್ತಮ ಆರೋಗ್ಯವಂತಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ನಾಲ್ಕೂವರೆ ವರ್ಷದ ಮಗುವಿಗೆ ಯಾವುದೇ ರೀತಿಯ ಸೋಂಕು ಇಲ್ಲ. ಮಗು ಆರೋಗ್ಯಯವಾಗಿದೆ ಎಂದು ತಿಳಿಸಿದ್ದಾರೆ. 

ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯ ಐಸೋಲಿಷನ್ ವಾರ್ಡನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವಿನ ಕಫ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ ಮಗುವಿನ ಮನೆಯಲ್ಲಿರುವ ಐವರನ್ನು ತೀವ್ರ ನಿಗಾದಲ್ಲಿಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಇಟಲಿಯಿಂದ ಮಗುವಿನ ಮನೆಗೆ ಸಂಬಂಧಿಕರು ಬಂದಿದ್ದರು. ಆದ್ದರಿಂದ ಐದಾರು ದಿನಗಳಿಂದ ಮಗುವಿಗೆ ನಿರಂತರವಾಗಿ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಾಗುತ್ತಿರುವುದು ಮನಗಂಡ ಮನೆಯವರು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. 

ಬೆಳಗಾವಿ: ನಾಲ್ಕೂವರೆ ವರ್ಷದ ಮಗುವಿಗೆ ಕೊರೋನಾ ವೈರಸ್ ಶಂಕೆ!

ಮೊದಲು ಸ್ಕ್ರೀನಿಂಗ್ ತಪಾಸಣೆ ಮಾಡಿದಾಗ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಗುವನ್ನು ಜಿಲ್ಲಾಸ್ಪತ್ರೆಯ ಐಸೋ ಲಿಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಿದೆ. ಅಲ್ಲದೇ ಮಗುವಿನ ಕುಟುಂಬದ ಐವರ ಮೇಲೂ ನಿಗಾ ವಹಿಸಲಾಗಿದೆ. ಶಂಕಿತ ಮಗುವಿನ ಕಫ ಹಾಗೂ ರಕ್ತ ಸ್ಯಾಂಪಲ್ ಮಾದರಿಯನ್ನು ಪುಣೆಯ ಲ್ಯಾಬಗೆ ಕಳುಹಿಸಿ ಕೊಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಶಂಕೆ ವ್ಯಕ್ತಪಡಿಸಲಾಗಿದ್ದ ಮಗುವಿಗೆ ಯಾವುದೇ ಸೊಂಕು ತಗುಲಿಲ್ಲ. ಮಗು ಆರೋಗ್ಯಯುತವಾಗಿದೆ. ಅಲ್ಲದೇ ಭಾನುವಾರ ವ್ಯಕ್ತಿಯೋರ್ವನ ರಕ್ತ ಹಾಗೂ ಕಫವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿ ಕೊಡಲಾಗಿದ್ದು, ಇದುವರೆಗೆ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ.

click me!