ಎಸ್‌ಬಿಐ ಮಹಾ ಯೋಜನೆ: 35 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ!

Published : Sep 08, 2026, 06:02 PM IST
SBI

ಸಾರಾಂಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2026-27ನೇ ಹಣಕಾಸು ವರ್ಷದಲ್ಲಿ ಸುಮಾರು 12,000 ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು 250 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕ್ ಪ್ರಸ್ತುತ ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ನವದೆಹಲಿ: ದೇಶದ ಪ್ರಮುಖ ಹಾಗೂ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2026-27ನೇ ಹಣಕಾಸು ವರ್ಷದಲ್ಲಿ ಸುಮಾರು 12,000 ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದರೊಂದಿಗೆ ದೇಶಾದ್ಯಂತ ಗ್ರಾಹಕರಿಗೆ ಸೇವೆ ವಿಸ್ತರಿಸುವ ಉದ್ದೇಶದಿಂದ 250 ಹೊಸ ಬ್ಯಾಂಕ್ ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಶೆಟ್ಟಿ ಅವರು, ಈ ಹಣಕಾಸು ವರ್ಷದಲ್ಲಿ ಕ್ಲೆರಿಕಲ್ ಹಾಗೂ ಆಫೀಸರ್ ಕೇಡರ್ ವಿಭಾಗಗಳಲ್ಲಿ 11,000 ದಿಂದ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದ್ದೇವೆ. ಅಲ್ಲದೆ, ನಮ್ಮ ಜಾಲವನ್ನು ಬಲಪಡಿಸಲು 200 ರಿಂದ 250 ಹೊಸ ಶಾಖೆಗಳನ್ನು ಶೀಘ್ರವೇ ಪ್ರಾರಂಭಿಸಲಾಗುವುದು," ಎಂದು ತಿಳಿಸಿದ್ದಾರೆ. 2026ರ ಮಾರ್ಚ್ ಅಂಕಿಅಂಶಗಳ ಪ್ರಕಾರ, ಎಸ್‌ಬಿಐ 2.45 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿ ಹೆಗ್ಗಳಿಕೆ ಪಡೆದಿದೆ.

35 ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ಸ್ ಹುದ್ದೆಗೆ ಆಹ್ವಾನ

ಇದರ ಬೆನ್ನಲ್ಲೇ ಈಗ ಎಸ್‌ಬಿಐ ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ಸ್ (SCO) ಹುದ್ದೆಗಳ ನೇಮಕಾತಿ ಸೂಚನೆ ಹೊರಡಿಸಿದೆ. ಬ್ಯಾಂಕ್ ನೈಪುಣ್ಯತೆ ಹೊಂದಿರುವ ಭಾರತೀಯ ನಾಗರಿಕರಿಂದ ನಿಯಮಿತ ಆಧಾರದ ಮೇಲೆ ಕೆಳಗಿನ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜಾಹೀರಾತು ಸಂಖ್ಯೆ: CRPD/SCO/2026-27/15

ಟ್ರೇಡ್ ಫೈನಾನ್ಸ್ ಆಫೀಸರ್ - IBG (JMGS-I): 14 ಹುದ್ದೆಗಳು (ವಯೋಮಿತಿ: 21 ರಿಂದ 30 ವರ್ಷಗಳು)

ಟ್ರೇಡ್ ಫೈನಾನ್ಸ್ ಆಫೀಸರ್ - IBG (MMGS-II): 21 ಹುದ್ದೆಗಳು (ವಯೋಮಿತಿ: 23 ರಿಂದ 32 ವರ್ಷಗಳು)

(ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಯೋಮಿತಿಯನ್ನು 31.07.2026 ಕ್ಕೆ ಅನ್ವಯವಾಗುವಂತೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ)

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಪ್ರಾರಂಭಿಕ ದಿನಾಂಕ: 29.08.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19.09.2026

ವಿವರವಾದ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು:

ಶೈಕ್ಷಣಿಕ ಅರ್ಹತೆ, ಅನುಭವ, ಕಾರ್ಯನಿರ್ವಹಣೆಯ ವಿವರಗಳು ಮತ್ತು ಅರ್ಜಿ ಶುಲ್ಕದ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ sbi.bank.in/web/careers/current-openings ಗೆ ಭೇಟಿ ನೀಡಬಹುದು.

ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು ಅಥವಾ ಸಂದೇಹಗಳಿದ್ದಲ್ಲಿ ವೆಬ್‌ಸೈಟ್‌ನಲ್ಲಿರುವ "CONTACT US" -> "Post Your Query" ಲಿಂಕ್ ಮೂಲಕ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.

PREV
Read more Articles on
click me!

Recommended Stories

Layoffs: ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಉದ್ಯೋಗ ಕಡಿತ; ನೂರಾರು ಉದ್ಯೋಗಿಗಳಿಗೆ ಗೇಟ್‌ಪಾಸ್, ಕಾರಣವೇನು?
ವೆಚ್ಚ ಕಡಿತಕ್ಕೆ ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್: ₹19,000 ಕೋಟಿ ಉಳಿಸಲು 4 ಸಾವಿರ ನೌಕರರ ವಜಾ!