TCS MBA recruitment 2022: ಕೆಲಸಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು?, ಅರ್ಹತೆ ಏನು? ಮಾಹಿತಿ ಇಲ್ಲಿದೆ

By Sharath Sharma  |  First Published Jun 8, 2022, 1:13 PM IST

TCS Recruitment 2022: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಆನ್‌ಲೈನ್‌ನಲ್ಲಿ ಅವಕಾಶವಿದೆ. ಅರ್ಜಿ ಸಲ್ಲಿಸಲು ಅರ್ಹತೆ ಏನು, ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಈ ಕೆಳಗಿದೆ. 


ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (Tata Consultancy Services) ಸಂಸ್ಥೆ ಎಂಬಿಎ ಗ್ರಾಜುಯೇಟ್‌ಗಳನ್ನು ಹೈರ್‌ ಮಾಡುತ್ತಿದೆ (Job opportunity for MBA Graduates). ಎಂಬಿಎ ಈಗ ತಾನೆ ಮುಗಿಸಿರುವ ಅಥವಾ ಇತ್ತೀಚಿನ ವರ್ಷಗಳಲ್ಲಿ ಮುಗಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಮಾಡಿಕೊಡುತ್ತಿದೆ. ಉದ್ಯೋಗ ಹುಡುಕುತ್ತಿರುವ ಎಂಬಿಎ ಪದವೀಧರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವನ್ನು ಸಂಸ್ಥೆ ಇದುವರೆಗೂ ತಿಳಿಸಿಲ್ಲ. ಅರ್ಜಿ ಸಲ್ಲಿಸಲು ಇಚ್ಚೆ ಪಡುವವರು ಟಿಸಿಎಸ್‌ ನೆಕ್ಸ್ಟ್‌ ಸ್ಟೆಪ್‌ (TCS Next Step) ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 

ಟಿಸಿಎಸ್‌ ಮುಖ್ಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸಂಸ್ಥೆ ನೋಟಿಫಿಕೇಷನ್‌ ಹಾಕಿದ್ದು, "ಟಿಸಿಎಸ್‌ ಮ್ಯಾನೇಜ್‌ಮೆಂಟ್‌ (TCS management) ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತಿದೆ. ಅರ್ಹ ಅಭ್ಯರ್ಥಿಗಳನ್ನು ಇದೇ ಆರ್ಥಿಕ ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಸೇರಿಸಿಕೊಳ್ಳಲಾಗುವುದು," ಎಂದು ತಿಳಿಸಿದೆ. "ಉತ್ತಮ ಉದ್ಯೋಗ ಆರಂಭಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಅವಕಾಶ ಮಾಡಿಕೊಡುತ್ತಿದೆ. 2020, 2021, 2022ರಲ್ಲಿ ಎಂಬಿಎ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಅವಕಾಶ ದೇಶಾದ್ಯಂತ ಇರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಲಭ್ಯ, ಆದರೆ ಪದವಿಯ ವಿಶೇಷತೆಗಳ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗುವುದು," ಎಂದು ಸಂಸ್ಥೆ ತಿಳಿಸಿದೆ. 

Tap to resize

Latest Videos

ಇದನ್ನೂ ಓದಿ: NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

"ಜಗತ್ತಿನ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಬದಲಿಸುವ ಸಾಮರ್ಥ್ಯ ಮತ್ತು ಪರಿಹಾರ ಸೂಚಿಸುವ ಶಕ್ತಿ ನಮ್ಮ ಸಂಸ್ಥೆಗಿದೆ ಎಂದು ನಾವು ನಂಬಿದ್ದೇವೆ. ಪ್ರತಿ ದಿನ ಐದು ಲಕ್ಷಕ್ಕೂ ಅಧಿಕ ಜನರ ನಮ್ಮ ತಂಡ ಕಸ್ಟಮರ್‌ಗಳ ಸಮಸ್ಯೆ ಬಗೆಹರಿಸಲು ಮತ್ತು ಅರ್ಥಪೂರ್ಣ ಬದಲಾವಣೆ ತರಲು ಕೆಲಸ ಮಾಡುತ್ತಿದೆ. ಇನ್ನೂ ಹೆಚ್ಚು ಶಕ್ತಿಯುತವಾಗಿ ಕೆಲಸ ಮಾಡಲು ಸಂಸ್ಥೆ ಚಿಂತಿಸುತ್ತಿದೆ. ಅದಕ್ಕೆ ನಿಮ್ಮ ಪ್ಯಾಷನ್‌ ಮತ್ತು ಬಲ ಬೇಕು," ಸಂಸ್ಥೆ ಹೀಗೆ ಹೇಳಿಕೆ ನೀಡಿದೆ. 

ವರದಿಗಳ ಪ್ರಕಾರ ಟಿಸಿಎಸ್‌ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 28,238 ಹೊಸ ಉದ್ಯೋಗಿಗಳಿಗೆ ಕೆಲಸ ನೀಡಿದೆ. ಅದರಲ್ಲಿ ಇಂಜಿನಿಯರಿಂಗ್‌ ಫ್ರೆಶರ್ಸ್‌ ಮತ್ತು ಕೆಲ ವರ್ಷಗಳ ಅನುಭವ ಉಳ್ಳವರಾಗಿದ್ದಾರೆ. ಟಿಸಿಎಸ್‌ನಲ್ಲಿ ಒಟ್ಟೂ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದು 147 ದೇಶಗಳ ನಾಗರಿಕರು ಕೆಲಸ ಮಾಡುತ್ತಿದ್ದಾರೆ. 

ಇದನ್ನೂ ಓದಿ: ವಾರಕ್ಕೆ 4 ದಿನ ಮಾತ್ರ ಕೆಲಸ: UKಯ 70 ಸಂಸ್ಥೆಗಳಲ್ಲಿ ಪ್ರಯೋಗ ಶುರು: ಭಾರತದಲ್ಲಿ ಸಾಧ್ಯವಾ?

ಟಿಸಿಎಸ್‌ ಹೇಳಿಕೆಯ ಪ್ರಕಾರ 2022ರಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದು, ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ 40,000 ಫ್ರೆಶರ್‌ಗಳಿಗೆ ಅವಕಾಶ ನೀಡಲು ಚಿಂತಿಸಿದೆ. ಸಂಸ್ಥೆಯಲ್ಲಿ ಸದ್ಯ 5,92,195 ಉದ್ಯೋಗಿಗಳಿದ್ದು ಅದರಲ್ಲಿ 2,00,000 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದೂ ಸಂಸ್ಥೆ ಇತ್ತೀಚಿನ ಹೇಳಿಕೆಯೊಂದರಲ್ಲಿ ಮಾಹಿತಿ ನೀಡಿತ್ತು. 

click me!