ಸಂವಿಧಾನದ ಜಯ, ಪ್ರಜಾಪ್ರಭುತ್ವದ ವಿಜಯ: ಸಿದ್ದರಾಮಯ್ಯ

First Published May 19, 2018, 4:42 PM IST
Highlights

ವಿಶ್ವಾಸ ಮತ ಯಾಚನೆಗೂ ಮುನ್ನವೇ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, 'ಇದು ಸಂವಿಧಾನದ ಜಯ, ಪ್ರಜಾಪ್ರಭುತ್ವದ ವಿಜಯ,' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು: ವಿಶ್ವಾಸ ಮತ ಯಾಚನೆಗೂ ಮುನ್ನವೇ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, 'ಇದು ಸಂವಿಧಾನದ ಜಯ, ಪ್ರಜಾಪ್ರಭುತ್ವದ ವಿಜಯ,' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 

'ಇದೊಂದು ಐತಿಹಾಸಿಕ ದಿನ. ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸಲು ಒಪ್ಪಿಕೊಂಡಿದ್ದು, ಸಾಧ್ಯವಾಗದಲೇ ಪಲಾಯಾನ ಮಾಡಿರುವುದು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಕಾನೂನಿಗೆ ಸಿಕ್ಕಿದ ವಿಜಯ. ರಾಜ್ಯಪಾಲರ ಮೇಲೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಒತ್ತಡ ಹಾಕಿಸಿ, ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧವಾಗಿದ್ದರೂ ಬಿಜೆಪಿಯ ಶಾಸಕಾಂಗ ಪಕ್ಷದ ಮುಖಂಡ ಯಡಿಯೂರಪ್ಪ ಅವರನ್ನು ಕರೆದು, ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಬೇಕಾಗಿರುವುದು ಎಲ್ಲರ ಕರ್ತವ್ಯ,' ಎಂದರು. 

ಕೇವಲ 104 ಸ್ಥಾನಗಳನ್ನು ಗೆದ್ದು, ಅಗತ್ಯವಿರುವ 111 ಮ್ಯಾಜಿಕ್ ನಂಬರ್ ತಲುಪುವ ವಿಶ್ವಾಸ ಹೊಂದಿದ್ದ ಬಿಜೆಪಿ, ವಿಶ್ವಾಸ ಮತ ಯಾಚನೆಗೂ ಮುನ್ನವೇ ಸೋಲುಪ್ಪಿಕೊಂಡಿದ್ದು, ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
 

click me!