ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್

Kannadaprabha News   | Kannada Prabha
Published : Mar 01, 2026, 11:26 AM IST
Dr CN Manjunath

ಸಾರಾಂಶ

ದೇಶದಲ್ಲಿ ಪ್ರತಿವರ್ಷ 80 ಸಾವಿರದಿಂದ ಒಂದು ಲಕ್ಷದವರೆಗೆ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲಿ 40 ಸಾವಿರ ಮಹಿಳೆಯರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಪೀಣ್ಯ ದಾಸರಹಳ್ಳಿ: ದೇಶದಲ್ಲಿ ಪ್ರತಿವರ್ಷ 80 ಸಾವಿರದಿಂದ ಒಂದು ಲಕ್ಷದವರೆಗೆ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲಿ 40 ಸಾವಿರ ಮಹಿಳೆಯರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಚಿಕ್ಕಬಾಣಾವರದ ಆರ್. ಆರ್. ಕಾಲೇಜಿನಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿ ಅವರು ಕ್ಯಾನ್ಸರ್ ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆಗಾಗಿ 12 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ (ಎಚ್.ಪಿ.ವಿ) ವಿವಿಧ ಬಗೆಯ ಕ್ಯಾನ್ಸರ್ ತಡೆಗಟ್ಟುವಿಕೆಯ ವ್ಯಾಕ್ಸಿನೇಷನ್ ಅನ್ನು ಉಚಿತವಾಗಿ ನೀಡಲು ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ಚಿಕ್ಕ ಯುವಕರಲ್ಲಿಯೂ ಹೃದಯಾಘಾತ, ಬ್ರೈನ್ ಸ್ಟ್ರೋಕ್ ಆಗುತ್ತಿವೆ. ನೋಡಲು ಸುಂದರವಾಗಿ ಕಂಡರೂ ಕೂಡ ಒಳಗೆ ವಿವಿಧ ಬಗೆಯ ಕಾಯಿಲೆಗಳು ಇರುತ್ತವೆ. ಅದಕ್ಕಾಗಿ ಎಲ್ಲಾ ಕಡೆ ಇಂತಹ ಆರೋಗ್ಯ ಶಿಬಿರಗಳಿಂದ ಆರೋಗ್ಯ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಯುವಕರಲ್ಲಿ ಉತ್ತಮ ಜೀವನ ಶೈಲಿ ಇಲ್ಲದೆ ಕಾಯಿಲೆ

ಯುವಕರಲ್ಲಿ ಉತ್ತಮ ಜೀವನ ಶೈಲಿ ಇಲ್ಲದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿದೆ. ಕೆಲವು ಕೆಟ್ಟ ಚಟಗಳಿಗೆ ಬಲಿಯಾಗದೆ, ಉತ್ತಮ ಜೀವನಶೈಲಿ, ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದರು.

ಉತ್ತಮ ನಿದ್ರೆ, ವ್ಯಾಯಾಮ, ಯೋಗ, ವಾಕ್, ಉತ್ತಮ ಆಹಾರ ಪದ್ಧತಿ ಡಯಟ್, ಉತ್ತಮ ಜನರ ಸಹವಾಸ, ಯಾರನ್ನು ಅವಹೇಳನ ಮಾಡದಂತೆ ನಿಮ್ಮ ಕೆಲಸಗಳಲ್ಲಿ ನೀವು ಬದ್ಧರಾಗಬೇಕು. ಆದಷ್ಟು ದೇಹದ ತೂಕ, ಕೆಟ್ಟ ಕೊಬ್ಬಿನಾಂಶ, ಸಕ್ಕರೆ ಕಾಯಿಲೆ ಕಡಿಮೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಉತ್ತಮ ಸಮಾಜ ಕಟ್ಟುವ ಪ್ರಜೆಗಳಾಗಬೇಕು

ಶಾಸಕ ಎಸ್. ಮುನಿರಾಜು ಮಾತನಾಡಿ, ಜೀವನದಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಗುರಿಯನ್ನು ಇಟ್ಟು ಚೆನ್ನಾಗಿ ಓದಿ ಉತ್ತಮ ಸಮಾಜ ಕಟ್ಟುವ ಪ್ರಜೆಗಳಾಗಬೇಕು ಎಂದರು.

ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ, ಪ್ರಕ್ರಿಯ ಆಸ್ಪತ್ರೆಯ ಡಾ. ಸೋಮನಾಥ ಚಟರ್ಜಿ, ಆರ್.ಆರ್. ಕಾಲೇಜಿನ ಅಧ್ಯಕ್ಷ ರಾಜಾರೆಡ್ಡಿ, ಕಾರ್ಯದರ್ಶಿ ಕಿರಣ್ ರೆಡ್ಡಿ, ಟ್ರಸ್ಟಿ ವರುಣ್, ಲಯನ್ ಎಸ್. ಮನೋಜ್ ಕುಮಾರ್, ಲಯನ್ ಗೋವಿಂದರಾಜು ಪೈ, ಪ್ರಾಂಶುಪಾಲ ರಾಘವೇಂದ್ರ ಮುಂತಾದವರಿದ್ದರು.

PREV
Read more Articles on
click me!

Recommended Stories

ಬೆಂಗಳೂರಿನ ವಿಲ್ಲಾ ಪಾರ್ಟಿ & ರೇ*ಪ್ : ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ ಬಂಧನ
ಖಮೇನಿ ಹತ್ಯೆ; ರಾಜ್ಯದ ಮಿನಿ ಇರಾನ್‌ನಲ್ಲಿ ಮೂರು ದಿನ ಶೋಕಾಚರಣೆ