AIನಲ್ಲಿ ಭವಿಷ್ಯವಿದೆ ಎಂದೋರಿಗೆ ಕಂಪೆನಿ ಶಾಕ್​: ಊಟ ಮುಗಿಸಿ ಬರೋದ್ರೊಳಗೆ 550 ಭಾರತೀಯರು ಮನೆಗೆ

Published : Nov 02, 2026, 04:32 PM IST
Innodata Layoff

ಸಾರಾಂಶ

ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪೆನಿ ಇನ್ನೋಡಾಟಾ 550ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ವಜಾಗೊಳಿಸಿದೆ. ಮಧ್ಯಾಹ್ನದ ಊಟ ಮುಗಿಸಿ ವಾಪಸ್ ಬರುವಷ್ಟರಲ್ಲಿ ಉದ್ಯೋಗಿಗಳ ಲ್ಯಾಪ್‌ಟಾಪ್ ಮತ್ತು ಐಡಿಗಳು ಸ್ಥಗಿತಗೊಂಡು, ವಜಾ ಆದೇಶದ ಇಮೇಲ್ ಬಂದಿದೆ. ಈ ಹಠಾತ್ ಬೆಳವಣಿಗೆಯಿಂದ ಉದ್ಯೋಗಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ನ್ಯೂಜೆರ್ಸಿ: ಕೃತಕ ಬುದ್ಧಿಮತ್ತೆ (AI)ನಲ್ಲಿ ಭವಿಷ್ಯವಿದೆ ಎಂದುಕೊಂಡು ಈಗ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಎಐ ಕೋರ್ಸ್​ಗೆ ಕಳುಹಿಸುತ್ತಿದ್ದಾರೆ.ಆದರೆ ಇದರ ನಡುವೆಯೇ, ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಸೇವೆಗಳ ಕಂಪೆನಿ ಇನ್ನೋಡಾಟಾದಲ್ಲಿ 550 ಕ್ಕೂ ಹೆಚ್ಚು ಭಾರತದ ಉದ್ಯೋಗಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ! ಅದೂ ಉದ್ಯೋಗಿಗಳು ಮಧ್ಯಾಹ್ನ ಊಟ ಮುಗಿಸಿ ವಾಪಸ್​​ ಬರುತ್ತಿದ್ದಂತೆಯೇ ವಜಾಗೊಳಿಸಿರುವ ಆದೇಶ ಅವರ ಕೈಗೆ ಸಿಕ್ಕಿರುವುದಾಗಿ ವರದಿಯಾಗಿದೆ.

ಮಧ್ಯಾಹ್ನದ ನಂತರ ಶಾಕ್​

ಉದ್ಯೋಗಿಗಳು ಬೆಳಿಗ್ಗೆ ಲಾಗಿನ್ ಆಗಿ ತಮ್ಮ ಹಾಜರಾತಿಯನ್ನು ಎಂದಿನಂತೆ ಗುರುತಿಸಿಕೊಂಡರು. ಆದರೆ ಮಧ್ಯಾಹ್ನ ಊಟ ಮಾಡಿ ಬರುತ್ತಿದ್ದಂತೆಯೇ, ಕಂಪೆನಿಯ ಲ್ಯಾಪ್‌ಟಾಪ್‌ಗಳು, ಅಧಿಕೃತ ಐಡಿಗಳು ಮತ್ತು ಆಂತರಿಕ ವ್ಯವಸ್ಥೆಗಳು ಒಂದೊಂದೇ ಕಟ್​ ಆಗತೊಡಗಿದವು. ಆರಂಭದಲ್ಲಿ ಉದ್ಯೋಗಿಗಳು ಇದನ್ನು ತಾಂತ್ರಿಕ ದೋಷ ಎಂದುಕೊಂಡರು. ಕೊನೆಗೆ ಅಸಲಿ ವಿಷ್ಯ ತಿಳಿಯುತ್ತಲೇ ಅವರು ಹೌಹಾರಿ ಹೋಗಿದ್ದಾರೆ. ಕೆಲವು ಉದ್ಯೋಗಿಗಳು ಕಳೆದ ಅಕ್ಟೋಬರ್ 26 ಅನ್ನು ಕಂಪೆನಿಯ HR ಪೋರ್ಟಲ್‌ನಲ್ಲಿ ವಜಾ ಆದೇಶದ ಬಗ್ಗೆ ತಿಳಿಸಿದ್ದರಿಂದ ಇದು ತಮ್ಮ ತಮ್ಮನ್ನು ತೆಗೆದಿರುವುದು ಎಂದು ಉದ್ಯೋಗಿಗಳಿಗೆ ಗೊತ್ತಾಗಿದೆ. ಅಷ್ಟರಲ್ಲಿಯೆ ಅವರ ಆಫೀಷಿಯಲ್​ ಇ-ಮೇಲ್​ ಕೂಡ ಸ್ಥಗಿತಗೊಂಡ ವೈಯಕ್ತಿಕ ಇಮೇಲ್ ಖಾತೆಗಳಿಗೆ ವಜಾಗೊಳಿಸುವ ಇಮೇಲ್‌ಗಳನ್ನು ಕಳುಹಿಸಲಾಗಿದೆ!

X ನಲ್ಲಿ ವಜಾಗೊಳಿಸಿರುವ ಆದೇಶದ ಮೇಲ್​ ವೈರಲ್​ ಆಗುತ್ತಿದೆ. ಹಠಾತ್ ಉದ್ಯೋಗ ನಷ್ಟವು ಉದ್ಯೋಗಿಗಳು ತಮ್ಮ ಉದ್ಯೋಗ ಸ್ಥಿತಿಯ ಬಗ್ಗೆ ಮಾಹಿತಿಗಾಗಿ ಪರದಾಡುವಂತೆ ಮಾಡಿದೆ. ಅದರಲ್ಲಿಯೂ ಭಾರತೀಯರಿಗೆ ಇದು ಸಿಕ್ಕಾಪಟ್ಟೆ ಶಾಕ್​ ಕೊಟ್ಟಿದೆ. ವಜಾಗೊಳಿಸುವಿಕೆಯು ಫಿಲಿಪ್ಪೀನ್ಸ್​ನಲ್ಲಿರುವ ಇನ್ನೋಡಾಟಾ ಅವರ ಕಾರ್ಯಪಡೆಯ ಮೇಲೆಯೂ ಪರಿಣಾಮ ಬೀರಿದೆ ಎಂದು ತೋರುತ್ತಿದೆ. ಅಲ್ಲಿನ ಉದ್ಯೋಗಿಗಳು ರೇಟರ್‌ಗಳು, ಗುಣಮಟ್ಟದ ತಜ್ಞರು, ತಂಡದ ನಾಯಕರು ಮತ್ತು ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ವಜಾ ಮಾಡಿರುವ ಬಗ್ಗೆ ವರದಿಯಾಗಿದೆ. ಆದರೆ, ಕಂಪೆನಿ ಇನ್ನೂ ಉದ್ಯೋಗಿಗಳ ಸಂಖ್ಯೆಯನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ ಅಥವಾ ವರದಿಯಾದ ವಜಾಗೊಳಿಸುವಿಕೆಗೆ ಅಧಿಕೃತ ವಿವರಣೆಯನ್ನು ನೀಡಿಲ್ಲ.

ಇನ್ನೋಡಾಟಾ ಏನು ಮಾಡುತ್ತದೆ?

ನ್ಯೂಜೆರ್ಸಿಯ ರಿಡ್ಜ್‌ಫೀಲ್ಡ್ ಪಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇನ್ನೋಡಾಟಾ ತಂತ್ರಜ್ಞಾನ ಕಂಪೆನಿಗಳಿಗೆ ಡೇಟಾ ಎಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸುತ್ತದೆ. 1988 ರಲ್ಲಿ ಸ್ಥಾಪನೆಯಾದ ಕಂಪೆನಿಯು ಡೇಟಾ ಲೇಬಲಿಂಗ್, ಮಾದರಿ ತರಬೇತಿ, AI ಮೌಲ್ಯಮಾಪನ ಮತ್ತು ಸುರಕ್ಷತಾ ಪರೀಕ್ಷೆಯ ಮೂಲಕ ವ್ಯವಹಾರಗಳಿಗೆ AI ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.

ಇದರ ವೆಬ್‌ಸೈಟ್ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಆಪಲ್, ಸೋನಿ, ಹೆವ್ಲೆಟ್-ಪ್ಯಾಕರ್ಡ್, ಸ್ನೋಫ್ಲೇಕ್, ಬೋಯಿಂಗ್ ಮತ್ತು ಡೆಲಾಯ್ಟ್ ಸೇರಿದಂತೆ ತನ್ನ ಗ್ರಾಹಕರಲ್ಲಿ ಹಲವಾರು ಪ್ರಮುಖ ಸಂಸ್ಥೆಗಳನ್ನು ಪಟ್ಟಿ ಮಾಡುತ್ತದೆ. ಅದರ 2025 ರ ವಾರ್ಷಿಕ ವರದಿಯ ಪ್ರಕಾರ, ಡಿಸೆಂಬರ್ 31, 2025 ರ ಹೊತ್ತಿಗೆ ವಿಶ್ವಾದ್ಯಂತ 10,107 ಉದ್ಯೋಗಿಗಳನ್ನು ಇನ್ನೋಡಾಟಾ ಹೊಂದಿತ್ತು.

PREV
Read more Articles on
click me!

Recommended Stories

ಹುಬ್ಬಳ್ಳಿ SWR ರೈಲ್ವೆಯಲ್ಲಿ ಸುವರ್ಣಾವಕಾಶ, 258 ಗೂಡ್ಸ್ ವ್ಯವಸ್ಥಾಪಕ, ಜೂನಿಯರ್ ಎಂಜಿನಿಯರ್ ಹುದ್ದೆಗೆ ನೇಮಕಾತಿ
ದಿನಕ್ಕೆ 2 ಗಂಟೆ ನಿದ್ದೆ, ಬೀದಿಯಲ್ಲಿ ಕಡಲೆಕಾಯಿ ವ್ಯಾಪಾರ: ಸ್ವಂತ ಖರ್ಚಲ್ಲೇ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ!