ಈ ಮಿಲಿಯನೇರ್ ಜೊತೆ ಸುಮ್ನೆ ಸುತ್ತಾಡಿ: ಸಿಗುತ್ತೆ 25 ಲಕ್ಷ, ಮನೆ ಮತ್ತು ಗಾಡಿ!

Published : Apr 10, 2019, 04:11 PM ISTUpdated : Apr 10, 2019, 04:16 PM IST
ಈ ಮಿಲಿಯನೇರ್ ಜೊತೆ ಸುಮ್ನೆ ಸುತ್ತಾಡಿ: ಸಿಗುತ್ತೆ 25 ಲಕ್ಷ, ಮನೆ ಮತ್ತು ಗಾಡಿ!

ಸಾರಾಂಶ

ಕೋಟ್ಯಾಧಿಪತಿ ಜೊತೆ ಸುಮ್ಮನೆ ಸುತ್ತಾಡಿದ್ರೆ ಸಿಗುತ್ತೆ ಲಕ್ಷ ಲಕ್ಷ ಸಂಬಳ| PA ಹುಡುಕಾಟದಲ್ಲಿರುವ ಉದ್ಯಮಿ ಕೊಟ್ಟಿದ್ದಾರೆ ಆಕರ್ಷಕ ಆಫರ್| ಈ ಸಾಮರ್ಥ್ಯವಿದ್ರೆ ನೀವೂ ಕೂಡಾ ಪ್ರಯತ್ನಿಸಬಹುದು!

ಸಿಡ್ನಿ[ಏ.10]: ದಿನಂಪ್ರತಿ ಹೊಸ ಸ್ಥಳಗಳಿಗೆ, ಊರುಗಳಿಗೆ ಸುತ್ತಾಡುವುದು, ಲಕ್ಷಗಟ್ಟಲೆ ಸಂಬಳ, ಸ್ವಂತ ಮನೆ, ಆರೋಗ್ಯ ವಿಮೆಯೊಂದಿಗೆ ಪ್ರಯಾಣಿಸಲು ಹಣ. ಇವೆಲ್ಲವೂ ಸಿಗುವ ಕೆಲಸದ ಹುಡುಕಾಟದಲ್ಲಿದ್ದರೆ ಇಲ್ಲಿ ನೀಡಲಾದ ವಿಡಿಯೋವನ್ನೊಮ್ಮೆ ನೋಡಲೇಬೇಕು. 26 ವರ್ಷದ ಕೋಟ್ಯಾಧಿಪತಿ ಮ್ಯಾಥ್ಯೂ ಲೇಪರ್  'World's Coolest Job' ಹೆಸರಿನಲ್ಲಿ ಉದ್ಯೋಗಿಗಳ ಹುಡುಕಾಟದಲ್ಲಿದ್ದಾರೆ.

ಆನ್ ಲೈನ್ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮ್ಯಾಥ್ಯೂ ಲೇಪರ್, 4 ಕಂಪೆನಿಗಳ ಮಾಲಿಕ. ಸದ್ಯ ತನ್ನ ತಂಡದ ನಿರ್ವಹಣೆಗಾಗಿ ಸಹಾಯ ಮಾಡಬಲ್ಲ ಪರ್ಸನಲ್ ಅಸಿಸ್ಟೆಂಟ್ ಒಬ್ಬರ ಹುಡುಕಾಟದಲ್ಲಿರುವ ಇವರು 52 ಸಾವಿರ ಡಾಲರ್ ಅಂದರೆ ಸುಮಾರು 25.75 ಲಕ್ಷ ವೇತನ ನೀಡಲು ತಯಾರಿದ್ದಾರೆ.

ಲಕ್ಷಾನುಗಟ್ಟಲೆ ಸಂಬಳದೊಂದಿಗೆ ಅವರ PAಗೆ ಆರೋಗ್ಯ ವಿಮೆ, ಪ್ರಯಾಣ ವೆಚ್ಚ ಹಾಗೂ ಸ್ವಂತ ಮನೆ ಕೂಡಾ ಸಿಗಲಿದೆ. ಲೇಪರ್ ಈ ಉದ್ಯೋಗದ ಜಾಹಿರಾತು ನಿಡುತ್ತಿದ್ದಂತೆಯೇ 40 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವವರಲ್ಲಿ ಶೇ.75ರಷ್ಟು ಮಂದಿ 27ರಿಂದ 37 ವರ್ಷ ವಯೋಮಾನದ ಮಹಿಳಾ ಅಭ್ಯರ್ಥಿಗಳೇ ಇದ್ದಾರೆ ಎಂಬುವುದು ಗಮನಾರ್ಹ.

ಈ ಕೆಲಸ ಸಿಗಬೇಕಾದ್ರೆ ಈ ಸಾಮರ್ಥ್ಯವಿರಬೇಕು:

ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಥ್ಯೂ ಲೇಪರ್ 'ಅಭ್ಯರ್ಥಿಗಳಿಗೆ ಕಂಪ್ಯೂಟರ್ ಕುರಿತಾಗಿ ಉತ್ತಮ ಜ್ಞಾನವಿರಬೇಕು. ಸಾಮಾಜಿಕ ಜಾಲತಾಣ ಬಳಕೆಯಲ್ಲಿ ತಜ್ಞರಾಗಿರಬೇಕು. ಸಂಘಟಿತ, ಹೊಸ ವಿಚಾರಗಳನ್ನು ಕಲಿಯಲು ಉತ್ಸಾಹ ಹಾಗೂ ಮಹತ್ವಾಕಾಂಕ್ಷಿಯಾಗಿರಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಅಭ್ಯರ್ಥಿಗಳಿಗೆ ನಾನು[ಮ್ಯಾಥ್ಯೂ ಲೇಪರ್] ಏನು ಮಾಡುತ್ತೇನೆ ಎಮದು ತಿಳಿದಿರಬೇಕು. ಇದಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ನನ್ನ ಯೂ ಟ್ಯೂಬ್ ವೀಕ್ಷಿಸಿ ನನ್ನ ಬಗ್ಗೆ ತಿಳಿದುಕೊಳ್ಳಬೇಕು' ಎಂದಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

PREV
click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
ಕೋಡಿಂಗ್, ನಿರಂತರ ಮೀಟಿಂಗ್ ನಡೆಸಿ ಬೇಸತ್ತು 30 ಲಕ್ಷ ರೂ ವೇತನದ ಉದ್ಯೋಗ ತೊರೆದ ಚೆನ್ನೈ ಟೆಕ್ಕಿ!