ಹೊಸಬರಿಗೆ ನೀಡಿದ್ದ ಆಫರ್‌ ಲೆಟರ್‌ ಹಿಂಪಡೆದ ಟೆಕ್‌ ಕಂಪನಿಗಳು

By Kannadaprabha News  |  First Published Oct 4, 2022, 8:43 AM IST

ಉದ್ಯೋಗಕ್ಕೆ ಸೇರ್ಪಡೆಯಾಗಲು ಆಫರ್‌ ಲೆಟರ್‌ ಪಡೆದು ಕಂಪನಿಗಳಿಂದ ಕರೆಯ ನಿರೀಕ್ಷೆಯಲ್ಲಿದ್ದ ಸಾವಿರಾರು ಹೊಸಬರಿಗೆ ತಂತ್ರಜ್ಞಾನ ಕಂಪನಿಗಳು ದಿಢೀರ್‌ ಶಾಕ್‌ ನೀಡಿವೆ ಎಂದು ಮಾದ್ಯಮವೊಂದು ವರದಿ ಮಾಡಿದೆ.


ನವದೆಹಲಿ: ಉದ್ಯೋಗಕ್ಕೆ ಸೇರ್ಪಡೆಯಾಗಲು ಆಫರ್‌ ಲೆಟರ್‌ ಪಡೆದು ಕಂಪನಿಗಳಿಂದ ಕರೆಯ ನಿರೀಕ್ಷೆಯಲ್ಲಿದ್ದ ಸಾವಿರಾರು ಹೊಸಬರಿಗೆ ತಂತ್ರಜ್ಞಾನ ಕಂಪನಿಗಳು ದಿಢೀರ್‌ ಶಾಕ್‌ ನೀಡಿವೆ ಎಂದು ಮಾದ್ಯಮವೊಂದು ವರದಿ ಮಾಡಿದೆ.

ಸಾವಿರಾರು ಎಂಜಿನಿಯರಿಂದ ಪದವಿ ಪಡೆದವರಿಗೆ ವಿಪ್ರೋ (Wipro), ಇನ್ಫೋಸಿಸ್‌ (Infosys) ಹಾಗೂ ಟೆಕ್‌ ಮಹೀಂದ್ರಾ (Tech Mahindra) ಮೊದಲಾದ ಕಂಪನಿಗಳು ಕೆಲ ತಿಂಗಳ ಹಿಂದೆಯೇ ಆಫರ್‌ ಲೆಟರ್‌ ನೀಡಿದ್ದವು. ಬಳಿಕ ಅವರಿಗೆ ನಾನಾ ಕಾರಣ ನೀಡಿ ಕೆಲಸಕ್ಕೆ ಸೇರ್ಪಡೆ ಸಮಯವನ್ನು ಮುಂದೂಡಲಾಗಿತ್ತು. 

Latest Videos

ಆದರೆ ಇದೀಗ ‘ನೀವು ಅಗತ್ಯ ಶೈಕ್ಷಣಿಕ ಮಾನದಂಡಗಳನ್ನು ಪೂರೈಸದಿರುವುದು ಕಂಡುಬಂದಿದೆ. ಹೀಗಾಗಿ ನಿಮಗೆ ನೀಡಿದ ಆಫರ್‌ ರದ್ದಾಗಿದೆ ಎಂದು ಇ-ಮೇಲ್‌ ರವಾನಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ಹಿಂಜರಿತ, ಹಣದುಬ್ಬರದಿಂದಾಗಿ ಐಟಿ ಕಂಪನಿಗಳು ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ.
 

click me!