ಇಸಿಐಎಲ್ ಖಾಲಿ ಇರುವ ವಿವಿಧ ವಿಭಾಗದ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ.14 ಕೊನೆಯ ದಿನಾಂಕವಾಗಿದೆ.
ಬೆಂಗಳೂರು (ಎ.27): ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited- ECIL) ಖಾಲಿ ಇರುವ ವಿವಿಧ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್, ಮ್ಯಾನೇಜರ್, ಅಧಿಕಾರಿ ಮತ್ತು ವಿವಿಧ ಹುದ್ದೆಗಳನ್ನು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್ಲೈನ್ (Offline) ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಲು ಮೇ.14 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ecil.co.in ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 20 ಹುದ್ದೆಗಳ ಮಾಹಿತಿ ಇಂತಿದೆ:
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು-ತಾಂತ್ರಿಕ: 11 ಹುದ್ದೆಗಳು
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು-HR: 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು-ಹಣಕಾಸು: 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಖರೀದಿ: 1 ಹುದ್ದೆ
ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಕಮ್ಯುನಿಕೇಷನ್ಸ್: 1 ಹುದ್ದೆ
ಪ್ರಧಾನ ವ್ಯವಸ್ಥಾಪಕರು-HR: 1 ಹುದ್ದೆ
ಹಿರಿಯ ವ್ಯವಸ್ಥಾಪಕರು-ಹಣಕಾಸು: 2 ಹುದ್ದೆಗಳು
ಸಿಬ್ಬಂದಿ ಅಧಿಕಾರಿ :1 ಹುದ್ದೆ
ಲೆಕ್ಕಾಧಿಕಾರಿ :1 ಹುದ್ದೆ
ಶೈಕ್ಷಣಿಕ ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು-ತಾಂತ್ರಿಕ ಹುದ್ದೆಗೆ ಎಂಜಿನಿಯರಿಂಗ್ ಪದವಿ, ಎಂಬಿಎ, ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು-HR ಹುದ್ದೆಗೆ ಡಿಪ್ಲೊಮಾ, ಪದವಿ, ಎಂಬಿಎ ಮಾಡಿರಬೇಕು.
ಉಪ ಪ್ರಧಾನ ವ್ಯವಸ್ಥಾಪಕರು-ಹಣಕಾಸು ಹುದ್ದೆಗೆ CA/ ICWA ಮಾಡಿರಬೇಕು.
ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಖರೀದಿ ಹುದ್ದೆಗೆ ಪದವಿ, ಸ್ನಾತಕೋತ್ತರ ಡಿಪ್ಲೊಮಾ/ ಎಂಬಿಎ ಮಾಡಿರಬೇಕು.
ಉಪ ಪ್ರಧಾನ ವ್ಯವಸ್ಥಾಪಕರು-ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಹುದ್ದೆಗೆ ಸ್ನಾತಕೋತ್ತರ ಪದವಿ ಮಾಡಿರಬೇಕು.
ಪ್ರಧಾನ ವ್ಯವಸ್ಥಾಪಕರು-HR ಹುದ್ದೆಗೆ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.
ಹಿರಿಯ ವ್ಯವಸ್ಥಾಪಕರು-ಹಣಕಾಸು ಹುದ್ದೆಗೆ CA/ ICWA
ಸಿಬ್ಬಂದಿ ಅಧಿಕಾರಿ ಹುದ್ದೆಗೆ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಬಿಎ ಮಾಡಿರಬೇಕು.
ಲೆಕ್ಕಾಧಿಕಾರಿ ಹುದ್ದೆಗೆ CA/ ICWA ಮಾಡಿರಬೇಕು.
ವೇತನ ವಿವರ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ ವೇತನ ದೊರೆಯಲಿದೆ.
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ₹90,000 ರಿಂದ ₹2,40,000
ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ₹80,000 ರಿಂದ ₹2,20,000
ಹಿರಿಯ ವ್ಯವಸ್ಥಾಪಕರು ಹುದ್ದೆಗಳಿಗೆ ₹70,000 ರಿಂದ ₹2,00,000
ಸಿಬ್ಬಂದಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿ ಹುದ್ದೆಗೆ ₹40,000 ರಿಂದ ₹1,40,000
ವಯೋಮಿತಿ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ.
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ಗರಿಷ್ಠ 53 ವರ್ಷ
ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ಗರಿಷ್ಠ 50 ವರ್ಷ
ಹಿರಿಯ ವ್ಯವಸ್ಥಾಪಕರು ಹುದ್ದೆಗಳಿಗೆ ಗರಿಷ್ಠ 47 ವರ್ಷ
ಸಿಬ್ಬಂದಿ ಅಧಿಕಾರಿ ಹುದ್ದೆಗೆ ಗರಿಷ್ಠ 35 ವರ್ಷ
ಲೆಕ್ಕಾಧಿಕಾರಿ ಹುದ್ದೆಗೆ ಗರಿಷ್ಠ 28 ವರ್ಷ
ಅರ್ಜಿ ಶುಲ್ಕ: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/EWS ಮತ್ತು OBC ಅಭ್ಯರ್ಥಿಗಳು ₹500 ಹಾಗೂ SC/ST/PWD/ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ .
ಕಚೇರಿ ವಿಳಾಸ :Deputy General Manager (HR), Human Resources (Recruitment Section), Administrative Building, Corporate Office, Electronics Corporation of India Limited, ECIL (Post), Hyderabad - 500062, Telangana.