Jobs in BMTC: ಬಿಎಂಟಿಸಿಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಸಲ್ಲಿಸಿ

By Suvarna News  |  First Published Nov 30, 2021, 9:41 PM IST

* ಬಿಎಂಟಿಸಿಯಲ್ಲಿ ಕೆಲಸ ಖಾಲಿ ಇದೆ
* ಜಾವಾ ಡೆವಲಪರ್‌ಗಳನ್ನು ಒಂದು ವರ್ಷದ ಅವಧಿಗೆ ನೇಮಕ
* ಸಾಫ್ಟ್ ವೇರ್ ಪ್ರೋಗ್ರಾಮರ್ ಎರಡು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ


ಬೆಂಗಳೂರು (ನ. 30) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ( Bengaluru Metropolitan Transport Corporation – BMTC ) ಖಾಲಿ ಇರುವಂತ ಸಾಫ್ಟ್ ವೇರ್ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.

ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು,  ಬೆಂ.ಮ.ಸಾ ಸಂಸ್ಥೆಯಲ್ಲಿ ಖಾಲಿ ( BMTC Jobs ) ಇರುವಂತ ಸಾಫ್ಟ್ ವೇರ್ ಪ್ರೋಗ್ರಾಮರ್ ಎರಡು ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

Latest Videos

undefined

ಅರ್ಜಿ ಸಲ್ಲಿಸುವಂತ ಅರ್ಹ ಅಭ್ಯರ್ಥಿಗಳು  2+ ವರ್ಷಗಳ ಅನುಭವವುಳ್ಳ B.E(CS/IS/EC)/B.Tech/MCA ವಿದ್ಯಾರ್ಹತೆ ಹೊಂದಿರಬೇಕು. ಈ ಜಾವಾ ಡೆವಲಪರ್‌ಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.

2+ ವರ್ಷಗಳ ಅನುಭವವುಳ್ಳ B.E(CS/IS/EC)/Btech/MCA ವಿದ್ಯಾರ್ಹತೆ ಹೊಂದಿರುವ 2 ಜಾವಾ ಡೆವಲಪರ್‌ಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ 'ಸಾಫ್ಟ್‌ವೇರ್ ಪ್ರೋಗ್ರಾಮರ್' ಆಗಿ ನೇಮಿಸಿಕೊಳ್ಳಲು ಬಯಸಿದ್ದು. ಆಸಕ್ತ ಅಭ್ಯರ್ಥಿಗಳು systemsupervisor@mybmtc.com ಗೆ ವಿವರ ಸಲ್ಲಿಕೆ ಮಾಡಬಹುದು. 

ರೈಲ್ವೆಯಲ್ಲಿ ಕೆಲಸ ಖಾಲಿ ಇದೆ:  ಆಗ್ನೇಯ ರೈಲ್ವೆ(South Eastern Railway)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 520 ಗೂಡ್ಸ್ ಗಾರ್ಡ್(Goods Guard) ಹುದ್ದೆಗಳು ಖಾಲಿ ಇದ್ದು, ಆಗ್ನೇಯ ರೈಲ್ವೆ(South Eastern Railway)ವಲಯವು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಈ ನೇಮಕಾತಿ‌ ಪ್ರಕ್ರಿಯೆ ಆರಂಭಿಸಿದೆ. ಪದವೀಧರರು(Degree Candidates) ಈ ಗೂಡ್ಸ್ ಗಾರ್ಡ್(Goods Guard) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬಿಎ, ಬಿ.ಕಾಂ, ಬಿಎಸ್ ಸಿ ಸೇರಿದಂತೆ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅರ್ಹತೆ‌ ಹೊಂದಿರುತ್ತಾರೆ. 

MECON ನೇಮಕಾತಿ: ಮ್ಯಾನೇಜರ್‌ ಹುದ್ದೆಗಳಿ ಅರ್ಜಿ ಆಹ್ವಾನ

ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಗ್ನೇಯ ರೈಲ್ವೆಯ (South Eastern Railway-SER) ಅಧಿಕೃತ ವೆಬ್ಸೈಟ್ ser.indianrailways.gov.in ಗೆ ಭೇಟಿ ನೀಡಿ,  ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಂತೆ ಮಾಹಿತಿ ತಿಳಿಯಬಹುದು. 

ಆಗ್ನೇಯ ರೈಲ್ವೆಯು 520 ಗೂಡ್ಸ್ ಗಾರ್ಡ್ ಹುದ್ದೆಗಳ ಪೈಕಿ ಸಾಮಾನ್ಯ ವರ್ಗ( General Catagory) ಕ್ಕೆ 277 ಹುದ್ದೆಗಳು, ಪರಿಶಿಷ್ಟ ಜಾತಿ (SC)126 ಹುದ್ದೆಗಳು, ಪರಿಶಿಷ್ಟ ಪಂಗಡಗಳು (ST)-30 ಹುದ್ದೆಗಳು, ಹಿಂದುಳಿದ ವರ್ಗ (OBC)-87 ಹುದ್ದೆಗಳನ್ನ ಮೀಸಲಿಟ್ಟಿದೆ. 

ಗೂಡ್ಸ್ ಗಾರ್ಡ್(Goods Guard) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.ಗೂಡ್ಸ್ ಗಾರ್ಡ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ. ಅಂದರೆ 7ನೇ ವೇತನ ಆಯೋಗದ ಅನ್ವಯ ಮಾಸಿಕ ₹5200 ರಿಂದ 20,200 ರೂ, ವರೆಗೆ ವೇತನ ಕೊಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆಯಾದ ಅರ್ಹತೆಯ ಪ್ರಕಾರ ಅಭ್ಯರ್ಥಿಯ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿದ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು.

ಅಭ್ಯರ್ಥಿಗಳು ಆಗ್ನೇಯ ರೈಲ್ವೆಯ ser.indianrailways.gov.in ಗೆ ಭೇಟಿ ನೀಡಿ. ಬಳಿಕ GDSE ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ಉಲ್ಲೇಖಿಸಲಾದ ಹಂತಗಳನ್ನು ಅನುಸರಿಸಿ ಮತ್ತು ವಿವರಗಳನ್ನು ಭರ್ತಿ ಮಾಡಿ. ಡಾಕ್ಯುಮೆಂಟ್ ಪ್ರೂಫ್ ಅನ್ನು ಕೇಳಿದಾಗಲೆಲ್ಲಾ ಅಪ್‌ಲೋಡ್ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಅಭ್ಯರ್ಥಿಗಳು ತಮ್ಮ ಕೆಲಸ ಮಾಡುವ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸವನ್ನು ಬಳಸಲು ಸೂಚಿಸಲಾಗಿದೆ. ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ಘೋಷಣೆಗೆ ಸಂಬಂಧಿಸಿದಂತೆ, ಪ್ರಿವಿವ್ಯೂ ಬಟನ್ ಕ್ಲಿಕ್ ಮಾಡಿ. ಅರ್ಜಿಯನ್ನು ಸಲ್ಲಿಸಿದ ನಂತರ, ಆನ್‌ಲೈನ್ ಪರಿಶೀಲನೆಗಾಗಿ ಅರ್ಜಿಯನ್ನು ಆಯಾ ವಿಭಾಗಗಳು/ಘಟಕಗಳು/ವರ್ಕ್‌ಶಾಪ್‌ಗಳು/HQ ಗೆ ಕಳುಹಿಸಲಾಗುತ್ತದೆ.

click me!