ಪ್ರತಿಭಾವಂತನ ಸ್ಥಾನವನ್ನು ನೂರು ಕಂಪ್ಯೂಟರ್ ತುಂಬಿಸಲಾಗದು : ಇಸ್ರೋ ವಿಜ್ಞಾನಿ ಡಾ.ದಾರುಕೇಶ

Kannadaprabha News   | Kannada Prabha
Published : Mar 01, 2026, 08:38 AM IST
ISRO

ಸಾರಾಂಶ

ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಅದರ ಬಗ್ಗೆ ನಿಖರವಾಗಿ ಹೇಳಲು ಆಗಲ್ಲ. ಇಸ್ರೋಗೆ ಸಂಶೋಧನೆಗಾಗಿ ಅನುದಾನದ ಕೊರತೆಯಿಲ್ಲ. ಭಾರತ ಸರ್ಕಾರ ಹಲವಾರು ಅನುದಾನಗಳನ್ನು ಸಂಶೋಧನೆಗೆ ಮೀಸಲಿಟ್ಟಿದೆ.

ಹೊಸಪೇಟೆ: ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಅದರ ಬಗ್ಗೆ ನಿಖರವಾಗಿ ಹೇಳಲು ಆಗಲ್ಲ. ಇಸ್ರೋಗೆ ಸಂಶೋಧನೆಗಾಗಿ ಅನುದಾನದ ಕೊರತೆಯಿಲ್ಲ. ಭಾರತ ಸರ್ಕಾರ ಹಲವಾರು ಅನುದಾನಗಳನ್ನು ಸಂಶೋಧನೆಗೆ ಮೀಸಲಿಟ್ಟಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳು ನಡೆಸುವ ಕ್ರಿಯಾಶೀಲಾತ್ಮಕವಾದ ಪ್ರಯೋಗಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ಹೇಳಿದರು.

ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಇನ್‌ಸ್ಟಿಟ್ಯೂಷನ್ ಆಫ್ ಇನ್ನೋವೇಶನ್ ಕೌನ್ಸಿಲ್ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಐ ತಂತ್ರಜ್ಞಾನವನ್ನು ರೂಪಿಸಿಕೊಂಡು ಡಾಟಾ ಅನಾಲಿಸಿಸ್ ನ್ನು ಮಾಡಬಹುದು. ಉಪಗ್ರಹದಿಂದ ತೆಗೆದ ಛಾಯಾಚಿತ್ರದಲ್ಲಿ ಮೋಡ ಹಾಗೂ ಮಂಜುಗಡ್ಡೆಯು ಒಂದೇ ರೀತಿಯಲ್ಲಿ ಕಂಡರೂ ಅವುಗಳ ನಡುವಿನ ವ್ಯತ್ಯಾಸವನ್ನು ಎಐ ತಂತ್ರಜ್ಞಾನದ ಮೂಲಕ ಅರಿಯಬಹುದು. ಹಲವಾರು ವರ್ಷಗಳ ಉಪಗ್ರಹದ ಚಿತ್ರೀಕರಣದ ಮಾದರಿಗಳನ್ನು ಸಂಗ್ರಹಿಸಿ ಎಐ ತಂತ್ರಜ್ಞಾನಕ್ಕೆ ಅಳವಡಿಸಿದರೆ ಅದು ಎರಡರ ನಡುವಿನ ವಿಭಿನ್ನತೆಯನ್ನು ಗುರುತಿಸಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ಎಐ ತಂತ್ರಜ್ಞಾನ ಇಸ್ರೋ ವಿಜ್ಞಾನಿಗಳನ್ನು ಮೀರಿಸಬಲ್ಲದೇ?

ವಿದ್ಯಾರ್ಥಿನಿ ಪ್ರಿಯಾಂಕಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಸ್ರೋ ವಿಜ್ಞಾನಿ ಡಾ. ಬಿ.ಎಚ್.ಎಂ ದಾರುಕೇಶ್, ಒಂದು ಕಂಪ್ಯೂಟರ್ ನೂರು ಸಾಮಾನ್ಯ ವ್ಯಕ್ತಿಗಳು ಮಾಡುವ ಕೆಲಸವನ್ನು ಮಾಡಬಲ್ಲದು. ಆದರೆ ಒಬ್ಬ ಅಸಾಧಾರಣ ಪ್ರತಿಭಾವಂತ ವ್ಯಕ್ತಿಯ ಸ್ಥಾನವನ್ನು ನೂರು ಕಂಪ್ಯೂಟರ್ ಗಳಿಂದಲೂ ತುಂಬಿಸಲಾಗದು ಎಂದು ಅವರು ಹೇಳಿದರು.

2040ರ ವೇಳೆಗೆ ಮಾನವನನ್ನು ಚಂದಿರನೆಡೆಗೆ ಕಳಿಸುವ ಯೋಜನೆ

2040ರ ವೇಳೆಗೆ ಮಾನವನನ್ನು ಚಂದಿರನೆಡೆಗೆ ಕಳಿಸುವ ಯೋಜನೆಯನ್ನು ಹೊಂದಲಾಗುತ್ತದೆ ಎಂದು ಅವರು, ಸೂಕ್ಷ್ಮ ಗುರುತ್ವಾಕರ್ಷಣ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿ, ಶೈಕ್ಷಣಿಕ, ವಿಜ್ಞಾನ, ಕೈಗಾರಿಕಾ ಕ್ಷೇತ್ರದ ಹಾಗೂ ನವೊದ್ಯಮಗಳಲ್ಲಿನ ಅವಕಾಶಗಳ ಬಗ್ಗೆ ಅವರು ಚರ್ಚಿಸಿದರು.

ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೂಲಭೂತ ವಿಜ್ಞಾನ ವಿಭಾಗದ ಡೀನ್ ಹಾಗೂ ಪ್ರಾಧ್ಯಾಪಕ ಡಾ.ಖಡ್ಕೆ ಉದಯಕುಮಾರ್ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು, ಸರ್ ಸಿ.ವಿ. ರಾಮನ್ ಅವರು ನಡೆದು ಬಂದ ದಾರಿ ಹಾಗೂ ಅವರ “ರಾಮನ್ ಎಫೆಕ್ಟ್ಱಬಗ್ಗೆ ವಿಶ್ಲೇಷಣೆ ನೀಡಿದರು.

ಪಿ.ಡಿ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಮಾತನಾಡಿ, ವಿಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮುಂಜಾನೆಯಿಂದ ರಾತ್ರಿಯವರೆಗೂ ನಾವು ವಿಜ್ಞಾನ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳನ್ನು ಉಪಯೋಗಿಸುತ್ತಿದ್ದೇವೆ. ಇದರ ಶ್ರೇಯಸ್ಸು ಎಲ್ಲ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಹೇಳಿದರು.

ಉಪಪ್ರಾಂಶುಪಾಲ ಡಾ. ಪಾರ್ವತಿ ಕಡ್ಲಿ, ಐಕ್ಯೂಎಸಿಯ ಸಂಚಾಲಕರಾದ ಡಾ.ಶಿವಕೇಶವ್ ಕುಮಾರ್, ಡೀನ್ ಡಾ.ಮಂಜುಳಾ ಎಸ್.ಡಿ, ಕಾರ್ಯಕ್ರಮದ ಸಂಚಾಲಕ ಡಾ. ಎನ್ ಪ್ರಭುದೇವ್, ಡಾ.ನಾಗರಾಜ್ ಎಂ.ಕೆ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಸನ್ನ ಲಕ್ಷ್ಮಿ ಪ್ರಾರ್ಥಿಸಿದರು. ಡಾ.ನಾಗರಾಜ್ ಎಂ.ಕೆ. ಸ್ವಾಗತಿಸಿದರು. ಡಾ.ಮಾಲತೇಶ್ ವಂದಿಸಿದರು. ಪ್ರಿಯಾಂಕಾ ನಿರೂಪಿಸಿದರು.

PREV
Read more Articles on
click me!

Recommended Stories

ಅರ್ಧಕ್ಕೆ ನಿಂತ ಗ್ರಾಮದ ದೇಗುಲ ನಿರ್ಮಾಣಕ್ಕೆ ₹2.50 ಲಕ್ಷ ನೀಡಿದ 850 ‘ಗೃಹಲಕ್ಷ್ಮೀ’ಯರು
ಜೀವಂತ ರತಿ-ಮನ್ಮಥರನ್ನು ನಗಿಸಿ 13 ಲಕ್ಷ ಬಹುಮಾನ ಪಡೆಯಿರಿ; 67 ವರ್ಷದಿಂದ ಯಾರಿಗೂ ಸಾಧ್ಯವಾಗಿಲ್ಲ