
ಬೆಂಗಳೂರು: ಮೇ 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೇ ದಿನ. ಇದುವರೆಗೆ 2407 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 25 ಮತ್ತು 26 ರಂದು ನಾಮಪತ್ರಗಳ ಪರಿಶೀಲನೆ ನಡೆದರೆ, ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಲಿದೆ.
224 ಕ್ಷೇತ್ರಗಳಿಗೆ ನಡೆಯುವ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದುವರೆಗೆ ನಡೆಸಿದ ಬಹುತೇಕ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಸುಳಿವು ನೀಡಿವೆ. ಆದರೂ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಗ್ಯಾರಂಟಿ. ಈ ಸಾರಿಯೂ ಜೆಡಿಎಸ್ ಕಿಂಗ್ ಆಗೋಲ್ಲ, ಕಿಂಗ್ ಮೇಕರ್ ಎಂಬುವುದು ಬಹುತೇಕ ಸಮೀಕ್ಷೆಗಳ ಫಲಿತಾಂಶ.
ಮಂಗಳೂರು ಬಂಟ್ವಾಳ ಕ್ಷೇತ್ರಕ್ಕೆ ಜೈಲಿನಿಂದಲೇ ಎಂಇಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ವಿಶೇಷ. ಸತೀಶ್ ಜಾರಕಿಹೊಳೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಮತ್ತೊಂದು ವಿಶೇಷ.
ನಾಮಪತ್ರ ಸಲ್ಲಿಲು ಕಡೆಯ ದಿನವಾದ ಇಂದು ನಡೆದ ಪೊಲಿಟಿಕಲ್ ಚಮಕ್ ಏನು ನೋಡೋಣ ಬನ್ನಿ.
#ನಮ್ಮ_ಎಲೆಕ್ಷನ್ | ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 201