ಯಾವುದೇ ಆಫರ್ ಇರದಿದ್ರೂ 1 ಕೋಟಿ ಸಂಬಳದ ಕೆಲಸಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ಟೆಕ್ಕಿ

By Mahmad Rafik  |  First Published Dec 7, 2024, 1:51 PM IST

ಬೆಂಗಳೂರಿನ ಟೆಕ್ಕಿಯೊಬ್ಬರು 1 ಕೋಟಿ ರೂ.ಗೂ ಅಧಿಕ ಸಂಬಳದ ಕೆಲಸವನ್ನು ಬಿಟ್ಟಿದ್ದಾರೆ. ಯಾವುದೇ ಆಫರ್ ಇಲ್ಲದೆ ಕೆಲಸ ತೊರೆದ ಟೆಕ್ಕಿಯ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 


ಬೆಂಗಳೂರು: ಈಗಿರುವ ಕೆಲಸ ಬಿಡಬೇಕು ಅಂದ್ರೆ ಕೈಯಲ್ಲಿ ಹೊಸ ಉದ್ಯೋಗದ ಆಫರ್ ಲೆಟರ್ ಇರಬೇಕು. ಒಂದು ತಿಂಗಳ ಕೆಲಸ ಇರದಿದ್ದರೆ ಈ ದುಬಾರಿ ದುನಿಯಾದಲ್ಲಿ ಬದುಕು ಕಷ್ಟವಾಗುತ್ತದೆ. ಆದ್ರೆ ಬೆಂಗಳೂರಿನ ಟೆಕ್ಕಿಯೋರ್ವ ಕೈಯಲ್ಲಿ ಯಾವುದೇ ಆಫರ್ ಇರದಿದ್ದರೂ 1 ಕೋಟಿ ರೂಪಾಯಿ ಸಂಬಳಕ್ಕೆ ವಿದಾಯ ಹೇಳಿದ್ದಾರೆ. ಇದೀಗ ಟೆಕ್ಕಿ ಎಕ್ಸ್ ಖಾತೆಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹೊಸ ಚರ್ಚಗೆ ಕಾರಣವಾಗಿದೆ.  30 ವರ್ಷದ ವರುಣ್ ಹಸಿಜಾ ಎಂಬವರು ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಳೆದ 10 ವರ್ಷದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. 

ಇದೀಗ 1 ಕೋಟಿಗೂ ಅಧಿಕ ಸಂಬಳ ನೀಡುತ್ತಿದ್ದ ಕಂಪನಿಯನ್ನು ತೊರೆದಿರುವ ವರುಣ್, ತಮ್ಮ ನಿರ್ಧಾರವನ್ನು ಎಕ್ಸ್  ಖಾತೆಯಲ್ಲಿ ಬರೆದುಕೊಂಡದ್ದಾರೆ. ವರುಣ್ ತೆಗೆದುಕೊಂಡು ನಿರ್ಧಾರ ಬೆಂಗಳೂರು ಸೇರಿದಂತೆ ದೇಶದ ಹಲವು ಟೆಕ್ಕಿಗಳನ್ನು ಅಚ್ಚರಿಗೊಳಿಸಿದೆ. ಹಾಗಾದ್ರೆ ವರುಣ್ ಹಸಿಜಾ 1 ಕೋಟಿ ರೂಪಾಯಿ ಸಂಬಳದ ಕೆಲಸ ತೊರೆದಿದ್ಯಾಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. 

Tap to resize

Latest Videos

ಕೆಲಸ ಬಿಟ್ಟಿದ್ಯಾಕೆ ವರುಣ್?
ಕೆಲ ತಿಂಗಳ ಹಿಂದೆ ನನ್ನ ಜೀವನದ ಅತ್ಯಂತ ಕಠಿಣ  ಮತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾನು ನನ್ನ ಆರಾಮದಾಯಕ ಮತ್ತು ಅತ್ಯಧಿಕ ಸಂಬಳದ (1 ಕೋಟಿಗೂ ಅಧಿಕ) ಕೆಲಸವನ್ನು ಬಿಟ್ಟಿದ್ದೇನೆ. ಯಾವುದೇ  ಬ್ಯಾಕ್‌ಅಪ್ ಪ್ಲಾನ್ ಇಲ್ಲ. ಬೇರೆ ಕಂಪನಿಯ ಕೆಲಸದ ಆಫರ್ ಸಹ ನನ್ನ ಬಳಿ ಇಲ್ಲ. ಸುದೀರ್ಘ ಒಂದು ದಶಕದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ರೇಕ್ ಬೇಕು ಅನ್ನಿಸಿದೆ. ಹಾಗಾಗಿ ಈ ನಿರ್ಧಾರ ಎಂದು ವರುಣ್ ಹಸಿಜಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮುಂದುವರಿದು ಈ ನಿರ್ಧಾರ ದಿಢೀರ್ ಆಗಿ ತೆಗೆದುಕೊಂಡಿದ್ದಲ್ಲ. ಇಷ್ಟು ವರ್ಷಗಳಲ್ಲಿ ಎಲ್ಲಿ ಮತ್ತು ಹೇಗೆ ಕೆಲಸ ಮಾಡಬೇಕು ಎಂಬ ನಿಯಮ ಮಾಡಿಕೊಂಡಿದ್ದೆ. ಇದಕ್ಕಾಗಿ ನಾನೇ ಸಂತೋಷ, ಪ್ರತಿಫಲ ಮತ್ತು ಹಣ ಗಳಿಸೋದು (Happiness, Impact and Wealth Creation) ಎಂಬ ಚೌಕಟ್ಟನ್ನು ಹಾಕಿಕೊಂಡಿದ್ದೆ.  ಇದೀಗ ಕೆಲಸ ತೊರೆಯಲು ಈ 3 ಚೌಕಟ್ಟುಗಳು ಹೇಗೆ ಕಾರಣವಾದವು ಎಂಬುದನ್ನು ಸಹ ವರುನ್ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:  ಚಿನ್ನದ ಬೆಲೆ ಇಳಿಕೆ ಯಾವಾಗ ಪ್ರಶ್ನೆಗೆ ಉತ್ತರಿಸಿದ ಆರ್ಥಿಕ ತಜ್ಞ, ಎಷ್ಟು ಕಡಿಮೆಯಾಗುತ್ತೆ ಅಂತಾನೂ ಹೇಳಿದ್ರು!

P1:ಸಂತೋಷ-Happiness
ದಿನದ 24 ಗಂಟೆಗಲ್ಲಿ ಶೇ.80ರಷ್ಟು ಸಮಯವನ್ನು ಕೆಲಸ ಮಾಡೋದರಲ್ಲಿಯೇ ಕಳೆಯುತ್ತೇವೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿ ಸಂತೋಷ ಇಲ್ಲದಿದ್ದರೆ ಏನು ಮಾಡೋದು? ನನ್ನ ಪ್ರಕಾರ ಕೆಲಸಕ್ಕಾಗಿ ಸಂತೋಷವನ್ನು ನಿರ್ಲಕ್ಷ್ಯಿಸಲು ಆಗಲ್ಲ. ಕೆಲಸ ವಾತಾವರಣ ಚೆನ್ನಾಗಿರಬೇಕಾಗುತ್ತದೆ.
P2:ಪ್ರತಿಫಲ-Impact
ನಮ್ಮ ಕೆಲಸವು ಗ್ರಾಹಕರು, ವ್ಯಾಪಾರ ಅಥವಾ ಎರಡರ  ಮೌಲ್ಯವನ್ನು ಸೃಷ್ಟಿಸಬೇಕಾಗುತ್ತದೆ. ಸಂತೋಷದಿಂದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು, ತಂಡವನ್ನು ಮುನ್ನಡೆಸಿದಾಗ ಹೆಚ್ಚಾಗುವ ಆದಾಯ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ.  
P3:ಹಣ ಗಳಿಸೋದು-Wealth Creation
ಸಂತೋಷ, ಪ್ರತಿಫಲ ಮತ್ತು ಸಂಪತ್ತು ಒಂದೇ ಕೆಲಸದಲ್ಲಿ ಕಾಣಳು ಸಿಗಲ್ಲ. ನನ್ನ ಕೆಲಸದಲ್ಲಿ ಸಂತೋಷ ಮತ್ತು ಪ್ರತಿಫಲ ಇರಲಲ್ಲ. ಯಾವುದಕ್ಕೆ ಅದ್ಯತೆ  ನೀಡಬೇಕೆಂದು ನೀವು ನಿರ್ಧರಿಸಿ ಎಂದು ವರುಣ್ ಹೇಳಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನ ಉಬರ್ ಬೈಕ್ ಚಾಲಕನ ಸಂಬಳ ಕೇಳಿ ಸಿಲಿಕಾನ್ ಸಿಟಿ ಮಂದಿ ಫುಲ್ ಶಾಕ್

ವರುಣ್ ಹಸಿಜಾ ಟ್ವೀಟ್‌ಗೆ ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ. ಕೆಲಸದ ವಾತಾವರಣ ಮತ್ತು ನಮ್ಮ ಕೆಲಸಕ್ಕೆ ಸಿಗುವ ಪ್ರತಿಫಲ ಸಹ ಉದ್ಯೋಗಿಯ ಮೇಲೆ ಪರಿಣಾಮ ಬೀರುತ್ತದೆ. ಎಷ್ಟೇ ಸಂಬಳ ಸಿಕ್ಕರೂ ಮಾಡುವ ಕೆಲಸದಲ್ಲಿ ಆಸಕ್ತಿ ಮತ್ತು ಸಂತೋಷ ಕಾಣದಿದ್ದರೆ ಏನು ಪ್ರಯೋಜನ ಎಂಬ ಮಾತು ಸಹ ಕೇಳಿ ಬಂದಿದೆ.

A couple of months ago, I made one of the hardest decisions of my life: I left my cushy, high-paying (₹1 Cr+) job without another offer in hand.

No plan. No backup. Just the decision that I needed a break—a real one—for the first time in my decade-long career.

— Varun Hasija (@warunhasija)

It wasn’t impulsive. Over the years, I’ve followed a structured framework for choosing where to work and what roles to take on.

P0: Happiness
P1: Impact
P2: Wealth creation

— Varun Hasija (@warunhasija)

P0 - Happiness

Out of the 24 hours we have in a day we spend ~80% of our conscious hours at work.

If your workplace doesn’t bring you bliss, excitement, or joy, is it even worth it?

For me, happiness at work is non-negotiable. Without it, nothing else works.

— Varun Hasija (@warunhasija)

P1 - Impact

The work I do must create value—for customers, the business, or both.

I’ll happily spend hours solving a business client’s issue to unlock in revenue myself and/or lead a team of PMs/Devs to launch a potential cash-cow feature.

Impact keeps me going.

— Varun Hasija (@warunhasija)

It’s rare to find all three—Happiness, Impact, and Wealth Creation—in one place.

So, you prioritize. For me, its been in the above order since quite some time now.

And at my last job, P0 and P1 were missing for me.

— Varun Hasija (@warunhasija)
click me!