
ಬೆಂಗಳೂರು (ಫೆ.27): ಬೆಂಗಳೂರು ಮೂಲದ ಕಂಪನಿಯೊಂದು "ಪ್ರತಿ ಮನುಷ್ಯನಿಗೂ ರಿಯಲ್‌ಟೈಮ್ ಎಐ' ನಿರ್ಮಾಣ ಮಾಡಲು' "ಕ್ರ್ಯಾಕ್ಡ್ ಫುಲ್-ಸ್ಟ್ಯಾಕ್ ಎಂಜಿನಿಯರ್" ಅನ್ನು ನೇಮಿಸಿಕೊಳ್ಳಲು ಎದುರು ನೋಡುತ್ತಿದೆ. ಅದಕ್ಕಾಗಿ ಕಂಪನಿ ನೀಡಿರುವ ಜಾಹೀರಾತು ಈಗ ಗಮನಸೆಳೆದಿದೆ. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಬಯಸುವವರು ಯಾವುದೇ ದೊಡ್ಡ ಕಾಲೇಜಿನಲ್ಲಿ ಡಿಗ್ರಿ ಪಡೆದುಕೊಂಡಿರಬೇಕಿಲ್ಲ. ಅತ್ಯಂತ ಸ್ಟ್ಯಾಂಡರ್ಡ್ ಆಗಿ ರೆಸ್ಯೂಮ್ ಅನ್ನೂ ಸಿದ್ದ ಮಾಡಿ ಕಳಿಸಬೇಕಿಲ್ಲ. ಯಾವುದೇ ಅನುಭವವಿಲ್ಲದ ಹೊಸಬರು ಹಾಗೂ ಈ ಕ್ಷೇತ್ರದಲ್ಲಿ ಎರಡು ವರ್ಷಗಳವರೆಗೆ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಅತ್ಯಂತ ಸರಳವಾಗಿದೆ. ಕೇವಲ 100 ಪದಗಳಲ್ಲಿ ನಿಮ್ಮನ್ನು ಪರಿಚಯಿಸಿಕೊಳ್ಳುವ ಮತ್ತು ನಿಮ್ಮ ಅತ್ಯುತ್ತಮ ಕೆಲಸವನ್ನು ಹಂಚಿಕೊಂಡರೆ ಸಾಕಾಗುತ್ತದೆ.
ಇನ್ನು ಈ ಕೆಲಸಕ್ಕೆ ಕಂಪನಿ ವಾರ್ಷಿಕವಾಗಿ 40 ಲಕ್ಷ ರೂಪಾಯಿಯ ಪ್ಯಾಕೇಜ್ ನೀಡಲಿದ್ದು, ವಾರದಲ್ಲಿ ಐದು ದಿನಗಳ ಕಾಲ ಕೆಲಸ ಇರಲಿದೆ.ಇನ್ನು ವರ್ಕ್ ಫ್ರಮ್ ಆಫೀಸ್ ಮಾದರಿಯಲ್ಲಿ ಕೆಲಸ ಮಾಡಬೇಕಿದೆ.
ಎಕ್ಸ್‌ನಲ್ಲಿ ಈ ಬಗ್ಗೆ ಕಾಮತ್ ಸೂತ್ರ ( @kamath_sutra) ಎನ್ನುವ ಯೂಸರ್ ಪೋಸ್ಟ್ ಮಾಡಿದ್ದು, 'ನಾವು @smallest_AI ನಲ್ಲಿ ಕ್ರ್ಯಾಕ್ಡ್ ಫುಲ್-ಸ್ಟಾಕ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಲು ಎದುರು ನೋಡುತ್ತಿದ್ದೇವೆ.' ಎಂದು ಬರೆದಿದ್ದಾರೆ.
ಸಂಬಳ CTC: 40 LPA
ಸಂಬಳದ ಮೂಲ: 15-25 LPA
ಸಂಬಳ ESOP: 10-15 LPA
ಸೇರ್ಪಡೆ: ತಕ್ಷಣ
ಸ್ಥಳ: ಬೆಂಗಳೂರು (ಇಂದಿರಾನಗರ)
ಅನುಭವ: 0-2 ವರ್ಷಗಳು
ಕಚೇರಿಯಿಂದ ಕೆಲಸ : ವಾರದಲ್ಲಿ 5 ದಿನಗಳು
ಕಾಲೇಜು: ಪರವಾಗಿಲ್ಲ
ರೆಸ್ಯೂಮ್: ಅಗತ್ಯವಿಲ್ಲ
ನಿಮ್ಮನ್ನು ಪರಿಚಯಿಸುವ 100 ಪದಗಳ ಸಣ್ಣ ಪಠ್ಯವನ್ನು ಮತ್ತು ನಿಮ್ಮ ಅತ್ಯುತ್ತಮ ಕೆಲಸಕ್ಕೆ ಲಿಂಕ್‌ಗಳನ್ನು info@smallest.ai ಗೆ ಕಳುಹಿಸಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಇನ್ಫೋಸಿಸ್ ಅಮಾನತು ಉದ್ಯೋಗಿಗಳಿಂದ ಪ್ರಧಾನಿ ಕಚೇರಿಗೆ ಮನವಿ, ಐಟಿ ಕಂಪನಿಗೆ 2ನೇ ನೋಟಿಸ್
ಜನರ ಪ್ರತಿಕ್ರಿಯೆ ಹೇಗಿತ್ತು: ಎಕ್ಸ್‌ನಲ್ಲಿ ಈ ಬಗ್ಗೆ ಯೂಸರ್ ಬರೆದುಕೊಂಡಿದ್ದು, ''ಇಲ್ಲಿ ಆಕರ್ಷಕವಾದ ವಿಷಯವೆಂದರೆ ಇಂದಿರಾನಗರ ಮತ್ತು ಕಾಲೇಜು ಮುಖ್ಯವಲ್ಲ' ಅನ್ನೋ ವಿಚಾರ ಎಂದಿದ್ದಾರೆ. 'ಎಲ್ಲರೂ ಒಬ್ಬ ಕ್ರ್ಯಾಕ್ಡ್ ಎಂಜಿನಿಯರ್ ಅನ್ನು ಬಯಸುತ್ತಾರೆ. ನಾನು ಕ್ರ್ಯಾಕ್ಡ್ ಅಲ್ಲ ಆದರೆ ಖಂಡಿತವಾಗಿಯೂ ನಿಮ್ಮ ಕಂಪನಿ ಬೆಳೆಯಲು ಸಹಾಯ ಮಾಡಬಹುದು. ಜೊತೆಗೆ ನನಗೆ ಕಾಲೇಜು ಪದವಿ ಮತ್ತು 2+ ವರ್ಷಗಳ ಅನುಭವವಿದೆ' ಎಂದು ಬರೆದಿದ್ದಾರೆ. ''ಅದ್ಭುತ! ಭವಿಷ್ಯದ ನೇಮಕಾತಿಗಳು ಹೀಗೆಯೇ ನಡೆಯುತ್ತವೆ'' ಎಂದು ಮತ್ತೊಬ್ಬ ಯೂಸರ್ ಬರೆದಿದ್ದಾರೆ.
ಎಸ್‌ಎಸ್ ರಾಜಮೌಳಿಗೆ ಭಾರೀ ಸಂಕಷ್ಟ, ಆಪ್ತಮಿತ್ರನ ಡೆತ್ ನೋಟ್ ಪತ್ತೆ, ಆ ವ್ಯಕ್ತಿ ನಾಪತ್ತೆ..!