
ನವದೆಹಲಿ: ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ. ಕೃತಕ ಬುದ್ಧಿಮತ್ತೆ ಅಳವಡಿಕೆ, ಜಾಗತಿಕ ಆರ್ಥಿಕ ಸ್ಥಿತ್ಯಂತರ- ಇತರ ಕಾರಣಗಳಿಗಾಗಿ ಈ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ. ಇದರ ಪರಿಣಾಮ ಇ ಸಾವಿರಾರು ಸಿಬ್ಬಂದಿ ಮನೆ ಕಡೆಗೆ ಮುಖ ಮಾಡುವಂತಾಗಿದೆ.
ಭಾರತದ ಟೆಕ್ ದೈತ್ಯ ಟಿಸಿಎಸ್ ಭಾನುವಾರ ಇದೇ ವರ್ಷ 12,000 ನೌಕರರನ್ನು ಮನೆಗೆ ಕಳಿಸುವುದಾಗಿ ಭಾನುವಾರ ಹೇಳಿದೆ.
ಇದರ ಆಸುಪಾಸಿನಲ್ಲೇ ಇಂಟೆಲ್ ಕಂಪನಿಯು 25,000, ಪ್ಯಾನಸಾನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್ 20000, ಸ್ಟಾರ್‌ಬಕ್ಸ್ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ.
ಇದರ ಜತೆಗೆ ವಾಲ್‌ಮಾರ್ಟ್, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಇಳಿಸಲು ನಿರ್ಧರಿಸಿವೆ ಎನ್ನಲಾಗಿದೆ.
ಬ್ಯಾಂಕುಗಳಿಂದ ನೇಮಕಾತಿಗಳು ಗಣನೀಯವಾಗಿ ಕುಸಿತ
HDFC ಬ್ಯಾಂಕ್, SBI ಮತ್ತು Axis ಬ್ಯಾಂಕ್ ಸೇರಿದಂತೆ ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕುಗಳಿಂದ ನೇಮಕಾತಿಗಳು FY25 ರಲ್ಲಿ (Bank Recruitment Declines in FY25) ಗಣನೀಯವಾಗಿ ಕುಸಿತವಾಗಿದೆ. ನಿಧಾನಗತಿಯ ಬೆಳವಣಿಗೆ, ಕಡಿಮೆಯಾದ ವಿಸ್ತರಣೆ ಮತ್ತು ಸುಧಾರಿತ ಕ್ಷೀಣತೆ ಮುಂತಾದ ಅಂಶಗಳು ಈ ಪ್ರವೃತ್ತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ HDFC ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಪ್ರಮುಖ ವಾಣಿಜ್ಯ ಬ್ಯಾಂಕುಗಳು ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಿವೆ.
ನೇಮಕಾತಿ ಸಂಖ್ಯೆಗಳ ಇಳಿಕೆ ಹೇಗಿದೆ?
HDFC ಬ್ಯಾಂಕ್: FY24ರಲ್ಲಿ 89,115 ಉದ್ಯೋಗಿಗಳನ್ನು ನೇಮಿಸಿದ್ದ ಬ್ಯಾಂಕ್, FY25ರಲ್ಲಿ ಈ ಸಂಖ್ಯೆಯನ್ನು 49,713 ಕ್ಕೆ ಇಳಿಸಿದೆ.
SBI: FY24ರಲ್ಲಿ 10,661 ಜನರನ್ನು ನೇಮಿಸಿಕೊಂಡಿದ್ದಾಗ, FY25ರಲ್ಲಿ ಕೇವಲ 1,770 ನೇಮಕಾತಿಗಳಷ್ಟೇ ಮಾಡಲಾಗಿದೆ.
ಆಕ್ಸಿಸ್ ಬ್ಯಾಂಕ್: FY24ರಲ್ಲಿ 40,724 ಜನರನ್ನು ನೇಮಕ ಮಾಡಿಕೊಂಡಿದ್ದು, FY25ರಲ್ಲಿ ಈ ಸಂಖ್ಯೆ 31,674 ಕ್ಕೆ ಇಳಿದಿದೆ.
ನೇಮಕಾತಿಯಲ್ಲಿ ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು:
ಚಿಲ್ಲರೆ ಸಾಲದ ಬೆಳವಣಿಗೆಯ ನಿಧಾನತೆ
ಶಾಖೆಗಳ ವಿಸ್ತರಣೆ ಪ್ರಕ್ರಿಯೆಯ ಹಿಮ್ಮುಖತೆ
ಅತ್ಯಧಿಕ ಉದ್ಯೋಗಿಗಳ ಕಡಿತದ ನಂತರ, ಬ್ಯಾಕ್‌ಫಿಲ್ಲಿಂಗ್ ನೇಮಕಾತಿಗಳ ಕೊರತೆ
ಕ್ಯಾಂಪಸ್ ನೇಮಕಾತಿಗಳ ನಿರ್ಲಕ್ಷ್ಯ
ಡಿಜಿಟಲ್ ಪಾಲುದಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲ್ಮಟ್ಟದ ನೇಮಕಾತಿಗೆ ಹೆಚ್ಚು ಒತ್ತು
ಅಪಾಯ ನಿರ್ವಹಣೆ ಮತ್ತು ಸಂಪತ್ತು ನಿರ್ವಹಣೆಯಲ್ಲಿ ಲ್ಯಾಟರಲ್ ಹುದ್ದೆಗಳಿಗಷ್ಟೇ ಆದ ಆದ್ಯತೆ
ಉದ್ಯೋಗಿಗಳ ಕಡಿತ ಪ್ರಮಾಣ:
HDFC ಬ್ಯಾಂಕ್: 22.6% ಇಳಿಕೆ
ಆಕ್ಸಿಸ್ ಬ್ಯಾಂಕ್: 25.5% ಇಳಿಕೆ
SBI: 2% ಕ್ಕಿಂತ ಕಡಿಮೆ