ಕೆಎಸ್ಸಾರ್ಟಿಸಿಯಲ್ಲಿ ನೇಮಕಾತಿಗೆ ಬ್ರೇಕ್‌

By Kannadaprabha NewsFirst Published Nov 9, 2020, 8:54 AM IST
Highlights

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಈ ವರ್ಷ ಅನುಕಂಪ ಆಧರಿತ ನೇಮಕಾತಿ ಮಾಡಿಕೊಳ್ಳದಿರಲು ನಿರ್ಧರಿಸಿದೆ.
 

ಬೆಂಗಳೂರು (ನ.09): ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಈ ವರ್ಷ ಅನುಕಂಪ ಆಧರಿತ ನೇಮಕಾತಿ ಮಾಡಿಕೊಳ್ಳದಿರಲು ನಿರ್ಧರಿಸಿದೆ.

ಸೇವಾ ಅವಧಿಯಲ್ಲಿ ನಿಗಮದ ನೌಕರರು ಅಕಾಲಿಕ ಮರಣಕ್ಕೆ ತುತ್ತಾದರೆ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ನೌಕರಿ ನೀಡಲಾಗುತ್ತದೆ.

ನಿಗಮದಲ್ಲಿ ಖಾಲಿಯಾಗುವ ಹುದ್ದೆಗಳಿಗೆ ಅನುಗುಣವಾಗಿ ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಕೊರೋನಾ ಎಫೆಕ್ಟ್: ರಾಜ್ಯದ ಈ ಹುದ್ದೆಗಳ ನೇಮಕಾತಿ ಸ್ಥಗಿತ ..

ಪ್ರಸ್ತುತ ಕೊರೋನಾ ಸೋಂಕಿನಿಂದ ನಿಗಮದ ಆರ್ಥಿಕ ಸ್ಥಿತಿ ಕುಸಿದಿದ್ದು, ಸುಧಾರಣೆಗೆ ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಮುಂದಿನ ಆರ್ಥಿಕ ವರ್ಷ ಅಥವಾ ಮುಂದಿನ ಆದೇಶದವರೆಗೆ ಈ ಅನುಕಂಪ ಆಧರಿತ ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಿರಲು ನಿಗಮದ ತೀರ್ಮಾನಿಸಿದೆ. ಆದರೆ ಮೃತರ ನೌಕರರ ಕುಟುಂಬದವರು ಅನುಕಂಪ ಆಧರಿತ ನೌಕರರಿಗೆ ಸಲ್ಲಿಸಲಾಗುವ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ.

click me!