BECIL Recruitment 2022: ಖಾಲಿ ಇರುವ 86 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published May 17, 2022, 12:33 PM IST

ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ 86  ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು,   ಅರ್ಜಿ ಸಲ್ಲಿಸಲು ಮೇ.22 ಕೊನೆಯ ದಿನವಾಗಿದೆ. 
 


ಬೆಂಗಳೂರು (ಮೇ.17): ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (Broadcast Engineering Consultants India Limited) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಒಟ್ಟು 86 ಡಾಟಾ ಎಂಟ್ರಿ ಆಪರೇಟರ್  (Data Entry Operator) ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ. 22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.becil.com ಆಸಕ್ತರು ಭೇಟಿ ನೀಡಬಹುದು. 

ಶೈಕ್ಷಣಿಕ ವಿದ್ಯಾರ್ಹತೆ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಪದವಿ ಪಾಸ್ ಮಾಡಿರಬೇಕು. ಅಭ್ಯರ್ಥಿಗಳಿಗೆ ಟೈಪಿಂಗ್ ಜ್ಞಾನವಿರಬೇಕು. ಒಂದು ನಿಮಿಷಕ್ಕೆ 35 ಪದಗಳನ್ನು ಟೈಪಿಸುವ ಸಾಮರ್ಥ್ಯ ಇರಬೇಕು. ಎಂಎಸ್ ವರ್ಲ್ಡ್‌, ಪವರ್‌ಪಾಯಿಂಟ್ ಮತ್ತು ಎಕ್ಸೆಲ್‌ ಜ್ಞಾನ ಹೊಂದಿರಬೇಕು.

Latest Videos

undefined

CBSE TERM 2 RESULT ಜೂನ್ ಅಂತ್ಯದೊಳಗೆ ಎರಡನೇ ಅವಧಿಯ ಫಲಿತಾಂಶ ಪ್ರಕಟ

ವಯೋಮಿತಿ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ನಿಗದಿಯಾಗಿದೆ.  ಸರಕಾರದ ನಿಯಮಗಳ ಅನುಸಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಟೈಪಿಂಗ್ ಟೆಸ್ಟ್‌ಗೆ ಆಹ್ವಾನಿಸಲಾಗುತ್ತದೆ. ಕಂಪ್ಯೂಟರ್ / ಲಿಖಿತ ಪರೀಕ್ಷೆಯನ್ನು ಸಹ ಜೆನೆರಲ್ ಅವಾರ್ನೆಸ್, ಪ್ರಚಲಿತ ವಿದ್ಯಮಾನಗಳ ಕುರಿತು, ಇಂಗ್ಲಿಷ್ ವ್ಯಾಕರಣ ಕುರಿತು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಇನ್ನೆರಡು ದಿನದಲ್ಲಿ SSLC Exam Results ಪ್ರಕಟ

ಅರ್ಜಿ ಶುಲ್ಕ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/ OBC/ ಮಾಜಿ ಸೈನಿಕ ಮತ್ತು ಮಹಿಳಾ  ಅಭ್ಯರ್ಥಿಗಳು ₹750 ಹಾಗೂ SC / ST / EWS / PH ಅಭ್ಯರ್ಥಿಗಳು ₹450 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ವೇತನ: ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್  ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ ₹21,184 ರೂ ವೇತನ ದೊರೆಯಲಿದೆ.

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh 

ವಿವಿಧ 261 ಹುದ್ದೆಗಳಿಗೆ ಕೊಚ್ಚಿನ್ ಶಿಪ್‌ಯಾರ್ಡ್‌ ನೇಮಕಾತಿ: ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ (Cochin Shipyard Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ  ಪ್ರಕಟಿಸಲಾಗಿದೆ. ಹಿರಿಯ ಶಿಪ್ ಡ್ರಾಫ್ಟ್‌ಸ್ಮನ್ (Senior Ship Draftsman), ಕಿರಿಯ ತಂತ್ರಜ್ಞ ಸಹಾಯಕ (Jr.Technical Assistant), ಸಹಾಯಕ (Assistant) ಹಾಗೂ ವಿವಿಧ 261 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಈ ಹುದ್ದೆಗಳಿಗೆ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 06, 2022 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ cochinshipyard.in ಗೆ ಭೇಟಿ ನೀಡಬಹುದು.

click me!