ದೇವೇಗೌಡರು ಮೊದಲು ಸಂಸ್ಕಾರ ಕಲಿಯಿಲಿ: ಕಾಂಗ್ರೆಸ್ ಮುಖಂಡ

First Published May 3, 2018, 4:06 PM IST
Highlights

ಇಪ್ಪತ್ತು ನಾಲ್ಕು ಗಂಟೆಯೂ ರಾಜಕೀಯ ಮಾಡಿಕೊಂಡಿರುವ ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡರು ಮೊದಲು ಸಂಸ್ಕಾರ ಕಲಿಯಲಿ, ಎಂದು ಸಂಸದ ಎಂ.ವೀರಪ್ಪ ಮೋಯ್ಲಿ ಕೇಳಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಇಪ್ಪತ್ತು ನಾಲ್ಕು ಗಂಟೆಯೂ ರಾಜಕೀಯ ಮಾಡಿಕೊಂಡಿರುವ ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡರು ಮೊದಲು ಸಂಸ್ಕಾರ ಕಲಿಯಲಿ, ಎಂದು ಸಂಸದ ಎಂ.ವೀರಪ್ಪ ಮೋಯ್ಲಿ ಕೇಳಿಕೊಂಡಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಮೋಯ್ಲಿ, 'ನಾನು ರಾಜಕೀಯದೊಂದಿಗೆ ಸಾಹಿತ್ಯವನ್ನೂ ‌ಕಲಿಯುತ್ತೇನೆ. ಕೃತಿಗಳು, ಗ್ರಂಥಗಳನ್ನು ಓದಿದ್ರೆ ಸಂಸ್ಕಾರ ಬರುತ್ತದೆ. ಒಳ್ಳೆಯ ಆಡಳಿತವನ್ನೂ ನೀಡಬಹುದು,' ಎಂದಿದ್ದಾರೆ.

ಪಾಪ ರಾಹುಲ್ ಗಾಂಧಿ ಇನ್ನೂ ಚಿಕ್ಕೋನು

'ಈ ಹಿಂದೆ  ದೇವೇಗೌಡರಿಗೆ ಕಾದಂಬರಿ ಓದುವಂತೆ ಹೇಳಿದ್ದೆ. ನಾನೇ ಪುಸ್ತಕ ಕೊಡುವುದಾಗಿಯೂ ಹೇಳಿದ್ದೆ. ನಾನು ಕೊಡಲೂ ಇಲ್ಲ, ಅವರು ಓದಲೂ ಇಲ್ಲ. ಅವರಿಗೆ ಮಾಟ ಮಂತ್ರ, ಜ್ಯೋತಿಷ್ಯದ ಮೇಲೆ ಆಸಕ್ತಿ, ಹೀಗಾಗಿ ಅವರು ಜ್ಯೋತಿಷಿಯನ್ನೇ ನೇಮಿಸಿಕೊಂಡಿದ್ದಾರೆ,' ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಹಣ ಹಂಚಿಕೆ

ಚುನಾವಣಾ ಪ್ರಚಾರಕ್ಕೆ ಉಡುಪಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರನ್ನು ಹೊಗಳಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಬೆನ್ನಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಸಾಕಷ್ಟು ಊಹೂಪೋಹಗಳು ಹುಟ್ಟಿಕೊಂಡಿವೆ. ದೇವೇಗೌಡರನ್ನು ಪ್ರಧಾನಿ ಹೊಗಳುವ ಮೂಲಕ, ಕಾಂಗ್ರೆಸ್ ವಿರೋಧಿ ಅಲೆಯನ್ನು ಎಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿಗೆ ಎಫ್ ಗ್ರೇಡ್ ನೀಡಿದ ರಾಹುಲ್

click me!