ನಿರುದ್ಯೋಗ ನಿವಾರಣೆಗೆ 'ವಿಂಗ್‌' ಸ್ಥಾಪನೆ, ಉದ್ಯೋಗ ಕಲ್ಪಿಸುವುದೇ ನನ್ನ ಮೊದಲ ಆದ್ಯತೆ: ಎಚ್‌ಡಿಕೆ

By Kannadaprabha News  |  First Published Oct 19, 2024, 10:23 AM IST

ಮಂಡ್ಯ, ಮೈಸೂರು, ತುಮಕೂರು, ಹಾಸನ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಹಲವು ನಗರಗಳಲ್ಲಿ ಕೈಗಾರಿಕೋದ್ಯಮ ಸ್ಥಾಪನೆಯ ಚಿಂತನೆಯಿದೆ. ಬಂಡವಾಳ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಸಹಕಾರ ಬೇಕು. ಕೈಗಾರಿಕೋದ್ಯಮಿಗಳ ಜೊತೆಗೆ ಚರ್ಚೆ ನಡೆಸಿದ್ದು, ಕೆಲಸಗಳು ಶೀಘ್ರ ಪ್ರಾರಂಭವಾಗಲಿವೆ: ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ


ಮಂಡ್ಯ(ಅ.19):  ಕರ್ನಾಟಕ ಸೇರಿದಂತೆ ದೇಶದ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಕೈಗಾರಿಕಾ ಇಲಾಖೆಯಿಂದ ವಿಂಗ್ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು. 

ನಗರದಲ್ಲಿ ಶುಕ್ರವಾರ ಕೇಂದ್ರ ಕೈಗಾರಿಕಾ ಇಲಾಖೆ, ಜಿಲ್ಲಾಡಳಿತ ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ (ಮಂಡ್ಯ ಟು ಇಂಡಿಯಾ) ಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದ ಕೈಗಾರಿಕಾ ಸಚಿವನಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದೇ ನನ್ನ ಮೊದಲ ಆದ್ಯತೆ ಎಂದರು. 

Tap to resize

Latest Videos

undefined

ಆಫೀಸಿಗೆ ಬನ್ನಿ ಇಲ್ಲಾ ಕೆಲಸ ಬಿಡಿ, ಅಮೆಜಾನ್‌ನ ನಿಂದ ಉದ್ಯೋಗಿಗಳಿಗೆ ಖಡಕ್‌ ವಾರ್ನಿಂಗ್!

ಮಂಡ್ಯ, ಮೈಸೂರು, ತುಮಕೂರು, ಹಾಸನ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಹಲವು ನಗರಗಳಲ್ಲಿ ಕೈಗಾರಿಕೋದ್ಯಮ ಸ್ಥಾಪನೆಯ ಚಿಂತನೆಯಿದೆ. ಬಂಡವಾಳ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಸಹಕಾರ ಬೇಕು. ಕೈಗಾರಿಕೋದ್ಯಮಿಗಳ ಜೊತೆಗೆ ಚರ್ಚೆ ನಡೆಸಿದ್ದು, ಕೆಲಸಗಳು ಶೀಘ್ರ ಪ್ರಾರಂಭವಾಗಲಿವೆ ಎಂದರು. 

ಕೇಂದ್ರದ ಕೈಗಾರಿಕಾ ಸಚಿವನಾಗಿರುವ ನನ್ನ ಜೊತೆ ಕೈಗಾರಿಕಾಭಿವೃದ್ಧಿ ಬಗ್ಗೆ ಚರ್ಚಿ ಸಲು ರಾಜ್ಯ ಸರ್ಕಾರದ ಒಬ್ಬ ಮಂತ್ರಿಯೂ ನನ್ನನ್ನು ಭೇಟಿಯಾಗಿಲ್ಲ. ಅವರಿಗೆ ರಾಜ್ಯ ವನ್ನು ಅಭಿವೃದ್ಧಿ ಮಾಡ ಬೇಕೆಂಬ ಹೃದಯ ವೈಶಾಲ್ಯತೆ ಇಲ್ಲ ಎಂದರು. 

click me!