1.5 ಕೋಟಿ ಜಾಬ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದವಳ ತಿಂಗಳ ಗಳಿಗೆ 500 ರೂ..!

Published : Sep 15, 2026, 12:00 PM IST
content creation

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕಂಟೆಂಟ್‌ ಕ್ರಿಯೇಷನ್‌ ಟ್ರೆಂಡ್‌ ಆಗಿದೆ. ಜನರು ದೊಡ್ಡ ಹುದ್ದೆ ಬಿಟ್ಟು ಕಂಟೆಂಟ್ ಕ್ರಿಯೇಟರ್‌ ಆಗ್ತಿದ್ದಾರೆ. ಕೆನಡಾದ ಮಹಿಳೆಯೊಬ್ಬರು ಇದೇ ವಿಷ್ಯಕ್ಕೆ ಈಗ ಸುದ್ದಿಯಲ್ಲಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡಿದರೆ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು ಅನ್ನೋದು ಹಲವರ ಕಲ್ಪನೆ. ಆದರೆ ವಾಸ್ತವದಲ್ಲಿ ಹಾಗೇನಿಲ್ಲ. ಕೆಲವರಿಗೆ ಕಂಟೆಂಟ್ನಿಂದ ಆರಂಭದಲ್ಲಿ ನೂರು, ಸಾವಿರ ರೂಪಾಯಿಯಷ್ಟೇ ಸಿಗಬಹುದು. ಆದರೂ ಒಂದೇ ರೀತಿಯ ಕೆಲಸ ಮಾಡಿ ಸುಸ್ತಾದ ಕೆಲವರು, ಒಳ್ಳೆಯ ಸಂಬಳದ ಉದ್ಯೋಗವನ್ನೂ ಬಿಟ್ಟು ತಮ್ಮದೇ ಆದ ದಾರಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೆನಡಾದಲ್ಲಿ ವಾಸವಾಗಿರುವ ಪ್ರೊಡಕ್ಟ್ ಡಿಸೈನರ್ ಹೇಗಿ ಜಿಯಾಂಗ್ ಅವರ ಕಥೆಯೇ ಉದಾಹರಣೆ.

1.5 ಕೋಟಿ ಸಂಬಳ ಬಿಟ್ಟ ಮಹಿಳೆ!

ಜಿಯಾಂಗ್ ಅವರು ವರ್ಷಕ್ಕೆ ಸುಮಾರು 1.5 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು. ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕೆಲಸ. ವಾರಕ್ಕೆ ಸುಮಾರು 40 ಗಂಟೆ ಕೆಲಸ ಮಾಡುತ್ತಿದ್ದ ಅವರಿಗೆ ವರ್ಕ್-ಲೈಫ್ ಬ್ಯಾಲೆನ್ಸ್ ಕಷ್ಟವಾಗಿರಲಿಲ್ಲ. ಆದರೂ ಅವರು ತಮ್ಮ ಟೆಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

ಅದಕ್ಕೆ ಕಾರಣ ಕೆಲ್ಸವಲ್ಲ. ಬರ್ನ್ಔಟ್ ಕೂಡ ಆಗಿರಲಿಲ್ಲ. ಉದ್ಯೋಗದ ಜೊತೆಗೆ ಕಂಟೆಂಟ್ ಕ್ರಿಯೇಷನ್ ಶುರು ಮಾಡಿದ್ದ ಜಿಯಾಂಗ್ ಅವರಿಗೆ ಪುಸ್ತಕ ಬರೆಯುವ ಅವಕಾಶವೂ ಸಿಕ್ಕಿತ್ತು. ಕೆಲಸ, ಪುಸ್ತಕ ಬರೆಯುವುದು ಮತ್ತು ಕಂಟೆಂಟ್ ಮಾಡುವುದು ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟವಾಗಿತ್ತು. ಹೀಗಾಗಿ ತಮ್ಮದೇ ಕೆಲಸದತ್ತ ಸಂಪೂರ್ಣ ಗಮನ ಕೊಡಲು ಅವರು ನಿರ್ಧರಿಸಿದರು. 2026ರ ಜೂನ್ನಲ್ಲಿ ಕೆಲಸ ಬಿಟ್ಟ ಅವರು, ತಮ್ಮ ನಿರ್ಧಾರವನ್ನು ಪರೀಕ್ಷಿಸಿಕೊಳ್ಳಲು ಒಂದು ವರ್ಷ ಸಮಯ ನೀಡಿದ್ದಾರೆ. ಒಂದು ವರ್ಷದ ನಂತರ ಮತ್ತೆ ಕಾರ್ಪೊರೇಟ್ ಕೆಲಸಕ್ಕೆ ಮರಳಬೇಕೋ ಅಥವಾ ಇದೇ ದಾರಿಯಲ್ಲಿ ಮುಂದುವರಿಯಬೇಕೋ ಎಂಬುದನ್ನು ನಿರ್ಧರಿಸಲಿದ್ದಾರೆ.

ಉದ್ಯೋಗ ಬಿಟ್ಟ ನಂತರ ಆದಾಯದಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಿದೆ. ಜುಲೈನಲ್ಲಿ ಕಂಟೆಂಟ್ ಕ್ರಿಯೇಷನ್ನಿಂದ ಅವರಿಗೆ ಸಿಕ್ಕಿದ್ದು ಕೇವಲ 6 ಡಾಲರ್, ಅಂದರೆ ಸುಮಾರು 500 ರೂಪಾಯಿ. ಆದರೆ ಅದು ಅವರ ಒಟ್ಟು ಆದಾಯವಲ್ಲ. ಪುಸ್ತಕದ ಅಡ್ವಾನ್ಸ್ ಸೇರಿದಂತೆ ಬೇರೆ ಆದಾಯ ಅವರಿಗೆ ಬರ್ತಿದೆ. ಮುಂದಿನ ತಿಂಗಳುಗಳಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ನಂಬಿದ್ದಾರೆ.

ತಿಂಗಳಿಗೆ 500 ರೂಪಾಯಿಯನ್ನು ಸೋಶಿಯಲ್‌ ಮೀಡಿಯಾದಿಂದ ಗಳಿಸಿದ್ರೂ ಜಿಯಾಂಗ್ ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ.ಸಮಯ ಮತ್ತು ಕೆಲಸದ ಮೇಲೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಎನ್ನುತ್ತಾರೆ ಅವರು. ಕಂಟೆಂಟ್ ಕ್ರಿಯೇಟರ್ ಆದ ತಕ್ಷಣ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಸಾಧ್ಯವಿಲ್ಲ. ಇದಕ್ಕೆ ನಿರಂತರ ಪ್ರಯತ್ನ ಬೇಕು.

PREV
Read more Articles on
click me!

Recommended Stories

ಐಟಿ ಕಂಪನಿಯಲ್ಲಿ ರಾತ್ರಿಪಾಳಿ ಮಾಡುವ ಮಹಿಳಾ ಟೆಕ್ಕಿಗಳ ಸುರಕ್ಷತಾ ನಿಯಮ ಹಿಂಪಡೆದ ಸರ್ಕಾರ; ನೌಕರರಿಂದ ಆಕ್ರೋಶ
20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!