NCRTC ನೇಮಕಾತಿ 2026: 90 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.5 ಲಕ್ಷವರೆಗೆ ವೇತನ! ಆಸಕ್ತರು ಅರ್ಜಿ ಸಲ್ಲಿಸಿ

Published : Sep 17, 2026, 01:36 PM IST
NCRTC

ಸಾರಾಂಶ

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು (NCRTC) 2026ನೇ ಸಾಲಿನ 90 ಸೂಪರ್‌ವೈಸರ್ ಮತ್ತು ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ ಅಥವಾ ಐಟಿಐ ಮುಗಿಸಿದ ಅಭ್ಯರ್ಥಿಗಳು ಅಕ್ಟೋಬರ್ 9, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮವು (NCRTC) 2026ರ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಸೂಪರ್‌ವೈಸರ್ ಮತ್ತು ಜೂನಿಯರ್ ಮೆಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC)

ಒಟ್ಟು ಹುದ್ದೆಗಳು: 90

ಸೂಪರ್‌ವೈಸರ್ (62 ಹುದ್ದೆಗಳು), ಜೂನಿಯರ್ ಮೆಂಟೇನರ್ (28 ಹುದ್ದೆಗಳು):

ಉದ್ಯೋಗ ಸ್ಥಳ: ಅಖಿಲ ಭಾರತ (All India)

ವೇತನ ಶ್ರೇಣಿ: ತಿಂಗಳಿಗೆ 18,250 ರಿಂದ-1,50,000

ಯಾರಿಗೆಲ್ಲ ಅರ್ಹತೆ ಇದೆ?

ಸೂಪರ್‌ವೈಸರ್: ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ, ಪದವಿ, BE/B.Tech, BCA, B.Sc, MCA ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

ಜೂನಿಯರ್ ಮೆಂಟೇನರ್: ಸಂಬಂಧಿತ ವಿಭಾಗದಲ್ಲಿ ITI ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರರಬಾರದು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯವಿದೆ.

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷಪಿಡಬ್ಲ್ಯೂಬಿಡಿ (ಅಂಗವಿಕಲ) ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳು

ಅರ್ಜಿ ಶುಲ್ಕ ಎಷ್ಟು?

UR, OBC, EWS ಮತ್ತು ಮಾಜಿ ಸೈನಿಕರು: 500 ರು.

ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಪಾವತಿ ವಿಧಾನ: ಆನ್‌ಲೈನ್ ಮೂಲಕ

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಹಾಗೂ ವೈದ್ಯಕೀಯ ಫಿಟ್‌ನೆಸ್ (Medical Test) ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.

ಅಗತ್ಯ ದಾಖಲೆಗಳು (ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ, ಸಹಿ) ಸಿದ್ಧವಿಟ್ಟುಕೊಳ್ಳಿ.

NCRTC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.

ಅರ್ಜಿ ಶುಲ್ಕ ಪಾವತಿಸಿ, ‘Submit’ ನೀಡಿ ಅರ್ಜಿಯ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಸೆಪ್ಟೆಂಬರ್ 10 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 9 2026

PREV
Read more Articles on
click me!

Recommended Stories

UPSC ಪಾಸ್ ಆದ್ರೆ ಸಾಕಾ? IAS, IPS, IFS, IRSನಲ್ಲಿ ಯಾವ ಅಧಿಕಾರಿಗೆ ಸಿಗುತ್ತೆ ಹೆಚ್ಚು ಸಂಬಳ - ಪವರ್?
KEA Recruitment: ಕೆಇಎ 247 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ; ₹1.59 ಲಕ್ಷದವರೆಗೆ ಭರ್ಜರಿ ವೇತನ!