
ಭಾರತೀಯ ಕರಾವಳಿ ಕಾವಲುಪಡೆಯಲ್ಲಿ (Indian Coast Guard) 365 ನಾವಿಕ್, ಯಾಂತ್ರಿಕ್ ಮತ್ತು ಹೈಜೀನಿಸ್ಟ್ (ನೈರ್ಮಲ್ಯ ತಜ್ಞ) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಭಾರತೀಯ ಕರಾವಳಿ ಕಾವಲು ಪಡೆ
ಹುದ್ದೆಗಳ ಒಟ್ಟು ಸಂಖ್ಯೆ: 365
ಹುದ್ದೆಯ ಹೆಸರು: ನಾವಿಕ್, ಯಾಂತ್ರಿಕ್ ಮತ್ತು ಹೈಜೀನಿಸ್ಟ್
ಕೆಲಸದ ಸ್ಥಳ: ಅಖಿಲ ಭಾರತ
ಮಾಸಿಕ ಸಂಬಳ 21,700 – 29,200
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಒಬಿಸಿ (OBC) ಅಭ್ಯರ್ಥಿಗಳಿಗೆ: 03 ವರ್ಷ
ಎಸ್‌ಸಿ / ಎಸ್‌ಟಿ (SC / ST) ಅಭ್ಯರ್ಥಿಗಳಿಗೆ: 03 ವರ್ಷ
ಅರ್ಜಿ ಶುಲ್ಕ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಮೊದಲು ಭಾರತೀಯ ಕರಾವಳಿ ಕಾವಲು ಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
ಆನ್‌ಲೈನ್‌ನಲ್ಲಿ ನೊಂದಣಿ ಮಾಡಲು ಸರಿಯಾದ ಇಮೇಲ್ ಐಡಿ ಮತ್ತು ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಬಳಸಿ.
ನಿಮ್ಮ 10ನೇ/12ನೇ ತರಗತಿ ಅಂಕಪಟ್ಟಿ, ಐಡಿ ಪ್ರೂಫ್, ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಸಿಗ್ನೇಚರ್ ಅನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಕೆಗೆ ಆರಂಭವಾದ ದಿನಾಂಕ: ಅಕ್ಟೋಬರ್ 6-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21-2026