Bengaluru Jobs: ಹಗಲು-ರಾತ್ರಿ ಕೆಲಸ ಮಾಡಿದ್ರೂ ₹2,000 ಹೈಕ್; ರಾಜೀನಾಮೆ ಕೊಟ್ಟು ತಮಟೆ ಬಾರಿಸಿ ಕುಣಿದ ಉದ್ಯೋಗಿ!

Published : Jul 01, 2026, 06:16 PM IST
Job quit Viral Video

ಸಾರಾಂಶ

ಕೆಲಸದ ಒತ್ತಡ, ಸಿಕ್ಕಿದ್ದು ಮಾತ್ರ ಕೇವಲ 6% ಸಂಬಳ ಏರಿಕೆ. ಮಾನಸಿಕವಾಗಿ ಜರ್ಜರಿತನಾದ ಯುವಕನೊಬ್ಬ, ಕೈಲಿ ಬೇರೆ ಕೆಲಸ ಇಲ್ಲದಿದ್ದರೂ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಕೋಲಾರ ಮೂಲದ ಪ್ರಮೋದ್ ಎಂಬ ಈ ಯುವಕನ ಕಥೆ ಈಗ ವೈರಲ್ ಆಗಿದೆ.

ಕೈಯಲ್ಲಿ ಬೇರೆ ಕೆಲಸ ಇಲ್ಲದೆ ಇದ್ದಕ್ಕಿದ್ದಂತೆ ಈಗಿನ ಕೆಲಸಕ್ಕೆ ರಾಜೀನಾಮೆ ಕೊಡಬೇಕೆಂದರೆ ಮನಸ್ಸು ಎಷ್ಟು ಬೇಸತ್ತು ಹೋಗಿರಬೇಕು ಅಲ್ವಾ? ಕೆಲವೊಮ್ಮೆ ಕೆಲವರಿಗೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಇದೀಗ ಅಂತಹದ್ದೇ ಒಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. 'ಹ್ಯೂಮನ್ಸ್ ಆಫ್ ಬಾಂಬೆ' ಹಂಚಿಕೊಂಡ ವಿಡಿಯೋದಲ್ಲಿ ಪ್ರಮೋದ್ ಪೌಲ್ ಎಂಬ ಯುವಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

ಸೈಕ್ಯಾಟ್ರಿಸ್ಟ್‌ರನ್ನು ಭೇಟಿ

ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರೂ, ಅದಕ್ಕೆ ತಕ್ಕಂತೆ ಸಂಬಳ ಸಿಗಲಿಲ್ಲ. ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದಾಗಿ ಪ್ರಮೋದ್ ಹೇಳುತ್ತಾರೆ. 'ಇಷ್ಟೆಲ್ಲಾ ಆತಂಕ, ಖಿನ್ನತೆ ಅನುಭವಿಸಿದ್ದು ಯಾಕೆ? ಕೇವಲ 6% ಸಂಬಳ ಏರಿಕೆಗಾ? ಅಂದರೆ, ತಿಂಗಳಿಗೆ ಕೇವಲ 2,600 ರೂಪಾಯಿ ಜಾಸ್ತಿ ಆಗಿದ್ದಕ್ಕೆ' ಎಂದು ಅವರು ಪ್ರಶ್ನಿಸುತ್ತಾರೆ. ಕೆಲಸದ ಒತ್ತಡದಿಂದಾಗಿ ಕೊನೆಗೆ ಮನೋವೈದ್ಯರ ಸಹಾಯ ಪಡೆಯಬೇಕಾಯಿತು ಎಂದೂ ಪ್ರಮೋದ್ ವಿವರಿಸಿದ್ದಾರೆ. 'ತೀವ್ರ ಆತಂಕದಿಂದಾಗಿ ನಾನು ಸೈಕ್ಯಾಟ್ರಿಸ್ಟ್‌ರನ್ನು ಭೇಟಿಯಾದೆ. ಕನ್ಸಲ್ಟೇಷನ್ ಫೀಸ್ 2,000 ರೂಪಾಯಿ ಆಗಿತ್ತು. ಅವರು ನನ್ನನ್ನು ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಥೆರಪಿಗೆ ಕಳುಹಿಸಿದರು. ಅದಕ್ಕೆ ಒಂದು ಸೆಷನ್‌ಗೆ 3,000 ರೂಪಾಯಿ. ನಿಮ್ಮ ಸಂಬಳ ಏರಿಕೆಗಿಂತ ಒಂದು ಥೆರಪಿ ಸೆಷನ್‌ನ ಖರ್ಚು ಹೆಚ್ಚಾಗಿದ್ದರೆ, ನೀವು ನಿಜವಾಗಿಯೂ ಸಂಕಷ್ಟದಲ್ಲಿದ್ದೀರಿ ಎಂದೇ ಅರ್ಥ' ಎಂದು ಪ್ರಮೋದ್ ಹೇಳಿದ್ದಾರೆ.

ಪ್ರಮೋದ್ ಬೆಳೆದಿದ್ದು ಬೆಂಗಳೂರಿನ ಸಮೀಪದ ಕೋಲಾರದಲ್ಲಿ. ಅವರದ್ದು ಸಾಲದಲ್ಲಿದ್ದ ಕುಟುಂಬ. ತಂದೆ ಪಾಸ್ಟರ್ ಆಗಿದ್ದರೆ, ತಾಯಿ ಗೃಹಿಣಿ. ಪ್ರಮೋದ್ ಮತ್ತು ಅವರ ಸಹೋದರನ ವಿದ್ಯಾಭ್ಯಾಸಕ್ಕಾಗಿ ಪೋಷಕರು ದೊಡ್ಡ ಮೊತ್ತದ ಸಾಲ ಮಾಡಿದ್ದರು. ಆ ಜವಾಬ್ದಾರಿಯೆಲ್ಲ ತನ್ನ ಹೆಗಲ ಮೇಲಿತ್ತು ಎನ್ನುತ್ತಾರೆ ಪ್ರಮೋದ್. ಪದವಿ ಮುಗಿದ ನಂತರ, ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಂಡು 'ವೆಲ್ತ್ ಮ್ಯಾನೇಜರ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ಕುಟುಂಬದ ಸಾಲ ತೀರಿಸಲು 8 ಲಕ್ಷ ರೂಪಾಯಿ ಲೋನ್ ಕೂಡ ತೆಗೆದುಕೊಂಡಿದ್ದರು.

ನಮ್ಮೂರಿನ ಚಹಾ ಮಾರುವವರು ತಿಂಗಳಿಗೆ 2 ಲಕ್ಷ ರೂಪಾಯಿ

ನಂತರ, ಒಂದು ಪ್ರಮುಖ ಹಣಕಾಸು ಸಂಸ್ಥೆಗೆ ಸೇರಿದರು. ಅಲ್ಲಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದರು. ಆದರೆ, ನಂತರ ಮ್ಯಾನೇಜ್‌ಮೆಂಟ್ ಬದಲಾಯಿತು. ಇದರಿಂದಾಗಿ, ಪ್ರಮೋಷನ್‌ಗಳು ನಿಂತುಹೋದವು, ಕೆಲಸದ ಹೊರೆ ಹೆಚ್ಚಾಯಿತು. 'ನಮ್ಮೂರಿನ ಚಹಾ ಮಾರುವವರು ತಿಂಗಳಿಗೆ 2 ಲಕ್ಷ ರೂಪಾಯಿವರೆಗೆ ಸಂಪಾದಿಸುವುದನ್ನು ನಾನು ನೋಡಿದ್ದೇನೆ. ಆದರೆ ನಾನು ಮಾತ್ರ ಕಡಿಮೆ ಸಂಬಳದಲ್ಲಿ ಸಿಲುಕಿಕೊಂಡಿದ್ದೆ' ಎಂದು ಪ್ರಮೋದ್ ಹೇಳುತ್ತಾರೆ.

ಮಾನಸಿಕ ಒತ್ತಡವನ್ನು ನಿಭಾಯಿಸಲು ಪ್ರಮೋದ್ ಕಂಟೆಂಟ್ ಕ್ರಿಯೇಷನ್ ಶುರು ಮಾಡಿದರು. 'ನಾನು ಕಾರ್ಪೊರೇಟ್ ಜೀವನದ ಬಗ್ಗೆ ತಮಾಷೆಗಳನ್ನು ಮಾಡಲು ಶುರುಮಾಡಿದೆ, ಅಮ್ಮನ ಜೊತೆ ವಿಡಿಯೋಗಳನ್ನು ಮಾಡಿದೆ. ವಿಡಿಯೋಗಳು ವೈರಲ್ ಆಗಿದ್ದು, ನನಗೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಸಿಕ್ಕರು. ಕಂಟೆಂಟ್ ಕ್ರಿಯೇಷನ್ ನನಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಮುನ್ನಡೆಯಲು ಸಹಾಯ ಮಾಡಿತು' ಎಂದು ಪ್ರಮೋದ್ ಹೇಳುತ್ತಾರೆ.

ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೀಕ್ಷಿಸಿ

 

ಆದರೆ, ಇದೇ ಸಮಯದಲ್ಲಿ ಆಫೀಸ್‌ನಲ್ಲಿ ಕೆಲಸದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. 'ಒಂದು ಹಂತದಲ್ಲಿ ನಾನು ಸೀನಿಯರ್ ಅನಾಲಿಸ್ಟ್‌ನ ಸಂಪೂರ್ಣ ಕೆಲಸವನ್ನು ಮಾಡುತ್ತಿದ್ದೆ, ಆದರೆ ಅಪ್ರೈಸಲ್ ಸಮಯದಲ್ಲಿ ಸಿಕ್ಕಿದ್ದು ಕೇವಲ 2,000 ರೂಪಾಯಿ ಸಂಬಳ ಏರಿಕೆ. ಹಾಗಾಗಿಯೇ ಕೆಲಸ ಬಿಟ್ಟೆ. ಈಗಲೂ ನನ್ನ ಮೇಲೆ 3 ಲಕ್ಷ ರೂಪಾಯಿ ಸಾಲವಿದೆ. ಆದರೂ, ಶೋಷಣೆಯನ್ನು ಸಹಿಸಿಕೊಂಡು ಇರಬಾರದು ಎಂದು ನಿರ್ಧರಿಸಿ ಕೆಲಸ ಬಿಟ್ಟೆ' ಎಂದು ಪ್ರಮೋದ್ ಹೇಳಿದ್ದಾರೆ. ಈ ಯುವಕನ ಧೈರ್ಯವನ್ನು ಮೆಚ್ಚಿ ಅನೇಕರು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

2500 Govt Jobs: ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ಸುದ್ದಿ: ಬರೋಬ್ಬರಿ 2500 ಹುದ್ದೆಗಳಿಗೆ ನೇಮಕಾತಿ ಬಿಗ್ ಅಪ್ಡೇಟ್!
ಸಾಫ್ಟ್‌ವೇರ್ ಅಲ್ಲ, ಈ ಕ್ಷೇತ್ರದಲ್ಲಿರುವ ಹೆಣ್ಮಕ್ಕಳಿಗೆ ಜಾಕ್‌ಪಾಟ್‌! ಸಂಬಳ ಕೇಳಿದ್ರೆ ತಲೆ ತಿರುಗುತ್ತೆ