ನಾನು ಡಿಸಿಎಂ ಆಗುವ ಭಾವನೆ ನಾಯಕ ಸಮಾಜದಲ್ಲಿದೆ : ಶ್ರೀರಾಮುಲು

 |  First Published May 10, 2018, 11:46 AM IST

ಬಳ್ಳಾರಿ ಗಣಿ ರೆಡ್ಡಿ ಪಾಳೆಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಸಂಸದ ಬಿ. ಶ್ರೀರಾಮುಲು ಈ ಬಾರಿ ವಿಭಿನ್ನ ನಡೆಯ ಕಾರಣಕ್ಕೆ ರಾಜ್ಯಾದ್ಯಂತ ಸುದ್ದಿ ಮಾಡಿದ್ದಾರೆ. ತಮ್ಮ ಬಳ್ಳಾರಿ ಬಿಟ್ಟು ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಕಣಕ್ಕಿಳಿದಿದ್ದ ಅವರಿಗೆ ಬಾದಾಮಿ ಅನಿರೀಕ್ಷಿತ ಕಣವಾಗಿ ಮಾರ್ಪಟ್ಟಿತು. ಅಲ್ಲಿ ಸಿದ್ದರಾಮಯ್ಯ ಅವರ ಪ್ರಮುಖ  ಎದುರಾಳಿಯಾಗಿದ್ದಾರೆ. 


ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ :  ಬಳ್ಳಾರಿ ಗಣಿ ರೆಡ್ಡಿ ಪಾಳೆಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಸಂಸದ ಬಿ. ಶ್ರೀರಾಮುಲು ಈ ಬಾರಿ ವಿಭಿನ್ನ ನಡೆಯ ಕಾರಣಕ್ಕೆ ರಾಜ್ಯಾದ್ಯಂತ ಸುದ್ದಿ ಮಾಡಿದ್ದಾರೆ. ತಮ್ಮ ಬಳ್ಳಾರಿ ಬಿಟ್ಟು ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಕಣಕ್ಕಿಳಿದಿದ್ದ ಅವರಿಗೆ ಬಾದಾಮಿ ಅನಿರೀಕ್ಷಿತ ಕಣವಾಗಿ ಮಾರ್ಪಟ್ಟಿತು. ಅಲ್ಲಿ ಸಿದ್ದರಾಮಯ್ಯ ಅವರ ಪ್ರಮುಖ  ಎದುರಾಳಿಯಾಗಿದ್ದಾರೆ. 

Latest Videos

undefined

ಶ್ರೀರಾಮುಲು ನಾಯಕ ಸಮಾಜದ ಪ್ರಭಾವಿ ನಾಯಕ.  ಕಳೆದ ಚುನಾವಣೆ ವೇಳೆ ಬಳ್ಳಾರಿ ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡು ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಲು ಪ್ರಮುಖ ಪಾತ್ರ ನಿರ್ವಹಿಸಿದ್ದ ನಾಯಕ ಸಮಾಜದ ಮತ್ತೊಬ್ಬ ಮುಖಂಡ ಸತೀಶ್ ಜಾರಕಿಹೊಳಿ ಈ ಬಾರಿ ತುಸು ಮಂಕಾದಂತೆ ಕಾಣಿಸುತ್ತಿದ್ದಾರೆ. ಮೊಳಕಾಲ್ಮುರು ವ್ಯಾಪ್ತಿಯ ನೆಲಗೇತನಹಟ್ಟಿಯಲ್ಲಿ ಬುಧವಾರ ಬೆಳಗ್ಗೆ ತುಸು ಬಿಡುವು ಮಾಡಿಕೊಂಡು ಅವರ ಪ್ರಚಾರ ವಾಹನದಲ್ಲಿಯೇ ಶ್ರೀರಾಮುಲು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

ನಾಯಕ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂಬ ಮಾತು ಕೇಳಿಬಂದಿದೆ?

ನಾಯಕ (ವಾಲ್ಮೀಕಿ) ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಸಿಗಬೇಕಾಗಿತ್ತು. ಹಿಂದೆ ಜನಸಂಖ್ಯೆಗನುಗುಣವಾಗಿ ಶೇ.3ರಷ್ಟು ಮಾತ್ರ ಕೊಟ್ಟಿದ್ದರು. ಈಗ ಜನಸಂಖ್ಯೆ ಪ್ರಮಾಣ ಜಾಸ್ತಿಯಾಗಿದ್ದು, ಮೀಸಲಾತಿ ಸೌಲಭ್ಯ ವಿಸ್ತರಿಸಬೇಕಾಗಿದೆ. ಈಗಾಗಲೇ ರಾಜಕೀಯ ವಾಗಿ ಶೇ.7.5ರಷ್ಟು ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಪರಿಣಾಮ 15 ವಿಧಾನ ಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಅದನ್ನು ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಸ್ತರಿಸಿ ಎಂಬುದು ನಮ್ಮ ಬೇಡಿಕೆ. ಸಿದ್ದರಾಮಯ್ಯ ಮೀಸಲು ಪ್ರಮಾಣ ಹೆಚ್ಚಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಹೇಳಿ ಉದಾಸೀನ ತೋರಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ನಮಗೂ ಜನಾರ್ದನ ರೆಡ್ಡಿಗೂ ಸಂಬಂಧವಿಲ್ಲವೆಂದು ಬಿಜೆಪಿ ವರಿಷ್ಠರು ಹೇಳಿದರೂ ಅವರ ಸಾಂಗತ್ಯದಲ್ಲಿದ್ದೀರಿ?

ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ವೆನ್ನುವುದು ನಿಜ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಜನಾರ್ದನ ರೆಡ್ಡಿ ಓರ್ವ ಸ್ನೇಹಿತರಾಗಿ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮೊಳಕಾಲ್ಮುರು ವಿಧಾನಸಭೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಅವರಿಗಿರುವ ಒಡನಾಟ, ಸಂಪರ್ಕವನ್ನು ಬಳಸುತ್ತಿದ್ದಾರೆ. ಸ್ನೇಹಿತರು ನಮ್ಮ ಪರವಾಗಿ ಕಾರ್ಯನಿರ್ವ ಹಿಸುತ್ತಾರೆಂದರೆ ನಾನ್ಯಾಕೆ ವಿರೋಧಿಸಲಿ.

ಮೊಳಕಾಲ್ಮುರಿಗೆ ನೀವು ಹೊರಗಿನವರು ಎಂಬ ವಿರೋಧವಿದೆಯಲ್ಲ? 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಕೆಲವರು ಏನೇ ಮಾತನಾಡಿದರೂ ಇನ್ನೆರಡು ದಿನಗಳಲ್ಲಿ ಮತದಾರರೇ ಉತ್ತರಿಸಲಿದ್ದಾರೆ. ಚಿತ್ರನಟರು ನನ್ನ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಮಾತನಾ ಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶ್ರೀರಾಮುಲು ಈಗಾಗಲೇ ತನ್ನ ಜೀವಿತಾವಧಿಯಲ್ಲಿ ಎಲ್ಲವನ್ನೂ ಅನುಭವಿಸಿದ್ದಾನೆ. ಜನರು ತಕ್ಕ ಉತ್ತರ ನೀಡಲಿದ್ದಾರೆ.

ಬಿಜೆಪಿ ಸರ್ಕಾರ ಬಂದಲ್ಲಿ ನೀವು ಉಪಮುಖ್ಯಮಂತ್ರಿಯಾಗುತ್ತೀರಂತೆ?

ನಾನೋರ್ವ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಪ್ರಮುಖ ಗುರಿ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಹಾಕಿ ಯಶಸ್ವಿ ಯಾಗುವೆ. ನಾಯಕ ಸಮಾಜದಲ್ಲಿ ರಾಮುಲು ಉಪ ಮುಖ್ಯಮಂತ್ರಿಯಾ ಗುತ್ತಾರೆಂಬ ಭಾವನೆಗಳಿವೆ. ಪಕ್ಷದ ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧ. ನಾನು ಎಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿಲ್ಲ, ಪಕ್ಷವೂ ಚರ್ಚಿಸಿಲ್ಲ.

ಸಿದ್ದು ಅವರನ್ನು ಸೋಲಿಸುತ್ತೇನೆ ಎಂದು ಹೇಗೆ ಹೇಳುತ್ತೀರಿ? 

ಪಕ್ಷದ ತೀರ್ಮಾನದಂತೆ ಸಾಮಾನ್ಯ ಹಾಗೂ ಎಸ್‌ಟಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇನೆ. ಬಾದಾಮಿಯಲ್ಲಿ ವಾಲ್ಮೀಕಿ ಸಮಾಜದ 40 ಸಾವಿರಕ್ಕೂ ಹೆಚ್ಚು ಮತಗಳಿವೆ. ಶ್ರೀರಾಮುಲು ಎನ್ನುವ ವ್ಯಕ್ತಿ ನಾಯಕ ಸಮಾಜಕ್ಕೆ ದುಡಿಯುತ್ತಿದ್ದಾನೆ, ವಾಲ್ಮೀಕಿ ಜಯಂತ್ಯುತ್ಸವ ಆಚರಣೆಗೆ ಕಾರಣವಾಗಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಮುದಾ ಯಕ್ಕೆ ಶೇ.7.5 ಮೀಸಲು ಸೌಲಭ್ಯ ಕಲ್ಪಿಸಲು ಹೋರಾಡುತ್ತಾನೆ ಎಂಬ ನಂಬಿಕೆ ಇದೆ. ಇದಲ್ಲದೇ ಬಿಜೆಪಿಯ ಸಾಂಪ್ರದಾಯಿಕ ಮತಗಳು ಇವು ನನ್ನ ಗೆಲುವಿಗೆ ವರದಾನ.

click me!