All cargo Logistics Park: 5,500 ಜನ ಕನ್ನಡಿಗರಿಗೆ ಉದ್ಯೋಗ ನೀಡುವ ಗುರಿ : ಉದ್ಯಮಿ ಶಶಿಕಿರಣ್ ಶೆಟ್ಟಿ

By Ravi JanekalFirst Published Oct 4, 2022, 12:58 PM IST
Highlights

ಆಲ್‌ಕಾರ್ಗೊ ಲಾಜಿಸ್ಟಿಕ್ ಪಾರ್ಕ್(All Cargo Logistics Park) ಸಂಸ್ಥೆಯಲ್ಲಿ ಸುಮಾರು 5,500 ಜನ ಕನ್ನಡಿಗರಿಗೆ ಉದ್ಯೋಗ ನೀಡುವ ಭರವಸೆ. ಕಂಪನಿಯ ಅಧ್ಯಕ್ಷ ದಕ್ಷಿಣ ಕನ್ನಡ ಮೂಲದ ಯಶಸ್ವಿ ಉದ್ಯಮಿ ಆಗಿರುವ ಶಶಿಕಿರಣ್‌ ಶೆಟ್ಟಿ ತಿಳಿಸಿದ್ದಾರೆ.

ಕೋಲಾರ (ಅ.4) : ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವೈಟ್‌ಫಿಲ್ಡ್ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ  ಆಲ್‌ಕಾರ್ಗೊ ಲಾಜಿಸ್ಟಿಕ್ ಪಾರ್ಕ್(All Cargo Logistics Park) ಸಂಸ್ಥೆಯಲ್ಲಿ ಸುಮಾರು 5,500 ಜನ ಕನ್ನಡಿಗರಿಗೆ ಉದ್ಯೋಗ ನೀಡುವ ಭರವಸೆ. ಕಂಪನಿಯ ಅಧ್ಯಕ್ಷ ದಕ್ಷಿಣ ಕನ್ನಡ ಮೂಲದ ಯಶಸ್ವಿ ಉದ್ಯಮಿ ಆಗಿರುವ ಶಶಿಕಿರಣ್‌ ಶೆಟ್ಟಿ ಅವರಿಂದ ಭರವಸೆ ಸಿಕ್ಕಿದೆ.

ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಆಲ್‌ಕಾರ್ಗೊ ಲಾಜಿಸ್ಟಿಕ್ ಪಾರ್ಕ್‌ ಸಂಸ್ಥೆ ಬರೋಬ್ಬರಿ 20 ಲಕ್ಷ ಚದರ ಅಡಿ ಜಾಗದಲ್ಲಿ ಗೋದಾಮು ನಿರ್ಮಿಸಿದ್ದಾರೆ. ಪ್ರಮುಖವಾಗಿ ಫ್ಲಿಪ್‌ಕಾರ್ಟ್(Flipkart),ಅಮೆಜಾನ್(amazon), ಡೆಕಥ್ಲಾನ್(Decathlon) ಸೇರಿದಂತೆ ಇ-ಕಾಮರ್ಸ್(E-commerce) ಕಂಪನಿಗಳ ವಹಿವಾಟಿಗೆ ಸೌಲಭ್ಯ ಒದಗಿಸಲು ಆರಂಭಿಸಿದ್ದಾರೆ. ಫ್ಲಿಪ್‌ಕಾರ್ಟ್ ಐದು ಲಕ್ಷ ಚದರ ಅಡಿ, ಅಮೆಜಾನ್ ಮೂರು ಲಕ್ಷ ಚದರ ಅಡಿ,ಡೆಕಥ್ಲಾನ್ ಕಂಪನಿ ಒಂಬತ್ತು ಲಕ್ಷ ಚದರ ಅಡಿ ಪ್ರದೇಶದಲ್ಲಿ ಗೋದಾಮು ನಿರ್ಮಿಸಿವೆ.

ಇನ್ನು ಇ–ಕಾಮರ್ಸ್‌ ಗೆ ಸೇರಿರುವ ಕಂಪನಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಆಲ್‌ಕಾರ್ಗೊ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಿಸಲಾಗಿದ್ದು, ಬರೋಬ್ಬರಿ 5,500 ಜನ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಲು ಕಂಪನಿ ಗುರಿ ಹೊಂದಲಾಗಿದೆ. ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ(Andhrapradesh), ತಮಿಳುನಾಡು(Tamilunadu) ರಾಜ್ಯಗಳಿಗೂ ಇಲ್ಲಿಂದ ಸುಲಭವಾಗಿ ಲಾಜಿಸ್ಟಿಕ್ ಸಂಪರ್ಕ ಸಾಧಿಸಬಹುದು. 

Kannadigas Industries Priority: ಕನ್ನಡಿಗರಿಗೆ ಆದ್ಯತೆ ನೀಡದ ಕೈಗಾರಿಕೆಗಳಿಗೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ

click me!