ವರ್ಕ್ ಫ್ರಂ ಹೋಮ್ ಮುಗಿದು ಆಫೀಸ್ ಗಳ ಕಡೆ ಉದ್ಯೋಗಿಗಳು ಮುಖ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಏನೇನಿದೆ ಈ ಮಾರ್ಗಸೂಚಿಯಲ್ಲಿ?
ಬೆಂಗಳೂರು (ಫೆ.14): ವರ್ಕ್ ಫ್ರಂ ಹೋಮ್ ಮುಗಿದು ಆಫೀಸ್ ಗಳ ಕಡೆ ಉದ್ಯೋಗಿಗಳು ಮುಖ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಕಚೇರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ.
ಸಾಮಾನ್ಯ ಮಾರ್ಗಸೂಚಿ ಹಾಗೂ ನಿರ್ಧಿಷ್ಟ ಮಾರ್ಗಸೂಚಿಗಳನ್ನು ಉದ್ಯೋಗಿಗಳ ಹಿತದೃಷ್ಟಿಯಿಂದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.
ಸಾಮಾನ್ಯ ಮಾರ್ಗಸೂಚಿ
- ವ್ಯಕ್ತಿ ಇಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು
- ಮೂಗು, ಬಾಯಿ ಮುಚ್ಚಿರುವಂತೆ ಮಾಸ್ಕ್ ಬಳಕೆ ಕಡ್ಡಾಯ, ಆಫೀಸ್ ನಲ್ಲಿ ಇರುವ ಸಂಪೂರ್ಣ ಸಮಯದವರೆಗೂ
- ಸ್ಯಾನಿಟೈಸರ್ ಬಳಸಬೇಕು ಅಥವಾ ಸೋಪ್ ಬಳಸಿ ಆಗಾಗ ಕೈ ತೊಳೆಯಬೇಕು
- ಬಳಸಿದ ಟಿಶ್ಯುಗಳನ್ನ ಸರಿಯಾಗಿ ವಿಲೇವಾರಿ ಮಾಡಬೇಕು
- ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಆಫೀಸ್ ಸೂಪರ್ ವೈಸರ್ ಗೆ ಹೇಳಬೇಕು
- ಆಫೀಸ್ ವ್ಯಾಪ್ತಿಯಲ್ಲಿ ಉಗುಳುವುದು ನಿಷಿದ್ಧ
- ಕಂಪೆನಿ ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು ಆ್ಯಪ್ ಬಳಸಬೇಕು
ಮಹಾಮಾರಿ ಕೊರೋನಾಗೆ ಹಿರಿಯರೇ ಹೆಚ್ಚು ಬಲಿ..!
ನಿರ್ಧಿಷ್ಟ ಮಾರ್ಗಸೂಚಿ
- ಆಫೀಸ್ ಪ್ರವೇಶ ವೇದ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
- ಯಾವುದೇ ರೋಗದ ಲಕ್ಷಣಗಳು ಇಲ್ಲದವರಿಗೆ ಮಾತ್ರ ಆಫೀಸ್ ಹೆ ಎಂಟ್ರಿ
- ಕಂಟೈನ್ ಮೆಂಟ್ ಜೋನ್ ನಲ್ಲಿರುವ ಉದ್ಯೋಗಿ ಕಚೇರಿಗೆ ಬರುವಂತಿಲ್ಲ
- ಕಂಪೆನಿಯ ಚಾಲಕರು ಕೂಡ ಅಂತರ ಕಾಪಾಡಿಕೊಳ್ಳಬೇಕು
ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ? .
- ದಿನಕ್ಕೆ ಎರಡು ವಾರಿ ಸೋಡಿಯಂ ಹೈಪೋಕ್ಲೋರೈಡ್ ಬಳಸಿ ಆಫೀಸ್ ಫ್ಲೋರ್ ಸ್ಯಾನಿಟೈಸ್ ಮಾಡುವುದು
- ಮೀಟಿಂಗ್ ಗಳನ್ನ ಆದಷ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಡುವುದು