ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಸಾಯಿಖಾನೆ ಬಂದ್: ಯೋಗಿ

Published : May 10, 2018, 12:19 PM IST
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಸಾಯಿಖಾನೆ ಬಂದ್: ಯೋಗಿ

ಸಾರಾಂಶ

ಇಂಡಿ ಪಟ್ಟಣದ ಸದಾಶಿವ ನಗರದಲ್ಲಿರುವ ಹಮ್ಮಿಕೊಳ್ಳಲಾಗಿರುವ ಬಹಿರಂಗ ಸಮಾವೇಶದಲ್ಲಿ ಕರ್ನಾಟಕದ ಮಹಾ ಜನತೆಗೆ ಯೋಗಿಯ ಹೃದಯಪೂರ್ವಕ ನಮಸ್ಕಾರಗಳು ಎಂದು ಯೋಗಿ ಆದಿತ್ಯನಾಥ್  ಭಾಷಣ ಆರಂಭಿಸಿದರು.  ಇಂಡಿ ಬಿಜೆಪಿ ಅಭ್ಯರ್ಥಿ ದಯಾಸಾಗರ್ ಪಾಟೀಲ್’ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.   

ವಿಜಯಪುರ (ಮೇ. 10):  ಇಂಡಿ ಪಟ್ಟಣದ ಸದಾಶಿವ ನಗರದಲ್ಲಿರುವ ಹಮ್ಮಿಕೊಳ್ಳಲಾಗಿರುವ ಬಹಿರಂಗ ಸಮಾವೇಶದಲ್ಲಿ ಕರ್ನಾಟಕದ ಮಹಾ ಜನತೆಗೆ ಯೋಗಿಯ ಹೃದಯಪೂರ್ವಕ ನಮಸ್ಕಾರಗಳು ಎಂದು ಯೋಗಿ ಆದಿತ್ಯನಾಥ್  ಭಾಷಣ ಆರಂಭಿಸಿದರು.  ಇಂಡಿ ಬಿಜೆಪಿ ಅಭ್ಯರ್ಥಿ ದಯಾಸಾಗರ್ ಪಾಟೀಲ್’ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. 

ಮೇ 15 ರಂದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಕರ್ನಾಟಕ ದೇಶದ ಪ್ರಮುಖ ರಾಜ್ಯ. ತನ್ನ ಸಂಸ್ಕೃತಿ, ಆಧ್ಯಾತ್ಮ, ಪರಂಪರೆ ಮೂಲಕ ತುಂಬಿದೆ.  ಕಾಂಗ್ರೆಸ್’ನ ಸಿದ್ದರಾಮಯ್ಯ ಸರ್ಕಾರ ಜಿಹಾದಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ.  ಅರಾಜಕತೆ ಮನೆ ಮಾಡಿದೆ. ಅಭಿವೃದ್ದಿ ಕುಸಿದು ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪಾರ್ಟಿ ಗೆಲ್ಲುವ ಅವಶ್ಯಕತೆ ಇದೆ. ನಾನು ಉ.ಪ್ರದೇಶದವನು ಮಥರಾ, ಕಾಶಿ, ಅಯೋಧ್ಯದಿಂದ ಬಂದಿದ್ದೇನೆ. ಅಯೋಧ್ಯದ ರಾಜ ಶ್ರೀರಾಮ್ ನ ಬಂಟ ಹುಟ್ಟಿದ್ದು ಕರ್ನಾಟಕದಲ್ಲಿ. ಹೀಗಾಗಿ ಮತ್ತೆ ರಾಮ ರಾಜ್ಯವನ್ನ ಬಿಜೆಪಿ ಸ್ಥಾಪನೆ ಮಾಡಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಸಿಎಂ ಸಿದ್ದರಾಮಯ್ಯ ಸರ್ಕಾರವನ್ನ ಭ್ರಷ್ಟಾಚಾರ, ಕ್ರೈಂಗಳಿಂದ ಗುರುತಿಸುವ ಪರಿಸ್ಥಿತಿ ಇದೆ.  ಕರ್ನಾಟಕದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನ ಸಿದ್ದರಾಮಯ್ಯ ಸರ್ಕಾರ ಪೋಷಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಯಲ್ಲಿ ಕಸಾಯಿ ಖಾನೆ ಬಂದ್ ಮಾಡಿದ್ದೇವೆ. ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲೂ  ಮಾಡುತ್ತೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ  ಕುಸಿಯಲು ಆರಂಭಿಸಿದೆ. ಬಿಜೆಪಿ ಅಧಿಕಾರ ಸ್ಥಾಪಿಸುವತ್ತ ನಡೆದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಭಾಷಣದ ವೇಳೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ,  ಜೆಡಿಎಸ್ ಓವೈಸಿ ಜೊತೆ ಕೈ ಜೊಡಿಸಿದೆ. ಇದರ ಅರ್ಥ ಏನು?  ಹಿಂದೂ ಕಾರ್ಯಕರ್ತರ ಹತ್ಯೆಗಳು ಸಾಲಾಗಿ ನಡೆದಿವೆ.  ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ. ಮೋದಿ ಜಾರಿಗೆ ತಂದ ಯೋಜನೆಗಳು ಧರ್ಮ-ಜಾತಿ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದಿರಲಿಲ್ಲ. ಎಲ್ಲರಿಗೂ  ಸಿಗಲಿ ಎಂದು ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿತ್ತು.  ಆದರೆ ಈ ಯೋಜನೆಗಳು ಕರ್ನಾಟಕ ಜನತೆಗೆ ಸಿಗದಂತೆ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಯೋಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸಿದ್ದು ಸರ್ಕಾರ ಜಾತಿ ಆಧಾರದ ಮೇಲೆ ಜನರನ್ನ ಒಡೆದು ಹೋಳು ಮಾಡಿದೆ. ಕಾಂಗ್ರೆಸ್ ಕಾ ಹಾತ್ ಭ್ರಷ್ಟಾಚಾರ್ ಕಾ ಸಾಥ್, ಕಾಂಗ್ರೆಸ್ ಕಾ ಹಾತ್ ಜಿಹಾದಿಯೋಂಕಾ ಸಾಥ್ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ