UPSC ನೇಮಕಾತಿ: ಅರ್ಜಿ ಸಲ್ಲಿಸಲು ಅವಕಾಶ, ಇಂಪಾರ್ಟೆಂಟ್ ಡೇಟ್ಸ್ ಹೀಗಿವೆ

By Suvarna NewsFirst Published Dec 15, 2020, 2:34 PM IST
Highlights

ಕೇಂದ್ರಕ್ಕೆ ಸಂಬಂಧಿಸಿದ ಹಲವು ನೇಮಕಾತಿಗಳನ್ನು ನಡೆಸುವ ಕೇಂದ್ರ ಲೋಕಸೇವಾ ಆಯೋಗ(ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಖಾಲಿ ಇರುವ ಒಟ್ಟು 34 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಫಾರ್ಮ್ ಸಬ್‌ಮಿಟ್ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
 

ಕೇಂದ್ರ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ, ನ್ಯೂದಿಲ್ಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 34 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್) ಆರಂಭಿಸಿದೆ. 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಅಪ್ಲಿಕೇಷನ್ ಫಾರ್ಮ್ ಅನ್ನು ಆಯೋಗದ upsc.gov.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಇದೇ ತಿಂಗಳು ಅಂದರೆ ಡಿಸೆಂಬರ್ 31ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಹಾಗೆಯೇ ಅರ್ಜಿಯನ್ನು ಸಬ್‌ಮೀಟ್ ಮಾಡಿದ ಅಭ್ಯರ್ಥಿಗಳು 2021 ಜನವರಿ 1ರಿಂದ ತಮ್ಮ ಫಾರ್ಮ್‌ಗಳ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದಾಗಿದೆ.

ಜಾಬ್ ಆಫರ್ ಲೆಟರ್ ಸ್ವೀಕರಿಸುವ ಮುನ್ನ ಈ ಸಂಗತಿಗಳು ತಿಳಿದಿರಲಿ

ಅಸಿಸ್ಟಂಟ್ ಲೀಗಲ್ ಅಡ್ವೈಸರ್ ಅಂದರೆ ಕಿರಿಯ ಕಾನೂನು ಸಲಹೆಗಾರರು. ಕೇಂದ್ರ ಕಂದಾಯ ಮತ್ತು ಹಣಕಾಸು ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಎರಡು ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಅದೇ ರೀತಿ, ಕೇಂದ್ರ ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ದಿಲ್ಲಿಯ ಸಫ್ದರಗಂಜ್ ಆಸ್ಪತ್ರೆಯಲ್ಲಿರುವ ನಾಲ್ಕು ಮೆಡಿಕಲ್ ಫಿಜಿಸಿಸ್ಟ್ ಹುದ್ದೆಗಳು ಖಾಲಿವೆ.

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

ಇನ್ನು ಕೇಂದ್ರ ಗೃಹ ಇಲಾಖೆಯಡಿ ಬರುವ ಕೇಂದ್ರ ತನಿಖಾ ಸಂಸ್ಥೆ(ನ್ಯಾಷನಲ್ ಇನ್ವಿಷ್ಟಿಗೇಷನ್ ಏಜೆನ್ಸಿ)ಯಲ್ಲಿ ಒಟ್ಟು 10 ಪಬ್ಲಿಕ್ ಪ್ರಾಸಿಕ್ಯೂಟರ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅದೇ ರೀತಿ, ನ್ಯೂದಿಲ್ಲಿ ಮುನ್ಸಿಪಲ್ ಕೌನ್ಸಿಲ್‌ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ 18 ಎಲೆಕ್ಟ್ರಿಕಲ್ ಅಸಿಸ್ಟಂಟ್ ಎಂಜಿನಿಯರ್ ಹುದ್ದೆಗಳನ್ನು ಯುಪಿಎಸ್‌ಸಿ ಭರ್ತಿ ಮಾಡುತ್ತಿದೆ.

ಅಸಿಸ್ಟಂಟ್ ಲೀಗಲ್ ಅಡ್ವೈಜರ್ ಹುದ್ದೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಾನೂನು ಪದವೀಧರರಾಗಿರಬೇಕು ಮತ್ತು ಕ್ರಿಮಿನಲ್ ಅಥವಾ ಹಣಕಾಸು ಕಾನೂನು ಪ್ರಕರಣಗಳಲ್ಲಿ 3 ವರ್ಷ ಅನುಭವ ಹೊಂದಿರಬೇಕು. ಮಾಸ್ಟರ್ ಡಿಗ್ರಿ ಹೊಂದಿದವರಿಗೆ ಒಂದು ವರ್ಷ ಅನುಭವವಿದ್ದರೆ ಸಾಕು. ಮೆಡಿಕಲ್ ಫಿಜಿಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಫಿಜಿಕ್ಸ್ ಮತ್ತು ರೆಡಿಯೋಲಾಜಿಕಲ್‌ನಲ್ಲಿ ಪೋಸ್ಟ್ ಎಂಎಸಿ ಡಿಪ್ಲೋಮಾ ಮಾಡಿರಬೇಕು. ಕನಿಷ್ಠ 12 ತಿಂಗಳ ಇಂಟರ್ನಶಿಫ್ ಅಗತ್ಯ.

ಮುಂದಿನ ಕೆಲವು ತಿಂಗಳಲ್ಲಿ ಫೋನ್‌ಪೇಯಿಂದ 700 ಉದ್ಯೋಗ

ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 7 ವರ್ಷ ಕ್ರಿಮಿನಲ್ ಕೇಸ್  ಅಥವಾ ರಾಜ್ಯ ನ್ಯಾಯಾಂಗ ಸೇವೆ ಅಥವಾ ಕೇಂದ್ರ, ರಾಜ್ಯ ಕಾನೂನು ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಒಂದು ವರ್ಷದ ಅನುಭವದೊಂದಿಗೆ ಎಲೆಕ್ಟ್ರಿಕಲ್ ಎಂಜನಿಯರಿಂಗ ಪದವಿ ಪಡೆದವರು ಅಸಿಸ್ಟಂಟ್ ಎಂಜಿನಿಯರ್ ಪೋಸ್ಟ್‌ಗೆ ಅಪ್ಲೈ ಮಾಡಬಹುದು. ಈ ಎಲ್ಲ ಹುದ್ದೆಗಳಿಗೆ ನಿಗದಿಪಡಿಸಿದ ವೇತನ ಶ್ರೇಣಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು.

click me!