ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ತಿರುವು, ಕ್ಷಣಕ್ಕೊಂದು ಮುರಿವು

First Published May 15, 2018, 6:46 PM IST
Highlights

ಅಂದು ಕೊಂಡಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸಲೀಸಲ್ಲ. ಇನ್ನೂ ಬಿ.ಎಸ್.ಯಡಿಯೂರಪ್ಪ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ.  ಹೇಗೆ ಗೊತ್ತಾ?

ಬೆಂಗಳೂರು: ಅಂದು ಕೊಂಡಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸಲೀಸಲ್ಲ. ಇನ್ನೂ ಬಿ.ಎಸ್.ಯಡಿಯೂರಪ್ಪ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ.  ಹೇಗೆ ಗೊತ್ತಾ?

ಪ್ರತೀ ಕ್ಷಣವೂ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ರಾಜ್ಯ ರಾಜಕೀಯ ನಾಟಕದ ಕ್ಲೈಮಾಕ್ಸ್ ಏನಾಗಬಹುದೆಂಬುದನ್ನು ಊಹಿಸುವುದು ಅಸಾಧ್ಯ. ಈಗಾಗಲೇ ಸರಕಾರ ರಚಿಸಲು ಬಿಜೆಪಿ ಮುಖ್ಯಮಂತ್ರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಅತ್ತ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದ್ದು, ಸರಕಾರ ರಚಿಸುವಂತೆ ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರ ಹೈಜಾಕ್

ಇದೇ ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯ ಬಗ್ಗೆ ಮಂಗಳವಾರ ಸಂಜೆ ಕಿಕ್ಕಿರಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಡಾ.ಪರಮೇಶ್ವರ್ ತಮ್ಮ ಈ ಮನವಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೂ ಲಿಖಿತ ಮನವಿ ಸಲ್ಲಿಸಿರುವುದಾಗಿ ಹೇಳಿದರು.  

ರಾಯಚೂರು ಮತ ಸಮೀಕ್ಷೆ

ಈಗ ಚೆಂಡು ರಾಜ್ಯಪಾಲ ವಾಜುಬಾಯಿ ವಾಲಾ ಅವರ ಅಂಗಳದಲ್ಲಿದ್ದು, ಎಲ್ಲರ ಚಿತ್ತ ರಾಜಭವನದ ಮೇಲಿದೆ. ಅಂದ ಹಾಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಲಿರುವುದರಿಂದ ಸರಕಾರ ರಚಿಸುವ ಸರ್ಕಸ್ ಮತ್ತಷ್ಟು ರಂಗೇರುವುದರಲ್ಲಿ ಸಂಶಯವಿಲ್ಲ.

ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ ಅವರು ಬೆಂಗಳೂರಿನಲ್ಲಿಯೇ ಕ್ಯಾಂಪ್ ಮಾಡಿದ್ದು, ಮೈತ್ರಿ ಸರಕಾರದ ಕಂಬಳಿಯನ್ನು ನೇಯುತ್ತಿದ್ದಾರೆ. ಅಂದ ಹಾಗೆ ಗುಲಾಂ ನಬಿ ಆಜಾದ್ ಮತ್ತು ಎಚ್.ಡಿ.ದೇವೇಗೌಡರು ಆಪ್ತ ಮಿತ್ರರೂ ಕೂಡ. 
 

click me!