ಮಳಖೇಡಕ್ಕೆ ಆಗಮಿಸಲಿರುವ ಪ್ರಧಾನಿಗೆ ವಿಶೇಷ ಉಡುಗೊರೆ

By Kannadaprabha News  |  First Published Jan 17, 2023, 12:39 PM IST

ಜ.19ರಂದು ಮಳಖೇಡಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಲೋ ಸ್ಟೋನ್‌’ ಎಂಬ ಶಿಲೆಯ ಪೌಡರ್‌ನಲ್ಲಿ ತಯಾರಿಸಿರುವ ಅವರ ಮೂರ್ತಿಗಳನ್ನು ಉಡುಗೋರೆಯಾಗಿ ನೀಡಲು ಕಲಬುರಗಿಯ ಕಲಾವಿದ ವಿಶ್ವೇಶ್ವರಯ್ಯ ನಯೀಂದ್ರಕರ್‌ ಸಿದ್ಧರಾಗಿದ್ದಾರೆ.


ಕಲಬುರಗಿ: ಜ.19ರಂದು ಮಳಖೇಡಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಲೋ ಸ್ಟೋನ್‌’ ಎಂಬ ಶಿಲೆಯ ಪೌಡರ್‌ನಲ್ಲಿ ತಯಾರಿಸಿರುವ ಅವರ ಮೂರ್ತಿಗಳನ್ನು ಉಡುಗೋರೆಯಾಗಿ ನೀಡಲು ಕಲಬುರಗಿಯ ಕಲಾವಿದ ವಿಶ್ವೇಶ್ವರಯ್ಯ ನಯೀಂದ್ರಕರ್‌ ಸಿದ್ಧರಾಗಿದ್ದಾರೆ. ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಈ ಸಂಬಂಧ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ನನ್ನ ಉಡುಗೊರೆ ಬಗ್ಗೆ ತಿಳಿಸಿದ್ದೇನೆ. ಅಲ್ಲದೆ, ಪಿಎಂ ಕಚೇರಿ, ಮೋದಿಯವರಿಗೂ ಮೇಲ್‌, ಟ್ವೀಟ್‌ ಮೂಲಕ ನನ್ನ ಮನದಿಂಗಿತ ತಿಳಿಸಿದ್ದೇನೆ. 'ಪೋಲೋ ಸ್ಟೋನ್‌' ಎಂಬ ಶಿಲೆಯ ಪೌಡರ್‌ನಲ್ಲಿ ಮೋದಿಯವರ ಮೂರ್ತಿಗಳನ್ನು ಮಾಡಿದ್ದು, ಅವರಿಗೆ ಉಡುಗೋರೆಯಾಗಿ ನೀಡಲು ಉತ್ಸುಕನಾಗಿದ್ದೇನೆ’ ಎಂದು ತಿಳಿಸಿದರು.  

 

Tap to resize

Latest Videos


 

click me!