ಶಿವಾಜಿನಗರ : ಆಪ್ತ ಸ್ನೇಹಿತರು ಈಗ ಎದುರಾಳಿಗಳು

First Published May 10, 2018, 12:25 PM IST
Highlights

ಶಿವಾಜಿನಗರದಲ್ಲಿ ಹಲವು ದಶಕಗಳ ಸ್ನೇಹಿತರ ನಡುವೆ ಕಾಳಗ ಏರ್ಪಟ್ಟಿದೆ. ಹಾಲಿ ಶಾಸಕ ರೋಷನ್ ಬೇಗ್ ಮತ್ತೆ ಕಣಕ್ಕೆ ಇಳಿದಿದ್ದು, ಅವರಿಗೆ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.  ಈ ಮೂಲಕ ಇಬ್ಬರು ಸ್ನೇಹಿತರ ನಡುವೆ ಇಲ್ಲಿ ವಾರ್ ನಡೆಯುತ್ತಿದೆ. ಇದರಲ್ಲಿ ಯಾರಿಗೆ ಗೆಲುವು -  ಯಾರಿಗೆ ಸೋಲು ಎನ್ನುವುದನ್ನು ಕಾದು ನೋಡಬೇಕಿದೆ.

ಬೆಂಗಳೂರು :  ಶಿವಾಜಿನಗರದಲ್ಲಿ ಹಲವು ದಶಕಗಳ ಸ್ನೇಹಿತರ ನಡುವೆ ಕಾಳಗ ಏರ್ಪಟ್ಟಿದೆ. ಹಾಲಿ ಶಾಸಕ ರೋಷನ್ ಬೇಗ್ ಮತ್ತೆ ಕಣಕ್ಕೆ ಇಳಿದಿದ್ದು, ಅವರಿಗೆ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. 

ಮುಸ್ಲಿಂ ಮತ್ತು ತಮಿಳರು ಹೆಚ್ಚಿದ್ದಾರೆ. ಮುಸ್ಲಿಂ ಸಮುದಾಯದ ಆರು ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಎರಡು ಬಾರಿ ಶಿವಾಜಿನಗರ ನಗರದಿಂದ ಆರಿಸಿ ಬಂದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೆಬ್ಬಾಳ ಕ್ಷೇತ್ರಕ್ಕೆ ಹೋಗಿದ್ದರು. 

ಆದರೆ ಪುನಃ ಕ್ಷೇತ್ರಕ್ಕೆ ಮರಳಿದ್ದು, ರೋಷನ್ ಅವರಿಗೆ ನೇರ ಸ್ಪರ್ಧಿಯಾಗಿದ್ದಾರೆ. ಕ್ಷೇತ್ರದ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಕಟ್ಟಾ ಅವರಿಗೆ ಅನುಕೂಲವಾಗಲಿದೆ. ಶೇಕ್ ಮಸ್ತಾನ್ ಅಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಮುಸ್ಲಿಂ ಮತಗಳನ್ನೇ ನೆಚ್ಚಿಕೊಂಡಿರುವ ಮುಸ್ಲಿಂ ಮತಗಳು ವಿಭಜನೆಯಾಗಲಿವೆ ಎಂಬ ಆತಂಕದಲ್ಲಿ ಬೇಗ್ ಇದ್ದಾರೆ.

click me!