ಪಕ್ಷೇತರ ಅಭ್ಯರ್ಥಿ ಹೈ ಜಾಕ್ ಮಾಡಿದ ಡಿ.ಕೆ ಶಿವಕುಮಾರ್

Published : May 16, 2018, 02:36 PM IST
ಪಕ್ಷೇತರ ಅಭ್ಯರ್ಥಿ ಹೈ ಜಾಕ್ ಮಾಡಿದ ಡಿ.ಕೆ ಶಿವಕುಮಾರ್

ಸಾರಾಂಶ

ಮುಳಬಾಗಿಲಿನಲ್ಲಿ ಗೆದ್ದಿರುವ ಎಚ್.ನಾಗೇಶ್ ಮೂಲತಃ ಕಾಂಗ್ರೆಸ್ ನಾಯಕರು, ಅವರನ್ನು ಈ ಚುನಾವಣೆಯಲ್ಲಿ ನಮ್ಮ ಪಕ್ಷ ಬೆಂಬಲಿಸಿದೆ. ಈಗ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಅತಿಮುಖ್ಯವಾಗಿರುವು ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಎಚ್.ನಾಗೇಶ್ ಅವರನ್ನು ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಕೋಲಾರಕ್ಕೆ ಆಗಮಿಸಿ ತಮ್ಮೊಂದಿಗೆ ಕರೆದೊಯ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜಾತ್ಯತೀತ ಪಕ್ಷಗಳೇ ಅಧಿಕಾರಕ್ಕೆ ಬರಲಿವೆ, ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದರು.

ಮುಳಬಾಗಿಲಿನಲ್ಲಿ ಗೆದ್ದಿರುವ ಎಚ್.ನಾಗೇಶ್ ಮೂಲತಃ ಕಾಂಗ್ರೆಸ್ ನಾಯಕರು, ಅವರನ್ನು ಈ ಚುನಾವಣೆಯಲ್ಲಿ ನಮ್ಮ ಪಕ್ಷ ಬೆಂಬಲಿಸಿದೆ. ಈಗ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಅತಿಮುಖ್ಯವಾಗಿರುವು ದರಿಂದ ತಮ್ಮೊಂದಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ