ಪಿಎಸ್‌ಐ 2024ರ ಪರೀಕ್ಷೆ: 42,933 ಅಭ್ಯರ್ಥಿಗಳ ಅಂಕಪಟ್ಟಿ ಬಿಡುಗಡೆ ಮಾಡಿದ ಕೆಇಎ

By Sathish Kumar KH  |  First Published Nov 6, 2024, 5:09 PM IST

ಕರ್ನಾಟಕ ಪೊಲೀಸ್ ಇಲಾಖೆಯ 402 ಪಿಎಸ್ಐ ಹುದ್ದೆಗಳಿಗೆ ನಡೆದ ಪರೀಕ್ಷೆಯ ಅಂಕಪಟ್ಟಿ ಬಿಡುಗಡೆಯಾಗಿದೆ. ಅಭ್ಯರ್ಥಿಗಳು ನವೆಂಬರ್ 9 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.


ಬೆಂಗಳೂರು (ನ.06): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಳೆದ ತಿಂಗಳು (ಅ.03ರಂದು) ನಡೆಸಲಾಗಿದ್ದ ಪರೀಕ್ಷೆಯ ಕೀ ಉತ್ತರಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ನ.06ರ ಬುಧವಾರ ಅಭ್ಯರ್ಥಿಗಳು ಪಡೆದ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಪರೀಕ್ಷೆ ಬರೆದ 42,933 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳಿದ್ದಲ್ಲಿ ನ.9ರೊಳಗೆ ಸಲ್ಲಿಕೆ ಮಾಡುವಂತೆ ಪ್ರಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ ತಿಂಗಳಲ್ಲಿ ನಡೆದ (ದಿನಾಂಕ: 03.10.2024 ರಂದು) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ವಿವರಗಳುಳ್ಳ ತಾತ್ಕಾಲಿಕ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ವೆಬ್‌ಸೈಟ್‌ನಲ್ಲಿ ( https://cetonline.karnataka.gov.in/vaoresult/resultdescomr.aspx ) ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲಿಂಕ್ ಮೂಲಕ ದಿನಾಂಕ: 09.11.2024ರ ಸಂಜೆ 5.30 ವರೆಗೂ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಬೇರೆ ಯಾವುದೇ ಇತರೆ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ.

Tap to resize

Latest Videos

undefined

ಇದನ್ನೂ ಓದಿ: ಕೊಪ್ಪಳ: ಕೂಲಿ ಕೆಲಸ ಮಾಡುವವರ ಮಗ ಈಗ ಪಿಎಸ್‌ಐ, ಬಡ ತಂದೆ-ತಾಯಿಯ ಕನಸು ನನಸು ಮಾಡಿದ ಪುತ್ರ!

ಸೂಚನೆ: ದಿನಾಂಕ 06.11.2024 ರಂದು ಪ್ರಕಟಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾತ್ರ ಲಿಂಕ್ ಮೂಲಕ ಸಲ್ಲಿಸುವುದು. ಈಗಾಗಲೇ ಕೀ ಉತ್ತರಗಳನ್ನು ಅಂತಿಮಗೊಳಿಸಿದ್ದು, ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇನ್ನು ಪರೀಕ್ಷೆ ಭರೆದ ಅಭ್ಯರ್ಥಿಗಳು ಪೇಪರ್ -1, ಪೇಪರ್-2ರಲ್ಲಿ ಪಡೆದ ನಿರ್ದಿಷ್ಟ ಅಂಕಗಳು ಹಾಗೂ ಎರಡೂ ಪತ್ರಿಕೆ ಸೇರಿ ನೇಮಕಾತಿಗೆ ಪರಿಗಣಿಸುವ ಒಟ್ಟು ಅಂಕಗಳ ಮಾಹಿತಿಯನ್ನೂ ನೀಡಲಾಗಿದೆ. ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಿಸಿದ ಪಟ್ಟಿಯಲ್ಲಿ ಅಥವಾ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ವೈಯಕ್ತಿಕವಾಗಿ ಅಂಕಪಟ್ಟಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ವೈಯಕ್ತಿಕ ಅಂಕಪಟ್ಟಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://cetonline.karnataka.gov.in/keawebentry456/PSIREC2024/ScoreListkannada.pdf

click me!