ಕಲಬುರ್ಗಿಯ 70ರ ತಾತನ ಭಕ್ತಿಯ ನಡಿಗೆ, 2,200 ಕಿ.ಮೀ ಪಾದಯಾತ್ರೆ ಮೂಲಕ ಕೇದರನಾಥ ದರ್ಶನ

Published : May 16, 2025, 04:22 PM IST
ಕಲಬುರ್ಗಿಯ 70ರ ತಾತನ ಭಕ್ತಿಯ ನಡಿಗೆ,  2,200 ಕಿ.ಮೀ ಪಾದಯಾತ್ರೆ ಮೂಲಕ ಕೇದರನಾಥ ದರ್ಶನ

ಸಾರಾಂಶ

ಕಲಬುರ್ಗಿಯಿಂದ ಕೇದರನಾಥಕ್ಕೆ ಬರೋಬ್ಬರಿ 2,200 ಕಿಲೋಮೀಟರ್ ದೂರ. ಆದರೆ 70 ಹರೆಯದ ವ್ಯಕ್ತಿ ಪಾದಯಾತ್ರೆ ಮೂಲಕ ಕೇದನಾರಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. 

ರುದ್ರಪ್ರಯಾಗ್(ಮೇ.16) ಕಲಬುರ್ಗಿಯ 70 ಹರೆಯದ ಭಕ್ತರೊಬ್ಬರು ಬರೋಬ್ಬರಿ 2,200 ಕಿಲೋಮೀಟರ್ ದೂರ ಪಾದಯಾತ್ರೆ ಮೂಲಕ ಕೇದಾರನಾಥ ದರ್ಶನ ಮಾಡಿದ ವಿಶೇಷ ಘಟನೆ ನಡೆದಿದೆ.  ಬರೋಬ್ಬರಿ 2 ತಿಂಗಳು ಸತತವಾಗಿ ಪಾದಯಾತ್ರೆ ಮಾಡಿದ್ದಾರೆ. ಬೆಟ್ಟ ಗುಡ್ಡ, ರಸ್ತೆ, ಹೆದ್ದಾರಿ, ಸಣ್ಣ ದಾರಿಗಳ ಮೂಲಕ ಸಾಗಿದ್ದಾರೆ. ಸತತವಾಗಿ ನಡೆದಿದ್ದಾರೆ. ಪಾದಯಾತ್ರೆ ಮೂಲಕವೇ ಕೇದಾರನಾಥನ ದರ್ಶನ ಪಡೆಯಲು ಇಚ್ಚಿಸಿದ ಕಲಬುರ್ಗಿಯ 70ರ ಹರೆಯದ ಭಕ್ತ ಕೊನೆಗೂ ಯಾವುದೇ ಅಡೆ ತಡೆಗಳಿಲ್ಲದೆ ಕೇದಾರನಾಥನ ದರ್ಶನ ಪಡೆದ ಅಪರೂಪದ ಘಟನೆ ನಡೆದಿದೆ. 

ಪಾದಯಾತ್ರೆ ಮೂಲಕ ಕೇದಾರನಾಥನ ದರ್ಶನ
ಕಲಬುರ್ಗಿಯ 70 ಹರೆಯ ಈ ಭಕ್ತನಿಗೆ ಕೇದಾರನಾಥ ದರ್ಶನ ಪಡೆಯಲು ಬಯಸಿದ್ದಾರೆ. ಆದರೆ ವಿಮಾನ ಪ್ರಯಾಣ, ರೈಲು ಪ್ರಯಾಣದ ಮೂಲಕ ಅಲ್ಲ. ಬದಲಾಗಿ ಸನಾತನ ಧರ್ಮದಲ್ಲಿ ಪ್ರಮುಖವಾಗಿರು ಪಾದಯಾತ್ರೆ ಮೂಲಕ ದೇವರ ದರ್ಶನದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ. ಕೇದಾರನಾಥನ ದರ್ಶನವನ್ನು ಪಾದಯಾತ್ರೆ ಮೂಲಕ ಪಡೆಯಬೇಕು ಎಂದರೆ ರೈಲು ಅಥವಾ ವಿಮಾನದ ಮೂಲಕ ಪ್ರಯಾಣಿಸಲು ಕುಟುಂಬಸ್ಥರು ಸೇರಿದಂತೆ ಹಲವರು ಸೂಚಿಸಿದ್ದಾರೆ. ವಯಸ್ಸು ಹಾಗೂ ಸಾವಿರಾರು ಕಿಲೋಮೀಟರ್ ನಡಿಗೆ ಉತ್ತಮ ಆರೋಗ್ಯವನ್ನು ಏರುಪೇರು ಮಾಡಬಲ್ಲದು ಅನ್ನೋ ಕಾರಣಕ್ಕೆ ಸೂಚನೆ ನೀಡಿದ್ದಾರೆ. ಆದರೆ ಇದ್ಯಾವ ಸೂಚನೆಯನ್ನು ಇವರು ಕೇಳಿಲ್ಲ. ತಾನು ಪಾದಯಾತ್ರೆ ಮೂಲಕವೇ ಕೇದಾರನಾಥ ದರ್ಶನ ಪಡೆಯುವುದಾಗಿ ಹೇಳಿ ಹೊರಟೇ ಬಿಟ್ಟಿದ್ದಾರೆ.

ಕೇದಾರನಾಥ ಕ್ಷೇತ್ರದ ಕುರಿತು ಯಾರಿಗೂ ತಿಳಿಯದ ಅಚ್ಚರಿ ಮೂಡಿಸುವ ರಹಸ್ಯಗಳು

ಮಾರ್ಚ್ 3ಕ್ಕೆ ಪಾದಯಾತ್ರೆ ಆರಂಭ, ಮೇ.1ಕ್ಕೆ ಕೇದಾರನಾಥ ದರ್ಶನ
ಮಾರ್ಚ್ 3 ರಂದು ಕೇದರನಾಥ ದರ್ಶನಕ್ಕಾಗಿ ಪಾದಯಾತ್ರೆ ಆರಂಭಿಸಲಾಗಿದೆ. ಬರೋಬ್ಬರಿ 2 ತಿಂಗಳ ಕಾಲ ಪಾದಯಾತ್ರೆ ಮಾಡಿದ್ದಾರೆ. ಪ್ರತಿ ದಿನ ನಡೆದುಕೊಂಡು ಸಾಗಿದ್ದಾರೆ. ಮೇ.1ರಂದು ಕೇದಾರನಾಥ ತಲುಪಿದ್ದಾರೆ. ಬಳಿಕ ದರ್ಶನ ಮಾಡಿದ್ದಾರೆ. ಒಂದೇ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ಪ್ರತಿ ದಿನ ನಡೆದಿದ್ದಾರೆ. ಪ್ರತಿ ದಿನ ಕೈಲಾದಷ್ಟು ನಡೆದು ಸಾಗಿದ್ದಾರೆ. ಕೆಲವೇ ಕೆಲವು ಗಂಟೆ ವಿಶ್ರಾಂತಿ ಪಡೆದು ಮತ್ತೆ ನಡಿಗೆ ಆರಂಭಿಸಿದ್ದಾರೆ. ಮಧ್ಯಾಹ್ನದ ಉರಿ ಬಿಸಿಲಿನ ಕಾರಣ ವಿಶ್ರಾಂತಿ ಪಡೆಯುತ್ತಿದ್ದರೆ, ರಾತ್ರಿ ನಡೆಯುತ್ತಿದ್ದರು. 

 

 

ಕೇದಾರನಾಥನ ಆಶೀರ್ವಾದದಿಂದ ಆಯಾಸವಾಗಲಿಲ್ಲ
ಕಾಲ್ನಡಿಗೆ ಮೂಲಕ ಕೇದಾರನಾಥ ದರ್ಶನ ಪಡೆದ ಭಕ್ತ ತನಗೆ ಆಯಾಸವೇ ಆಗಿಲ್ಲ ಎಂದಿದ್ದಾರೆ. ಕೇದಾರನಾಥನ ಮಾರ್ಗದರ್ಶನ, ಆಶೀರ್ವಾದದಿಂದ ಯಾವುದೇ ಸಮಸ್ಯೆಯಾಗಲಿಲ್ಲ. ದರ್ಶನ ಪಡೆಯಬೇಕೆಂದುಕೊಂಡರೆ ಕೇದಾರನಾಥ ನಮಗೆ ಸಹಾಯ ಮಾಡುತ್ತಾನೆ. ಈಗ ಯಾವುದೇ ಸಮಸ್ಯೆಯಾಗದೇ ನಾವು ಕೇದಾರನಾಥ ತಲುಪಿ ದರ್ಶನ ಪಡೆದಿದ್ದೇವೆ ಎಂದಿದ್ದಾರೆ.

ಹಲವರು ಈ ಭಕ್ತಿಯ ಮಾರ್ಗಕ್ಕೆ ನಮನ ಸಲ್ಲಿಸಿದ್ದಾರೆ. ಅಷ್ಟು ದೂರ ಈ ವಯಸ್ಸಿನಲ್ಲಿ ನಡೆದುಕೊಂಡು ಕೇದಾರನಾಥನ ದರ್ಶನ ಪಡೆದಿದ್ದಾರೆ ಎಂದರೆ ಅವರಿಗೆ ಕೇದಾರನಾಥನೇ ಮಾರ್ಗ ತೋರಿಸಿದ್ದಾರೆ. ಬೆಂಬಲವಾಗಿ ನಿಂತಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಸಾವಿನ ಸಮೀಪ ಹೋಗಿಬಂದ ಜಾಹ್ನವಿ ಕಪೂರ್​, ಸಾರಾ ಅಲಿ ಖಾನ್​! ಶಾಕಿಂಗ್​ ಘಟನೆ ರಿವೀಲ್​

PREV
Read more Articles on
click me!

Recommended Stories

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!