ಅಸ್ವಸ್ಥ ತಾಯಿಯ ನೋಡಿಕೊಳ್ಳಲು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಹೇಳಿದ್ದೇನು? ಕೆಲಸ ತೊರೆದು ಸಂಕಟ ತೋಡಿಕೊಂಡ ಮಹಿಳೆ

Published : Jan 06, 2026, 05:13 PM IST
Manager refuse leave to employee

ಸಾರಾಂಶ

ತಾಯಿಗೆ ಹುಷಾರಿಲ್ಲ ಎಂದು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ರಜೆ ನೀಡದೇ, ತಾಯಿಯನ್ನು ಬೇಕಿದ್ದರೆ ಆಶ್ರಯ ಕೇಂದ್ರಕ್ಕೆ ಸೇರಿಸು ರಜೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ.

ತಾಯಿಗೆ ಹುಷಾರಿಲ್ಲ ಎಂದು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ರಜೆ ನೀಡದೇ, ತಾಯಿಯನ್ನು ಬೇಕಿದ್ದರೆ ಆಶ್ರಯ ಕೇಂದ್ರಕ್ಕೆ ಸೇರಿಸು ರಜೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ. ಈ ವಿಚಾರವನ್ನು ಸ್ವತಃ ಉದ್ಯೋಗಿಯೊಬ್ಬರು ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಜನ ಮ್ಯಾನೇಜರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಪೋಸ್ಟ್‌ನ್ನು IndianWorkplace forum ಎಂಬ ರೆಡಿಟ್‌ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ಒಬ್ಬ ಉದ್ಯೋಗಿಗೆ EL, PL, SL, ಎಂದು ಸಾಕಷ್ಟು ರಜೆಗಳಿರುತ್ತವೆ. ಆದರೂ ಇಲ್ಲಿ ಉದ್ಯೋಗಿಗೆ ಮ್ಯಾನೇಜರ್ ರಜೆ ನಿರಾಕರಿಸಿದ್ದಾರೆ. ಪ್ರಮುಖ ಪ್ರೈವೇಟ್ ಬ್ಯಾಂಕೊಂದರ ಉದ್ಯೋಗಿ ಆಗಿರುವ ಮಹಿಳೆ, ಔಷಧಿಯ ಸಮಸ್ಯೆಯಿಂದಾಗಿ ತಮ್ಮ ತಾಯಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ನೋಡಿಕೊಳ್ಳುವುದಕ್ಕೆ ರಜೆ ಬೇಕು ಎಂದು ಮ್ಯಾನೇಜರ್ ಅವರನ್ನು ಕೇಳಿದ್ದಾರೆ. ನಮ್ಮ ತಾಯಿಯೇನು ವಿಶೇಷವಾದ ಚಿಕಿತ್ಸೆಯನ್ನು ಪಡೆಯುತ್ತಿರಲಿಲ್ಲ, ಬದಲಾಗಿ ಅವರಿಗೆ ವಿಶೇಷವಾದ ಆರೈಕೆ ಬೇಕಿತ್ತು. ಅದಕ್ಕಾಗಿ ಕೆಲ ದಿನಗಳ ರಜೆ ಕೇಳಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಆದರೆ ಈ ರಜೆಗೆ ಅವರ ಮ್ಯಾನೇಜರ್‌ನ ಪ್ರತಿಕ್ರಿಯೆ ಮಾತ್ರ ಅಮಾನವೀಯವಾಗಿತ್ತು. ನಿಮ್ಮ ತಾಯಿ ಹುಷಾರಾಗದೇ ಹೋದರೆ ಅರನ್ನು ಯಾವುದಾದರೂ ಆಸ್ಪತ್ರೆಗೋ ಆಶ್ರಯ ಕೇಂದ್ರಕ್ಕೋ ಸೇರಿಸಿ ಕೆಲಸಕ್ಕೆ ಬನ್ನಿ ಎಂದು ಮ್ಯಾನೇಜರ್ ಉದ್ಯೋಗಿಗೆ ಹೇಳಿದ್ದಾರೆ. ಮ್ಯಾನೇಜರ್‌ನ ಈ ಪ್ರತಿಕ್ರಿಯೆಯಿಂದಾಗಿ ಮಹಿಳೆಗೆ ಉದ್ಯೋಗ ಮಾಡುವುದು ಅಮ್ಮನನ್ನೂ ನೋಡಿಕೊಳ್ಳುವುದೋ ಎಂದು ಗೊಂದಲ ಶುರುವಾಗಿತ್ತು. ಕೊನೆಯದಾಗಿ ತಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ಕೆಲಸ ತೊರೆಯಬೇಕಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್‌ಗೆ ಒಳಗಾಗಿ ಸೇನಾ ರಹಸ್ಯಗಳ ಪಾಕಿಸ್ತಾನಕ್ಕೆ ನೀಡಿದ ವ್ಯಕ್ತಿಯ ಬಂಧನ

ಕಂಪನಿಗಾಗಿ ಹಲವು ವರ್ಷಗಳ ಕಾಲ ದುಡಿಮೆ ಮಾಡಿದರೂ ಕಂಪನಿ ತನಗೆ ಕಷ್ಟಕಾಲದಲ್ಲಿ ರಜೆ ನೀಡದ ಕಾರಣ ಅನಾರೋಗ್ಯಪೀಡಿತ ತಾಯಿಯನ್ನು ನೋಡಿಕೊಳ್ಳುವುದಕ್ಕೆ ನಿರ್ಧರಿಸಿ ತಾನು ಕೆಲಸ ತೊರೆದೇ ಎಂದು ಅವರು ಹೇಳಿಕೊಂಡಿದ್ದಾರೆ. ಈ ಘಟನೆಯಿಂದಾಗಿ ತಾನು ತೀವ್ರ ಅಸಮಾಧಾನ, ಆತಂಕದಿಂದ ಕಳೆದೆ. ಇಂತಹ ಮ್ಯಾನೇಜರ್‌ಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಜಾಗ ಇಲ್ಲ : ಅಮ್ಮನ ವೃದ್ಧಾಶ್ರಮಕ್ಕೆ ಕರೆತಂದ ಮಗಳು: ಮಗಳ ಮಾತಿಗೆ ಕಣ್ಣೀರಿಟ್ಟ ವೃದ್ಧ ತಾಯಿ

ಈ ಪೋಸ್ಟ್‌ಗೆ ಅನೇಕರು ಭಾವುಕರಾಗಿ ಪ್ರತಿಕ್ರಿಯಿಸಿದ್ದು, ನಿರ್ದಯಿ ಮ್ಯಾನೇಜರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಇರುವ ಮಾನವೀಯತೆಯ ಕೊರತೆಯ ಬಗ್ಗೆ ಅನೇಕರು ಕಿಡಿಕಾರಿದ್ದಾರೆ. ಅನೇಕರು ಅಂತಹ ಕಂಪನಿ ಹಾಗೂ ಮ್ಯಾನೇಜರ್‌ಗಳ ವಿರುದ್ಧ ಕಾನೂನು ಮೊರೆ ಹೋಗುವಂತೆ ಕೇಳಿದ್ದಾರೆ. ಬಹುತೇಕ ಕಾರ್ಪೋರೇಟ್ ಕಂಪನಿಗಳು ಮಾನವೀಯತೆಗಿಂತ ಕಠಿಣವಾದ ನಿರೀಕ್ಷೆಗಳಿಗೆ ಆದ್ಯತೆ ನೀಡುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ಈ ವರ್ಷ ಈ ರಾಶಿ ಜನರು ಉದ್ಯೋಗ ಬದಲಾಯಿಸುವುದು ಒಳ್ಳೆಯದು, ಇಲ್ಲದಿದ್ದರೆ, ಕೊನೆಯಿಲ್ಲದ ಕಷ್ಟಗಳು ಎದುರಾಗುತ್ತವೆ
ಬಳ್ಳಾರಿ ಅಮಾನತ್ತಾದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆ ಕೇಸ್-ಅಪ್ಪನ ಸ್ಪಷ್ಟನೆ; ಸಸ್ಪೆಂಡ್ ಮರುಪರಿಶೀಲನೆಗೆ ಮನವಿ!