ಡೈರೆಕ್ಟೊರೇಟ್ ಆಫ್ ಪರ್ಚೇಸ್ ಆಯಂಡ್ ಸ್ಟೋರ್ಸ್ (ಡಿಪಿಎಸ್) ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಡಿ.13): ಕೇಂದ್ರ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮುಂಬೈನಲ್ಲಿರುವ ಡೈರೆಕ್ಟೊರೇಟ್ ಆಫ್ ಪರ್ಚೇಸ್ ಆಯಂಡ್ ಸ್ಟೋರ್ಸ್ (ಡಿಪಿಎಸ್) ವಿಭಾಗದಲ್ಲಿ ವಿವಿಧ 74 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಡಿಪಿಎಸ್‍ನ ಗ್ರೂಪ್ ಬಿ ಮತ್ತು ಸಿ ಯಲ್ಲಿ ಹುದ್ದೆಗಳು ಖಾಲಿ ಇದ್ದು, ಮುಂಬೈ ಮತ್ತು ದೇಶಾದ್ಯಂತ ಇರುವ ಡಿಪಿಎಸ್‍ನ ಪ್ರಾದೇಶಿಕ ಕಚೇರಿಗಳಲ್ಲಿ ನೇಮತಿ ನಡೆಯುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ದಿನಾಂಕ 27.12.2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
undefined
ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
74 ಹುದ್ದೆಗಳಲ್ಲಿ ಎಸ್‍ಸಿ ಅಭ್ಯರ್ಥಿಗಳಿಗೆ 11 ಸ್ಥಾನ, ಎಸ್‍ಟಿಗೆ 5, ಇತರ ಹಿಂದುಳಿದ ವರ್ಗಕ್ಕೆ- 20, ಸಾಮಾನ್ಯವರ್ಗಕ್ಕೆ -32, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಹುದ್ದೆಗಳ ವಿವರ
* ಸ್ಟೆನೋಗ್ರಾಫರ್ (ಗ್ರೇಡ್‍ಐಐ) - 2
* ಸ್ಟೆನೋಗ್ರಾಫರ್ (ಗ್ರೇಡ್ ಐಐಐ) - 4
* ಅಪ್ಪರ್ ಡಿವಿಷನ್ ಕ್ಲರ್ಕ್ - 5
* ಜೂನಿಯರ್ ಪರ್ಚೇಸ್ ಅಸಿಸ್ಟೆಂಟ್/ ಜೂ. ಸ್ಟೋರ್ ಕೀಪರ್ - 63
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಇಂಗ್ಲಿಷ್ ಷಾರ್ಟ್‍ಹ್ಯಾಂಡ್ ತಿಳಿದಿರಬೇಕು. ಯಾವುದೇ ಪದವಿ, ವಿಜ್ಞಾನ/ ಕಾಮರ್ಸ್ ಪದವಿ ಮತ್ತು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾದಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ: 27.12.2020ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಕ್ಕೆ 3ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಸಡಿಲಿಕೆ ನೀಡಲಾಗಿದೆ.
ವೇತನ ಶ್ರೇಣಿ: ಮಾಸಿಕ 25,500 ರೂ.ನಿಂದ 35,400 ರೂ. ವೇತನ ನಿಗದಿಯಾಗಿದ್ದು, ಸರ್ಕಾರದ ನಿಯಮದನ್ವಯ ಭತ್ಯೆಗಳನ್ನು ನೀಡಲಾಗುವುದು.
ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ನಿಗದಿ ಮಾಡಲಾಗಿದೆ.
ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ,