BSF Recruitment 2022 ; ಒಟ್ಟು281 ಹುದ್ದೆಗಳಿಗೆ ನೇಮಕಾತಿ

By Kannadaprabha NewsFirst Published Jun 8, 2022, 4:23 AM IST
Highlights

ಭಾರತೀಯ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಒಟ್ಟು 281 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 28 ಆಗಿದೆ.

ಬೆಂಗಗಳೂರು(ಜೂ.8): ಭಾರತೀಯ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗಡಿ ಭದ್ರತಾ ಪಡೆ( ಬಿಎಸ್‌ಎಫ್‌) ಇದೀಗ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಒಟ್ಟು 281 ಹುದ್ದೆಗಳು ಖಾಲಿ ಇದ್ದು,ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 28 ಎಂದು ಬಿಎಸ್‌ಎಫ್‌ ಹೇಳಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೆ ಕಾಯದೇ ಶೀಘ್ರವೇ ಸೂಕ್ತ ದಾಖಲೆಗಳ ಸಹಿತ ಭರ್ತಿಗೊಳಿಸಿದ ಅರ್ಜಿಗಳನ್ನು ಸಲ್ಲಿಸಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ.

ಹುದ್ದೆಗಳ ವಿವರ ಇಲ್ಲಿದೆ: ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌(ಬಿಎಸ್‌ಎಫ್‌) ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್‌ ಬಿ ವಿಭಾಗದಲ್ಲಿ ಒಟ್ಟು 281 ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ಭಾರತಾದ್ಯಂತ ಕರ್ತವ್ಯ ನಿರ್ವಹಸಲು ಸಿದ್ಧರಿರಬೇಕಿದೆ. ಸಬ್‌ಇನ್‌ಸ್ಪೆಕ್ಟರ್‌( ಮಾಸ್ಟರ್‌) 08 ಹುದ್ದೆ, ಸಬ್‌ಇನ್‌ಸ್ಪೆಕ್ಟರ್‌(ಎಂಜಿನ್‌ ಚಾಲಕ) 06 ಹುದ್ದೆ),ಸಬ್‌ಇನ್‌ಸ್ಪೆಕ್ಟರ್‌(ಕಾರ್ಯಾಗಾರ) 02 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಮಾಸ್ಟರ್‌)52 ಹುದ್ದೆಗಳು, ಹೆಡ್‌ಕಾನ್‌ಸ್ಟೇಬಲ್‌(ಎಂಜಿನ್‌ ಡ್ರೈವರ್‌) 64 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಕಾರ್ಯಾಗಾರ) 19 ಹುದ್ದೆ ಹಾಗೂ ಕಾನ್‌ಸ್ಟೇಬಲ್‌(ಸಿಬ್ಬಂದಿ) 130 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್‌ ಹೇಳಿದೆ.

ವೇತನ ಶ್ರೇಣಿ ಹೀಗಿದೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಪ್ಯಾಕೇಜ್‌ ನೀಡಲಾಗಿದೆ. ಸಬ್‌ಇನ್‌ಸ್ಪೆಕ್ಟರ್‌(ಮಾಸ್ಟರ್‌-ಗ್ರೂಪ್‌ ಬಿ) ಹುದ್ದೆಗೆ 35,400ರಿಂದ 1,12,400 ರು. ಮಾಸಿಕ ವೇತನ ನೀಡಲಾಗುವುದು. ಅಂತೆಯೆ ಸಬ್‌ಇನ್‌ಸ್ಪೆಕ್ಟರ್‌(ಎಂಜಿನ್‌ಡ್ರೈವರ್‌) ಹುದ್ದೆಗೆ 35,400ರು. ಇಂದ 1,12,400 ರು.ವರೆಗೆ ನೀಡಲಾಗುತ್ತದೆ. ಸಬ್‌ಇನ್‌ಸ್ಪೆಕ್ಟರ್‌(ಕಾರ್ಯಾಗಾರ) ಹುದ್ದೆಗೂ ಇದೇ ವೇತನ ಅನ್ವಯವಾಗಲಿದೆ. ಗ್ರೂಪ್‌ ಸಿ ಗೆ ಸೇರಿದ ಹೆಡ್‌ಕಾನ್‌ಸ್ಟೇಬಲ್‌(ಮಾಸ್ಟರ್‌) ಹುದ್ದೆಗೆ 25,500ರು.ಇಂದ 81,100 ರು. ಮಾಸಿಕ ವೇತನ ನೀಡಲಾಗುವುದು. ಹೆಡ್‌ಕಾನ್‌ಸ್ಟೇಬಲ್‌(ಎಂಜಿನ ಡ್ರೈವರ್‌) ಹುದ್ದೆಗೆ 25,500ರಿಂದ 81,100 ರು., ಹೆಡ್‌ಕಾನ್‌ಸ್ಟೇಬಲ್‌(ಕಾರ್ಯಾಗಾರ) ಹುದ್ದೆಗೆ 25,500ರಿಂದ 81,100 ರು. ನೀಡಲಾಗುವುದು. ಇನ್ನು ಕಾನ್‌ಸ್ಟೇಬಲ್‌ ಹುದ್ದೆಗೆ 21,700ರು. ಇಂದ 69,100 ರು. ಮಾಸಿಕ ವೇತನ ನೀಡಲಾಗುವುದು.

SHIVAMOGGAದಲ್ಲಿ ಹಳೆ ದ್ವೇಷಕ್ಕೆ ಸ್ನೇಹಿತನನ್ನೇ ಮಗಿಸಲು ಸ್ಕೆಚ್!

ವಯಸ್ಸಿನ ಮಾನದಂಡ ಏನು?: ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ ವಯೋಮಾನದಂಡದ ಅರ್ಹತೆಗಳನ್ನು ತಿಳಿಸಿದೆ. ಸೀರಿಯಲ್‌ ನಂಬರ್‌ 1ರಿಂದ 2ರವರೆಗಿನ ಅಭ್ಯರ್ಥಿಗಳಿಗೆ ಕನಿಷ್ಠ 22 ವರ್ಷ ಪೂರ್ಣವಾಗಿರಬೇಕು. ಗರಿಷ್ಠ 18 ವರ್ಷಗಳೊಳಗಿರಬೇಕು. ಅಂತೆಯೆ, ಸೀರಿಯಲ್‌ ನಂರ್‌ 3ರಿಂದ 7ರವರೆಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷಗಳಾಗಿರಬಹುದು. ಆದರೆ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗಲಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ವಿದ್ಯಾರ್ಹತೆ ಏನು ಇರಬೇಕು?: ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಕನಿಷ್ಠ ಎಸ್‌ಎಸ್‌ಎಲ್‌ಸಿ, ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು. ಅದರ ಜೊತೆಗೆ ಅಭ್ಯರ್ಥಿಗಳು ಡಿಪ್ಲೊಮಾ (ಮೆಕ್ಯಾನಿಕಲ್‌ ಇಂಜಿನಿಯರಿಂಗ್‌) ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಇಲ್ಲವಾದಲ್ಲಿ ಇವುಗಳಿಗೆ ಸಮಾನವಾದ ಪದವಿಯನ್ನು ಪಡೆದರೂ ಮಾನ್ಯತೆ ಇದೆ ಎಂದು ಬಿಎಸ್‌ಎಫ್‌ ಹೇಳಿದೆ.

ಅರ್ಜಿ ಶುಲ್ಕ ಎಷ್ಟು?: ಅಭ್ಯರ್ಥಿಗಳ ಹುದ್ದೆ ಗ್ರೇಡ್‌ ಅನ್ವಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅದರ ಪ್ರಕಾರ, ಗ್ರೂಪ್‌ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕವೆಂದು 200 ಪಾವತಿಸಬೇಕು. ಗ್ರೂಪ್‌ ಸಿ ಹುದ್ದೆಗೆ ಅರ್ಜಿ ಸಲ್ಲಿಸುವವರು 100 ರು.ಅರ್ಜಿಶುಲ್ಕ ಪಾವತಿಸಬೇಕು. ಸಾಮಾನ್ಯ ವರ್ಗ ಹಾಗೂ ಓಬಿಸಿ ವರ್ಗಕ್ಕೆ ಇದು ಅನ್ವಯವಾಗಲಿದೆ. ಆದರೆ ಎಸ್‌ಸಿ/ಎಸ್‌ಟಿ ಹಾಗೂ ಮಾಜಿ ಸೈನಿಕರಿಗೆ ಉಚಿತವಾಗಿರಲಿದೆ. ಅರ್ಜಿ ಸಲ್ಲಿಸಲು ಜೂನ್‌ 28 ಕೊನೆಯ ದಿನವಾಗಿದೆ.

Panchamasali Reservation; ಬೊಮ್ಮಾಯಿ ಮುಂದೆ 3 ಆಯ್ಕೆಯಿಟ್ಟ ಜಯ ಮೃತ್ಯುಂಜಯ ಸ್ವಾಮೀಜಿ

ಅಗತ್ಯ ದಾಖಲೆಗಳ ಮಾಹಿತಿ: ಅರ್ಜಿದಾರನು ಅರ್ಜಿ ಸಲ್ಲಿಸುವ ವೇಳೆ ಆಧಾರ್‌ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ಪದವಿಯ ಅಂಕಪಟ್ಟಿಇರಬೇಕು. ಅದರೊಂದಿಗೆ ಜಾತಿ ಪ್ರಮಾಣ ಪತ್ರ ಹಾಗೂ ಇತರೇ ದಾಖಲೆ ಪತ್ರಗಳಾದ ಮೀಸಲಾತಿ ಪ್ರಮಾಣ ಪತ್ರ ಹಾಗೂ ಇಡಬ್ಲ್ಯುಎಸ್‌(ಇದ್ದರೆ ಮಾತ್ರ), ಸಹಿ ಹಾಗೂ ಫೋಟೊದ ಸ್ಕಾ್ಯನ್‌ ಪ್ರತಿ ಸಲ್ಲಿಸಬೇಕಿದೆ.

ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ: ಆಯ್ಕೆ ವಿಧಾನವು ಹಂತ 1ರ ಪ್ರಕಾರ ಆಬ್ಜೆಕ್ಟಿವ್‌ ಪ್ರಶ್ನೆಗಳೊಳಗೊಂಡ ಆನ್‌ಲೈನ್‌ ಪರೀಕ್ಷೆ, 2ನೇ ಹಂತವಾಗಿ ಪ್ರಾಯೋಗಿಕ ಪರೀಕ್ಷೆಯನ್ನು ಒಳಗೊಂಡಿರುತ್ತವೆ ಎಂದು ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಬಿಎಸ್‌ಎಫ್‌ನ ಅಧಿಕೃತ ಲಿಂಕ್‌ (https://rectt.bsf.gov.in/) ಗೆ ಲಾಗಿನ್‌ ಆಗಿ ಮಾಹಿತಿ ಪಡೆದುಕೊಳ್ಳಬಹದು ಎಂದು ಬಿಎಸ್‌ಎಫ್‌ ತಿಳಿಸಿದೆ.

click me!