KSRPಯಲ್ಲಿ 5 ವರ್ಷ ಕೆಲಸ ಮಾಡಿದರೆ ಸಿವಿಲ್‌ ಪೊಲೀಸ್‌ ಹುದ್ದೆ

By Kannadaprabha NewsFirst Published Aug 15, 2021, 9:43 AM IST
Highlights
  •  ರಾಜ್ಯದ ಸಶಸ್ತ್ರ ಮೀಸಲು ಪಡೆಗಳ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ
  • ಐದು ವರ್ಷಗಳ ಸೇವಾವಧಿ ಪೂರೈಸಿದ ಸಶಸ್ತ್ರ ಮೀಸಲು ಪಡೆ ಪೊಲೀಸರಿಗೆ ಇನ್ನು ಮುಂದೆ ಸಿವಿಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಲು  ಸಮ್ಮತಿ

ಬೆಂಗಳೂರು (ಆ.15):  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದ ಹೊತ್ತಿನಲ್ಲಿ ರಾಜ್ಯದ ಸಶಸ್ತ್ರ ಮೀಸಲು ಪಡೆಗಳ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಐದು ವರ್ಷಗಳ ಸೇವಾವಧಿ ಪೂರೈಸಿದ ಸಶಸ್ತ್ರ ಮೀಸಲು ಪಡೆ ಪೊಲೀಸರಿಗೆ ಇನ್ನು ಮುಂದೆ ಸಿವಿಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಸಮ್ಮತಿಸಿದೆ.

ತನ್ಮೂಲಕ ಕೆಎಸ್‌ಆರ್‌ಪಿ, ಸಿಎಆರ್‌ ಹಾಗೂ ಡಿಎಎಆರ್‌ ವಿಭಾಗದ ಪೊಲೀಸರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ‘ಐಕ್ಯತೆ ಮತ್ತು ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯ ಓಟ’ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಪ್ರಕಟಿಸಿದರು.

KSRP ಪೊಲೀಸರಿಗೆ ಮೂರುವರೆ ವರ್ಷಕ್ಕೇ ಬಡ್ತಿ!

ಸಿವಿಎಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸೇವಾ ಹಿರಿತನ ಆಧಾರದ ಮೇರೆಗೆ ಅವಕಾಶ ನೀಡುವಂತೆ ಸಶಸ್ತ್ರ ದಳದ ಪೊಲೀಸರು ಮನವಿ ಮಾಡಿದ್ದರು. ಈ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಇನ್ಮುಂದೆ ಐದು ವರ್ಷಗಳ ಸೇವೆ ಸಲ್ಲಿಸಿದ ಸಶಸ್ತ್ರ ಮೀಸಲು ಪಡೆ ಪೊಲೀಸರಿಗೆ ಸಿವಿಲ್‌ ವಿಭಾಗಕ್ಕೆ ನಿಯೋಜಿಸಲಾಗುತ್ತದೆ ಎಂದು ಹೇಳಿದರು.

ತೂಕ ಇಳಿಸಿ ಟ್ರಿಮ್ ಆಗಲು ಪೊಲೀಸರಿಗೆ ಗಡುವು

ಕ್ರೀಡಾಪಟುಗಳಿಗೆ ಶೇ.2ರಷ್ಟುಮೀಸಲು: ಅಲ್ಲದೆ, ಪೊಲೀಸರ ನೇಮಕಾತಿಯಲ್ಲಿ ಕೀಡಾ ವಲಯಕ್ಕೆ ಶೇ.2ರಷ್ಟುಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಮುಂದಿನ ವಾರವೇ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಡಿಜಿಪಿ ತಿಳಿಸಿದರು.

ಸಿವಿಲ್‌, ವೈರ್‌ಲೆಸ್‌ ಹಾಗೂ ಬೆರಳಚ್ಚು ಸೇರಿದಂತೆ ಪೊಲೀಸ್‌ ಇಲಾಖೆಯ ಎಲ್ಲ ವಿಭಾಗಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ನುಡಿದರು.

click me!