ಬ್ಯಾಂಕ್ ಆಫ್ ಬರೋಡಾದಲ್ಲಿ 837 ಹುದ್ದೆಗೆ ಅರ್ಜಿ ಆಹ್ವಾನ, ಈ ಅರ್ಹತೆಗಳಿದ್ರೆ ಉದ್ಯೋಗ ಫಿಕ್ಸ್!

Published : Nov 06, 2026, 05:14 PM IST
Bank of Baroda

ಸಾರಾಂಶ

ಬ್ಯಾಂಕ್ ಆಫ್ ಬರೋಡಾ 2026ನೇ ಸಾಲಿನ ಹಿರಿಯ ಸಂಬಂಧ ವ್ಯವಸ್ಥಾಪಕ ಸೇರಿದಂತೆ 837 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ನವೆಂಬರ್ 24, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಪಡೆಯಬೇಕು ಎಂಬ ಕನಸು ಹೊಂದಿರುವ ಪದವೀಧರರಿಗೆ ಪ್ರಮುಖ ಉದ್ಯೋಗಾವಕಾಶವಿದೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda) 2026ನೇ ಸಾಲಿನ ಹಿರಿಯ ಸಂಬಂಧ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ

ಒಟ್ಟು ಹುದ್ದೆಗಳು: 837

ಹುದ್ದೆಗಳ ಹೆಸರು ಹಿರಿಯ ಸಂಬಂಧ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳು

ಉದ್ಯೋಗ ಸ್ಥಳ: ಅಖಿಲ ಭಾರತ

ಹುದ್ದೆಯ ಹೆಸರು: ಹುದ್ದೆಗಳ ಸಂಖ್ಯೆ

ಸಹಾಯಕ ಉಪಾಧ್ಯಕ್ಷ II: 8

ಸಹಾಯಕ ಉಪಾಧ್ಯಕ್ಷ II: 1

ಸಹಾಯಕ ಉಪಾಧ್ಯಕ್ಷ I: 35

ಸಹಾಯಕ ಉಪಾಧ್ಯಕ್ಷ I: 2

ಹಿರಿಯ ಸಂಬಂಧ ವ್ಯವಸ್ಥಾಪಕ: 791

ಒಟ್ಟು 837

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಭ್ಯರ್ಥಿಯು ನವೆಂಬರ್‌ 12026ಕ್ಕೆ ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ

ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ

ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷ

ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು

ಅರ್ಜಿ ಶುಲ್ಕ:

ವರ್ಗ ಅರ್ಜಿ ಶುಲ್ಕ

ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ: ₹850

ಎಸ್‌ಸಿ/ಎಸ್‌ಟಿ/ ಪಿಡಬ್ಲ್ಯೂಬಿಡಿ/ಇಎಸ್‌ಎಂ/ಡಿಇಎಸ್‌ಎಂ ಅಭ್ಯರ್ಥಿಗಳಿಗೆ: ₹175

ಪಾವತಿ ವಿಧಾನ ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಶಾರ್ಟ್‌ಲಿಸ್ಟಿಂಗ್

ಆನ್‌ಲೈನ್ ಪರೀಕ್ಷೆ

ಮನೋಮಾಪನ ಪರೀಕ್ಷೆ

ದಾಖಲೆ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ ಮತ್ತು ಅನುಭವದ ವಿವರಗಳನ್ನು ಓದಿಕೊಳ್ಳಿ.

ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಗತ್ಯವಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.

ಇತ್ತೀಚಿನ ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ನವೆಂಬರ್‌ 4 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್‌ 24 2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್‌ 24 2026

PREV
Read more Articles on
click me!

Recommended Stories

Google exit package : ಉದ್ಯೋಗಿಗಳನ್ನು ತೆಗೆಯೋದಲ್ಲ, ಬಿಡೋಕೆ ಅವಕಾಶ ನೀಡುತ್ತೆ ಗೂಗಲ್ ! ಎಗ್ಸಿಟ್‌ ಪ್ಯಾಕೇಜ್ ನಲ್ಲಿ ಸಿಗೋ ಸಂಬಳ ಎಷ್ಟು?
ಆಫೀಸ್‌ ಗೆ ರಜೆ ಹಾಕಿ ಮನೆಗೆ ಹೋಗಿದ್ದ ಮಹಿಳೆ ಸುಸ್ತೋಸುಸ್ತು ! ಟಾರ್ಚರ್‌ ನೀಡೋದ್ರಲ್ಲಿ ಅಮ್ಮನಿಗಿಂತ ಬಾಸ್‌ ಬೆಸ್ಟ್