NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Apr 30, 2022, 2:10 PM IST

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.13 ಆಗಿದೆ. 


ಬೆಂಗಳೂರು (ಎ.30):  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ (National Thermal Power Corporation) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವಿವಿಧ ಕಾರ್ಯನಿರ್ವಾಹಕ ( Executive)  ಹುದ್ದೆಗಳು ಖಾಲಿ ಇದ್ದು  ಒಟ್ಟು 15 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಮೇ.13 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ https://www.ntpc.co.in/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಅರ್ಜಿ ಸಲ್ಲಿಸಬೇಕಾದ ವೆಬ್‌ತಾಣ https://careers.ntpc.co.in/ ಆಗಿದೆ.

ಒಟ್ಟು 15 ಹುದ್ದೆಗಳ ಮಾಹಿತಿ
ಕಾರ್ಯನಿರ್ವಾಹಕ (Solar PV): 5 ಹುದ್ದೆಗಳು
ಕಾರ್ಯನಿರ್ವಾಹಕ (Data Analyst-ಡೇಟಾ ವಿಶ್ಲೇಷಕ) : 1 ಹುದ್ದೆ
ಕಾರ್ಯನಿರ್ವಾಹಕ (LA/R&R): 9 ಹುದ್ದೆಗಳು

Tap to resize

Latest Videos

INDIAN ARMY RECRUITMENT 2022: 4 ವರ್ಷಗಳ B.SC  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆ

ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಮಾಡಿರಬೇಕು. ಜೊತೆಗೆ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.

ಕಾರ್ಯನಿರ್ವಾಹಕ (Solar PV):B.E/B.Tech ಮಾಡಿರಬೇಕು.
ಕಾರ್ಯನಿರ್ವಾಹಕ (Data Analyst-ಡೇಟಾ ವಿಶ್ಲೇಷಕ) : CS/IT/ECE ನಲ್ಲಿ B.E./B.Tech./M.Tech ಅಥವಾ MCA ಅಥವಾ ಡೇಟಾ ಸೈನ್ಸ್/ಬಿಸಿನೆಸ್ ಅನಾಲಿಟಿಕ್ಸ್/ಡೇಟಾ ಅನಾಲಿಟಿಕ್ಸ್ ನಲ್ಲಿ PG ಪದವಿ/ ಡಿಪ್ಲೋಮಾ  ಮಾಡಿರಬೇಕು.  
ಕಾರ್ಯನಿರ್ವಾಹಕ (LA/R&R): ಗ್ರಾಮೀಣ ನಿರ್ವಹಣೆ/ಗ್ರಾಮೀಣಾಭಿವೃದ್ಧಿ ಅಥವಾ MBA (ಗ್ರಾಮೀಣ ನಿರ್ವಹಣೆ) ಅಥವಾ MSW ನಲ್ಲಿ PG ಪದವಿ/PG ಡಿಪ್ಲೊಮಾ ಮಾಡಿರಬೇಕು.

ಅರ್ಜಿ ಶುಲ್ಕ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ /EWs/OBC ಅಭ್ಯರ್ಥಿಗಳಿಗೆ ₹300 ಅರ್ಜಿ ಶುಲ್ಕ ಪಾವತಿಸಬೇಕು. ಮತ್ತು SC/ST, PWD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ.

ವಯೋಮಿತಿ:  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ನಿಗದಿಯಾಗಿದೆ.
ಕಾರ್ಯನಿರ್ವಾಹಕ (Solar PV): ಗರಿಷ್ಟ 40  ವರ್ಷ
ಕಾರ್ಯನಿರ್ವಾಹಕ (Data Analyst-ಡೇಟಾ ವಿಶ್ಲೇಷಕ) : ಗರಿಷ್ಟ 35 ವರ್ಷ
ಕಾರ್ಯನಿರ್ವಾಹಕ (LA/R&R): ಗರಿಷ್ಟ 35  ವರ್ಷ 

ವೇತನ ವಿವರ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ  ವೇತನ ದೊರೆಯಲಿದೆ.
ಕಾರ್ಯನಿರ್ವಾಹಕ (Solar PV):₹100,000
ಕಾರ್ಯನಿರ್ವಾಹಕ (Data Analyst-ಡೇಟಾ ವಿಶ್ಲೇಷಕ) : ₹100,000
ಕಾರ್ಯನಿರ್ವಾಹಕ (LA/R&R): ₹90000

IIMB Recruitment 2022: ಸಹಾಯಕ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ

ಬರೋಬ್ಬರಿ 3614 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ (Oil and Natural Gas Corporation Limited-ONGC) ನಲ್ಲಿ ಖಾಲಿ ಇರುವ ಒಟ್ಟು 3614 ಅಪ್ರೆಂಟಿಸ್ ( Apprentice) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 15, 2022ರವೆಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ಅಧಿಕೃತ ವೆಬ್‌ತಾಣ ongcindia.com ಗೆ ಭೇಟಿ ನೀಡಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ  ಬಿಎ / ಬಿ.ಕಾಮ್ /ಬಿಎಸ್ಸಿ / ಬಿಬಿಎ / ಬಿಇ ಪದವಿ, ಡಿಪ್ಲೊಮಾ   ಮತ್ತು ಐಟಿಐ  ಮಾಡಿರಬೇಕು.

click me!