ಕೆಪಿಎಸ್‌ಸಿ ಪರೀಕ್ಷೆಗಳ ದಿನಾಂಕ ಪ್ರಕಟ

Kannadaprabha News   | Asianet News
Published : Nov 08, 2020, 07:10 AM IST
ಕೆಪಿಎಸ್‌ಸಿ ಪರೀಕ್ಷೆಗಳ ದಿನಾಂಕ ಪ್ರಕಟ

ಸಾರಾಂಶ

ಕೆಪಿಎಸ್‌ಸಿ ಪರೀಕ್ಷೆಗಳ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ದಿನಾಂಕ ಇಂತಿದೆ. 

 ಬೆಂಗಳೂರು (ನ.08):  ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೊರಡಿಸಿರುವ ಅಧಿಸೂಚನೆಗಳಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ನಡೆಸುವ ದಿನಾಂಕ ಪ್ರಕಟಿಸಲಾಗಿದೆ.

2020ರ ಜನವರಿ 31ರಂದು ಅಧಿಸೂಚನೆ ಹೊರಡಿಸಿದ್ದ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ‘ಎ’ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಡಿಸೆಂಬರ್‌ 21 ರಿಂದ 24ರ ವರೆಗೆ, ಗೆಜಿಟೆಡ್‌ ಪ್ರೊಬೇಷನರಿ ಹುದ್ದೆಗಳ ಗ್ರೂಪ್‌ ‘ಎ’ ಮತ್ತು ‘ಸಿ’ ವೃಂದದ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಮುಂದಿನ ಜನವರಿ 2 ರಿಂದ 5ರ ವರೆಗೆ ನಡೆಯಲಿದೆ.

ಅರಣ್ಯ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಮುಖ್ಯ ಪರೀಕ್ಷೆಯನ್ನು 2020ರ ಜನವರಿ 27ರಿಂದ 30ರ ವರೆಗೆ ನಡೆಲಿದೆ. ಇನ್ನುಳಿದಂತೆ ಜನವರಿ 24ರಂದು ಪ್ರಥಮ ದರ್ಜೆ ಸಹಾಯಕ, ಫೆ.14ರಂದು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಕೆನರಾ ಬ್ಯಾಂಕ್ ಗ್ರಾಹಕರಿಗೆ ₹3 ಕೋಟಿ ಪಂಗನಾಮ; ಗ್ರಾಹಕರ ಹೆಸರಲ್ಲಿ ಸಾಲ ಪಡೆದು ಮ್ಯಾನೇಜರ್ ಎಸ್ಕೇಪ್!
ಇನ್ಫೋಸಿಸ್‌ನಿಂದ ಭರ್ಜರಿ ಗುಡ್ ನ್ಯೂಸ್, ಹೊಸಬರ ಸ್ಯಾಲರಿ 21 ಲಕ್ಷ ರೂಪಾಯಿಗೆ ಏರಿಕೆ