ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 650 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಲ್ಲಿ ಕರ್ನಾಟಕದಲ್ಲಿ 42 ಹುದ್ದೆಗಳು ಖಾಲಿ ಇದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.
ಬೆಂಗಳೂರು (ಮೇ.11): ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ (India Post Payments Bank-IPPB) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 650 ಗ್ರಾಮೀಣ ಡಾಕ್ ಸೇವಕ್ (Grameen Dak Sevaks) ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ. ಕರ್ನಾಟಕದಲ್ಲಿ ಒಟ್ಟು 42 ಹುದ್ದೆಗಳು ಖಾಲಿ ಇದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://ippbonline.com/ ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 650 ಹುದ್ದೆಗಳ ರಾಜ್ಯವಾರು ಮಾಹಿತಿ ಹೀಗಿದೆ
ರಾಜ್ಯವಾರು ವಿವರ
ಆಂಧ್ರ ಪ್ರದೇಶ 34
ಅಸ್ಸಾಂ 25
ಬಿಹಾರ 76
ಛತ್ತೀಸ್‌ಗಢ 20
ದೆಹಲಿ 4
ಗುಜರಾತ್ 31
ಹರಿಯಾಣ 12
ಹಿಮಾಚಲ ಪ್ರದೇಶ 9
ಜಮ್ಮು ಮತ್ತು ಕಾಶ್ಮೀರ 5
ಜಾರ್ಖಂಡ್ 8
ಕರ್ನಾಟಕ 42
ಕೇರಳ 7
ಮಧ್ಯಪ್ರದೇಶ 32
ಮಹಾರಾಷ್ಟ್ರ 71
ಒಡಿಶಾ 20
ಪಂಜಾಬ್ 18
ರಾಜಸ್ಥಾನ 35
ತಮಿಳುನಾಡು 45
ತೆಲಂಗಾಣ 21
ಉತ್ತರ ಪ್ರದೇಶ 84
ಉತ್ತರಾಖಂಡ 3
ಪಶ್ಚಿಮ ಬಂಗಾಳ 33
ಈಶಾನ್ಯ ರಾಜ್ಯಗಳು 15
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
NORTH BENGALURU ಮುಂದಿನ ಉದ್ಯಮ ಕೇಂದ್ರ, 3.5ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ ಸಾಧ್ಯತೆ
ವಯೋಮಿತಿ: ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 25 ರಿಂದ 30 ವರ್ಷದ ಒಳಗಿರಬೇಕು. ಅಭ್ಯರ್ಥಿಗಳಿಗೆ ವರ್ಗಾನುಸಾರ
ಅರ್ಜಿ ಶುಲ್ಕ: ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ₹750 ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯ ಪರೀಕ್ಷೆ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ: ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹30,000 ವೇತನ ದೊರೆಯಲಿದೆ.
BSF Recruitment 2022: ಖಾಲಿ ಇರುವ 90 ಹುದ್ದೆಗಳಿಗೆ ನೇಮಕಾತಿ
BMRCL ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ (Bengaluru Metro Rail Corporation Limited- BMRCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಫೈರ್ ಇನ್‌ಸ್ಪೆಕ್ಟರ್ (Fire Inspector) ಒಟ್ಟು 6 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೇ ದಿನ ಜೂನ್ 3 ಆಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ https://english.bmrc.co.in/ ಗೆ ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾಭ್ಯಾಸ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ಫೈರ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ B.Sc, B.E ಅಥವಾ B.Tech ವಿದ್ಯಾರ್ಹತೆ ಪಡೆದಿರಬೇಕು.