ಭರ್ಜರಿ ಗುಡ್ ನ್ಯೂಸ್ : ಖಾಸಗಿ ವಲಯದ ಶೇ.75 ಹುದ್ದೆ ಸ್ಥಳೀಯರಿಗೆ ಮೀಸಲು

By Kannadaprabha NewsFirst Published Nov 6, 2020, 7:47 AM IST
Highlights

ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ 75ರಷ್ಟು ಮೀಸಲಾತಿ ಸ್ಥಳೀಯರಿಗೆ

ಚಂಡೀಗಢ (ನ.06): ರಾಜ್ಯದ ಖಾಸಗಿ ವಲಯದ ಶೇ.75ರಷ್ಟುಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಾಗಿರಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಹರ್ಯಾಣ ವಿಧಾನಸಭೆ ಅಂಗೀಕಾರ ನೀಡಿದೆ. 

ಸರ್ಕಾರದ ಮೈತ್ರಿ ಪಕ್ಷ ಜನನಾಯಕ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಈಡೇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಮನೋಹರ ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ತಿಳಿಸಿದೆ. ತನ್ಮೂಲಕ ಇಂಥ ಕಾಯ್ದೆ ಜಾರಿಗೆ ತಂದ ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಪಟ್ಟಿಗೆ ಹರಾರ‍ಯಣ ಹೊಸ ಸೇರ್ಪಡೆ. 

ಕೈತುಂಬಾ ಸಂಬಳ ನೀಡುತ್ತೆ ಈ ಟಾಪ್ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು ..

ರಾಜ್ಯದಲ್ಲಿರುವ ಖಾಸಗಿ ಸಂಸ್ಥೆಗಳು, ಟ್ರಸ್ಟ್‌ಗಳು ಸೇರಿದಂತೆ ಇನ್ನಿತರ ಕಂಪನಿಗಳು ಸ್ಥಳೀಯರಿಗೆ ಶೇ.75ರಷ್ಟುಹುದ್ದೆ ಮೀಸಲಿಡುವ ಈ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳಲು ರಾಜ್ಯಪಾಲರ ಅಂಕಿತವೊಂದೇ ಬಾಕಿಯಿದೆ.

ಮುಂಗಾರು ಅಧಿವೇಶನದ 2ನೇ ಭಾಗವಾಗಿ ನಡೆಯುತ್ತಿರುವ ಗುರುವಾರದ ಕಲಾಪದಲ್ಲಿ ಡಿಸಿಎಂ ದುಷ್ಯಂತ್‌ ಚೌಟಾಲ ಅವರು ಈ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯ ಅಂಗೀಕಾರದೊಂದಿಗೆ ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಇದರಿಂದ ರಾಜ್ಯದ ಸಾವಿರಾರು ಉದ್ಯೋಗಾಂಕ್ಷಿಗಳಿಗೆ ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

click me!